1
1

ಭಾಲ್ಕಿ: ತಾಲೂಕಿನ ಅಂಬೆಸಾAಗ್ವಿ ಗ್ರಾಮದ ನವಕಿರಣ ಪ್ರೌಢಶಾಲೆ ಅವರಣದಲ್ಲಿ ಬೀರಲಿಂಗೇಶ್ವರ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಲವಾಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ್ ಇವರ ಸಹಯೋಗದಲ್ಲಿ ಇತ್ತಿಚೀಗೆ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಂಭ್ರಮ ಜರುಗಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಬ್ಯಾಲಹಳ್ಳಿಯ ಶಿವಾನಂದ ಕೈಲಾಸ ಆಶ್ರಮದ ಪೂಜ್ಯ ನಾಗಲಿಂಗ ಮಹಾಸ್ವಾಮಿಗಳು ಮಾತನಾಡಿ, ಪಾಶ್ಚಾತ್ಯದ ಪ್ರಭಾವದಿಂದ ಗ್ರಾಮೀಣ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಅಳಿವಿನ ಅಂಚಿನಲ್ಲಿದೆ. ನಮ್ಮ ಕೋಲಾಟ, ಗೀಗೀ ಪದ, ಹಂತಿ ಪದ, ಸೋಬಾನ ಪದ, ಲಾವಣಿ, ಸುಗ್ಗಿ ಪದ, ಸೀಗಿ ಪದ, ಜೋಗುಳ ಪದ, ಬೀಸುವ ಹಾಗೂ ಕಟ್ಟುವ ಪದಗಳು, ಡೊಳ್ಳು ಕುಣಿತ ಇತ್ಯಾದಿ ಜಾನಪದ ಕಲೆಗಳು ಅಳಿವಿನ ಅಂಚಿನಲ್ಲಿದ್ದು, ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖೇನ ಅವಕ್ಕೆ ಪುನರೂಜ್ಜೀವನಗೊಳಿಸಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನವಕಿರಣ ಪ್ರೌಢಶಾಲೆಯ ಅಧ್ಯಕ್ಷ ಅಶ್ವಿನ್ ಚವ್ಹಾಣ ಮಾತನಾಡಿ, ಜನಪದ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಇವನ್ನು ರಾಜ್ಯ ಹಾಗೂ ರಾಷ್ಟç ಮಟ್ಟಕ್ಕೆ ಕೊಂಡೊಯ್ಯಲು ಪ್ರೋತ್ಸಾಹ ನೀಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ ಶ್ರೀ ಬೀರಲಿಂಗೇಶ್ವರ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಂತೋಷ.ಎಸ್ ಮಾತನಾಡಿ, ಕಲೆ ಎಂಬುದು ಕಲ್ಲಲ್ಲ. ಅದು ಪಾದರಸದಂತಿದೆ. ಯಾರು ಅದನ್ನು ಆರಾಧಿಸುವರೊ ಅದು ಅವರ ಮನೆ ಬೆಳಗುತ್ತದೆ. ಇಂದು ಗ್ರಾಮಗಳು ಸಮೃದ್ಧಿಯಾಗಿರಲು ಅಲ್ಲಿ ನಡೆಯುವ ನಿರಂತರ ಭಜನೆ, ಕೀರ್ತನೆ ಇತ್ಯಾದಿ ಧಾರ್ಮಿಕ ಕಾರ್ಯಗಳಿಂದ ಎಂಬುದು ಮನಗಾಣಬೇಕಿದೆ. ಈ ವರ್ಷ ಅಷ್ಟು, ಇಷ್ಟು ಮಳೆ, ಬೆಳೆ ಬರಲು ಗ್ರಾಮಾಂತರ ಪ್ರದೇಶಗಳಲ್ಲಿ ಜರುಗಿದ ಪಾರಾಯಣ, ಪುರಾಣ, ಭಜನೆಗಳೆ ಸಾಕ್ಷಿ ಎಂಬುದು ಯಾರು ಅಲ್ಲಗಳೆಯಬಾರದೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಗುರು ರಾಮರಾವ ತೋರಣೆ, ವಾರಕಾರಿ ಸಂಪ್ರದಾಯದ ಶ್ರೀಪತರಾವ ಮಾಲಬಾ ಹಾಗೂ ಸಮಾಜ ಸೇವಕ ಭಾಲ್ಕೇಶ್ವರ ನೇಳಗೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಾಡಗಿ ಗ್ರಾಮ ಪಂಚಾಯತ ಪಿ.ಡಿ.ಒ ಜಿತೇಂದ್ರ ಮಚಕುರೆ, ನ್ಯಾಯವಾದಿ, ಪದ್ಮಾಕರ ಮಲ್ಲೇಶಿ, ಸ್ಥಳಿಯ ಶಾಲಾ ಮುಖ್ಯ ಗುರುಗಳಾದ ದಿಲಿಪ ಹಂತಗಳೆ ಹಾಗೂ ದತ್ತಾತ್ರಿ ಬೀರಿ ವೇದಿಕೆಯಲ್ಲಿದ್ದರು.
ಇದೇ ವೇಳೆ ಡೊಂಗರಗಿಯ ಭಾಗ್ಯವಂತಿ ಕಲಾ ತಂಡದಿAದ ಜಾನಪದ ಗಾಯನ, ನಂದುಕುಮಾರ ಹಡಪದ ಮತ್ತು ತಂಡದಿAದ ವಚನ ಗಾಯನ, ಸಾವಿತ್ರಿಬಾಯಿ ಫುಲೆ ಮತ್ತು ತಂಡದಿAದ ಮಹಿಳಾ ಕೋಲಾಟ, ಬೀರಿ (ಬಿ)ಯ ಜೈ ಭವಾನಿ ಕಲಾ ತಂಡದಿAದ ಲಮಾಣಿ ನೃತ್ಯ ಪ್ರದರ್ಶನ ನಡೆಯಿತು. ಅತಿವಾಳದ ಪದ್ಮಾ ಮತ್ತು ತಂಡದಿAದ ಬೀಸುವ ಪದ, ಲಕ್ಷ್ಮೀ ಮತ್ತು ತಂಡದಿAದ ಕುಟ್ಟುವ ಪದ, ಹಲಸೂರಿನ ಅನುಸೂಯ ಮತ್ತು ತಂಡದಿAದ ಭುಲಾಯಿ ಪದ, ಪಾರ್ವತಿ ಹಡಪದ ಮತ್ತು ತಂಡದಿAದ ಅಭಂಗ ವಾಣಿ, ಕಲವಾಡಿಯ ಮೀನಾಕ್ಷಿ ಮತ್ತು ತಂಡದಿAದ ಮಹಿಳಾ ಜಾನಪದ, ಅತಿವಾಳದ ಬಂಡೆಪ್ಪಾ ಮತ್ತು ತಂಡದಿAದ ಜಾನಪದ ಭಜನೆ ಹಾಗೂ ಅಂಬೆಸಾAಗವಿಯ ಸರಸ್ವತಿ ಸ್ವಾಮಿ ಮತ್ತು ತಂಡದಿAದ ವಚನ ಗಾಯನ ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ನವ-ಕಿರಣ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ವಿವಿಧ ಕಲಾ ಪ್ರಕಾರಗಳ ಮನಮೋಹಕ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
Subscribe to get the latest posts sent to your email.