Popular Posts

ಅಣ್ಣಾಭಾವು ಸಾಠೆ ಅವರ 106ನೇ ಜಯಂತೋತ್ಸವ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಅಗತ್ಯ: ದೇವಿದಾಸ ತುಮಕಂಟೆ

ಬೀದರ್: ಸಾಹಿತ್ಯ ರತ್ನ, ಲೋಕಶಾಹೀರ್ ಅಣ್ಣಾಭಾವು ಸಾಠೆ ಅವರು ಬಡವರು ಹಾಗೂ ಧ್ವನಿಯಿಲ್ಲದವರ ಪರ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಕಥೆ, ಕಾದಂಬರಿ ಹಾಗೂ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದರು ಎಂದು ಉಪನ್ಯಾಸಕ ದೇವಿದಾಸ ತುಮಕಂಟೆ ಹೇಳಿದರು.

ಕರ್ನಾಟಕ ಮಾದಿಗ ವೇಲ್‌ಫೇರ್ ಅಸೋಸಿಯೇಷನ್ ಜಿಲ್ಲಾ ಘಟಕದ ವತಿಯಿಂದ ನೌಬಾದ್‌ನ ಡಾ. ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಣ್ಣಾಭಾವು ಸಾಠೆ ಅವರ 106ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಣ್ಣಾಭಾವು ಸಾಠೆ ಅವರು ಸಮಾಜದಲ್ಲಿನ ಶೋಷಿತರು, ಬಡವರು ಹಾಗೂ ಧ್ವನಿಯಿಲ್ಲದವರ ಸಮಸ್ಯೆಗಳನ್ನು ತಮ್ಮ ಸಾಹಿತ್ಯದ ಮೂಲಕ ಆಳುವ ಸರ್ಕಾರಗಳ ಗಮನಕ್ಕೆ ತಂದು ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದರು. ಪ್ರಸ್ತುತ ಸಮಾಜದಲ್ಲಿಯೂ ಸಾಮಾಜಿಕ ನ್ಯಾಯದ ಪರವಾಗಿ ಎಲ್ಲ ಹೋರಾಟಗಾರರು ಧ್ವನಿ ಎತ್ತುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾದಾರ ಚೆನ್ನಯ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ರಮೇಶ ಕಟ್ಟಿತುಗಾಂವ್ ಭಾಗವಹಿಸಿದ್ದರು. ಸೂರ್ಯಕಾಂತ ಸಸನೆ ಅತಿಥಿಯಾಗಿ ಪಾಲ್ಗೊಂಡಿದ್ದರು. ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೇನೋರ್ ಅಧ್ಯಕ್ಷತೆ ವಹಿಸಿದ್ದರು.

ಸಂಗಮೇಶ ಏಣಕೂರ, ವೆಂಕಟರಾವ ಪಾಟೀಲ್, ಪುಟ್ಟರಾಜ ರೇಕುಳಗಿ, ಸುರೇಶ ಎನ್. ದೊಡ್ಡಿ, ಕಮಲಹಾಸನ ಭಾವಿದೊಡ್ಡಿ, ಯೇಶಪ್ಪ ಶೆಂಬೆಳ್ಳಿ, ದಾವೀದ್, ಸಂತೋಷ, ಮೋಹನ, ವಿಶಾಲ ಚವ್ಹಾಣ (ಕಮಲನಗರ), ಉಮೇಶ ಅಡ್ಡೆ, ನಾಗಣ್ಣ ಡೋಣೆ ಸೇರಿದಂತೆ ಅಸೋಸಿಯೇಷನ್‌ನ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಘಾಳೆಪ್ಪಾ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading