1
1

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ : 22/2026 ಕಲಂ 305, 331 (4) ಬಿಎನ್ಎಸ್ ಪ್ರಕರಣದಲ್ಲಿ 03 ಜನ ಅಂತರರಾಜ್ಯ ಕಳ್ಳರನ್ನು ದಸ್ತಗಿರಿ ಮಾಡಿ ಆರೋಪಿಯ ವಶದಿಂದ 320 ಗ್ರಾಂ ಬಂಗಾರದ ಆಭರಣಗಳು, 690 ಗ್ರಾಂ ಬೆಳ್ಳಿಯ ಆಭರಣ ಮತ್ತು ಇತರೆ ವಸ್ತುಗಳು, ನಗದು ಹಣ 5,000/- ರೂ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಟಾಟಾ ವಿಸ್ಟಾ ಕಾರ್ ಹೀಗೆ ಒಟ್ಟು 31,87,500/- ರೂ ಮೌಲ್ಯದ ಮುದ್ದೆ ಮಾಲನ್ನು ಜಪ್ತಿ ಮಾಡಿ 03 ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ
ಪ್ರಕರಣದ ಸಂಕ್ಷೀಪ್ತ ವಿವರ:
ದಿನಾಂಕ 10/03/2026 ರಂದು ಫಿರ್ಯಾದಿ ಶ್ರೀ ರಾಜಕುಮಾರ ಅಣ್ಣಾರಾವ ಪಾಟೀಲ ಸಾ-ಮದನೂರ ಸದ್ಯ ಕಮಲನಗರ ರವರು ಕಮಲನಗರ ಪೊಲೀಸ್ ಠಾಣೆಗೆ ಹಾಜರಾಗಿ ದಿನಾಂಕ 09/03/2026 ರಂದು ರಾತ್ರಿ 09:00 ಗಂಟೆಯಿಂದ ದಿನಾಂಕ 10/03/2026 ರಂದು ಬೆಳಗ್ಗೆ 06:00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಮಲನಗರ ಗ್ರಾಮದ ಎಪಿಎಮ್ಸಿ ಮಾರ್ಕೇಟ ಹತ್ತಿರ ಇರುವ ತಮ್ಮ ಮನೆಯ ಬೀಗವನ್ನು ಮುರಿದು ಮನೆಯಲ್ಲಿ ಪ್ರವೇಶಿಸಿ, ಕಪಾಟಿನ ಲಾಕ ಮುರಿದು ಅದರಲ್ಲಿದ್ದ ಒಟ್ಟು 320 ಗ್ರಾಂ ಬಂಗಾರದ ಆಭರಣಗಳು, 690 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ವಸ್ತುಗಳು ಹಾಗೂ ನಗದು ಹಣ 1,00,000/- ರೂ ಹೀಗೆ ಎಲ್ಲಾ ಸೇರಿ ಒಟ್ಟು 28,32,500/- ರೂ ಮೌಲ್ಯದ ಬೆಳ್ಳಿ, ಬಂಗಾರ, ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರಿನ ಮೇರೆಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 22/2026 ಕಲಂ 305, 331(4) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮುದ್ದೆ ಮಾಲಿನ ಪತ್ತೆ ಕುರಿತು ಮಾನ್ಯ ಶ್ರೀ ಪ್ರದೀಪ್ ಗುಂಟಿ ಐಪಿಎಸ್, ಪೊಲೀಸ್ ಅಧೀಕ್ಷಕರು ಬೀದರ ಮತ್ತು ಶ್ರೀ ಚಂದ್ರಕಾಂತ ಪೂಜಾರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬೀದರ ಹಾಗೂ ಶ್ರೀ ಶಿವಾನಂದ ಪವಾಡಶೇಟ್ಟಿ, ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ರವರ ಮಾರ್ಗದರ್ಶನದಲ್ಲಿ ಶ್ರೀ ಶ್ರೀಕಾಂತ ವಿ ಅಲ್ಲಾಪೂರ ಸಿಪಿಐ ಕಮಲನಗರ ವೃತ್ತ, ಶ್ರೀಮತಿ ಆಶಾ ಪಿಎಸ್ಐ ಕಮಲನಗರ ಠಾಣೆ ಹಾಗೂ ಸಿಬ್ಬಂದಿಯವರಾದ ಶ್ರೀ ಇಮ್ರಾನ ಸಿಹೆಚ್ಸಿ-916, ಶ್ರೀ ರಾಜಪ್ಪಾ ಸಿಎಚ್ಸಿ 980, ಶ್ರೀ ಲೊಕೇಶ ಸಿಎಚ್ಸಿ-915, ಶ್ರೀ ಪರಶುರಾಮ್ ಸಿ.ಪಿ.ಸಿ- 1736, ಶ್ರೀ ಅಂಕುಶ ಸಿಪಿಸಿ 1793, ಶ್ರೀ ಮಲ್ಲಿಕಾರ್ಜುನ ಸಿಪಿಸಿ 1276, ಶ್ರೀ ನರೇಶ ಸಿಪಿಸಿ 1498, ಶ್ರೀ ಭೀಮಸಿಂಗ ರೆಡ್ಡಿ ಸಿಪಿಸಿ 2302, ಶ್ರೀ ವೈಜಿನಾಥ ಸಿಪಿಸಿ 1332, ಶ್ರೀ ನಾಗನಾಥ ಸಿಪಿಸಿ 1014, ಶ್ರೀ ಮಹಾದೇವ ಎಪಿಸಿ 244, ಶ್ರೀ ವಸಂತ ಎಆರ್ಎಸ್ಐ, ಶ್ರೀ ನವೀನ ಸಿಎಚ್ಸಿ 910 ರವರನ್ನೋಳಗೊಂಡ ತಂಡವು ಕಮಲನಗರ ಬಸ್ ಸ್ಟ್ಯಾಂಡ ಹತ್ತಿರ ಅಳವಡಿಸಿರುವ ಎಐ ಕ್ಯಾಮರಾದಲ್ಲಿ ಸಂಶಯಾಸ್ಪದ ಕಾರ ಸೆರೆಯಾದ ಬಗ್ಗೆ ಸಿಸಿಟಿವ್ಹಿ ಕಮಾಂಡ ಸೆಂಟರನ ಶ್ರೀ ಹರ್ಷವರ್ಧನ ಹಾಗೂ ಶ್ರೀ ಸಚಿನ ಸಿಡಿಆರ್ ವಿಭಾಗ ಬೀದರ, ಕಂಟ್ರೋಲ ರೂಮ ಬೀದರ ರವರ ಸಹಾಯದಿಂದ ಸದರಿ 3 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಆರೋಪಿತರ ವಶದಿಂದ 320 ಗ್ರಾಂ ಬಂಗಾರದ ಆಭರಣಗಳು ಅ,ಕಿ 25,60,000/- ರೂ, 690 ಗ್ರಾಂ ಬೆಳ್ಳಿಯ ಆಭರಣ ಮತ್ತು ಇತರೆ ವಸ್ತುಗಳು ಅಂ.ಕೀ 1,72,500/- ರೂ, ನಗದು ಹಣ 5,000/- ರೂ ಹಾಗೂ ಆರೋಪಿತರು ಕೃತ್ಯಕ್ಕೆ ಬಳಸಿದ ಒಂದು ಟಾಟಾ ವಿಸ್ಟಾ ಕಾರ ಅಂ.ಕಿ 4,50,000/- ರೂ ಹೀಗೆ ಒಟ್ಟು 31,87,500/- ರೂ ಮೌಲ್ಯದ ಮುದ್ದೆ ಮಾಲನ್ನು ಜಪ್ತಿ ಮಾಡಿಕೊಂಡು ಕಾನೂನು ಕ್ರಮ ಜರುಗಿಸಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಯಶಸ್ವಿ ಕಾರ್ಯಚರಣೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಮೆಚ್ಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಪ್ರದೀಪ ಗುಂಟಿ ಐಪಿಎಸ್ ರವರು ಶ್ಲಾಘಿನೀಯ ವ್ಯಕ್ತಪಡಿಸಿರುತ್ತಾರೆ.