Popular Posts

ಶಿವಶಂಕರ ಟೋಕರೆ ಅವರ ನಾಗರೀಕ ಸನ್ಮಾನ

ಇತ್ತೀಚಿಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು ದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಶಿವಶಂಕರ ಟೋಕರೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಚನ ಸಮೂಹ ಸಂಸ್ಥೆ ಜಂಟಿಯಾಗಿ ಗಾಂಧಿ ಗಂಜ ಹಳೆ ಸಪ್ನಾ ಥೇಟರನ ಶುಭಂ ಕಲ್ಯಾಣ ಮಂಟಪದಲ್ಲಿ ನಾಗರೀಕ ಸನ್ಮಾನವನ್ನು ದಿ.22.02.2026 ರವಿವಾರ ಮುಂ.11 ಗಂಟೆಗೆ ಆಯೋಜಿಸಿದೆ.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕುಲಪತಿಗಳಾದ ಪೆÇ್ರ. ಶರಣಪ್ಪ ವ್ಹಿ ಹಲಸೆ ಮುಖ್ಯ ಅತಿಥಿಗಳಾಗಿ ಐಟಿಐ ಜಂಟಿ ನಿರ್ದೇಶಕರಾದ ವೈಜಗೊಂಡ ಹಾಗೂ ಅಭಿನಂದನ ನುಡಿ ಮಾತನಾಡಲು ಪೆÇ್ರ. ಸಿದ್ದು ಯಾಪಲಪರವಿ ಆಗಮಿಸುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಪೂಜ್ಯ ನಾಡೋಜ ಡಾ ಬಸವಲಿಂಗ ಪಟ್ಟದ್ದೇವರು ಹಾಗೂ ಡಾ ಶಿವಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದು, ಅಧ್ಯಕ್ಷತೆಯನ್ನು ಕ.ಸಾ.ಪ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ವಹಿಸುವರು.
ಜೊತೆಗೆ ಬಿ ಜಿ ಶಟಕಾರ, ಬಸವರಾಜ ಜಾಬಶೆಟ್ಟಿ, ಡಾ ರಜನೀಶ ವಾಲಿ, ಬಾಬು ವಾಲಿ, ಸೋಮನಾಥ ಪಾಟೀಲ, ರಮೇಶ ಪಾಟೀಲ ಸೋಲಾಪೂರ, ರಾಜೇಂದ್ರಕುಮಾರ ಗಂದಗೆ, ಶರಣಪ್ಪ ಮಿಠಾರೆ ಸೇರಿದಂತೆ ಅನೇಕ ಸಂಘಟನೆಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ನಾಗರೀಕ ಸನ್ಮಾನ ಕಾರ್ಯಕ್ರಮಕ್ಕೆ ಬೀದರ ಜಿಲ್ಲೆಯ ಕನ್ನಡ ಬಸವ ಮನಸ್ಸುಗಳು, ವಿಚಾರವಂತರು, ವಿವಿಧ ಸಮಾಜದ ಮುಖಂಡರು, ಚಿಂತಕರು,ಸಾಹಿತಿಗಳು, ಕಲಾವಿದರು, ಮಾಧ್ಯಮದ ಬಂಧುಗಳು ಕಾರ್ಯಕ್ರಮಕ್ಕೆ ಅಗಮಿಸಲು ಕೋರಿದೆ.

Leave a Reply

Your email address will not be published. Required fields are marked *

error: Content is protected !!