1
1

ಬೀದರ: ನೇತಾಜಿ ಪುಸ್ತಕ ಪ್ರಕಾಶನ ಹಾಗೂ ದಿ. ರುಕ್ಮೋದ್ದಿನ್ ಇಸ್ಲಾಂಪೂರ ಗೆಳೆಯರ ಬಳಗದ ವತಿಯಿಂದ ಕವಿ, ಸಾಹಿತಿ ದಿ. ರುಕ್ಮೋದ್ದಿನ್ ಇಸ್ಲಾಂಪೂರ ಅವರ ಸ್ಮರಣಾರ್ಥ ಸಂಪಾದಕ ರಮೇಶ ಬಿರಾದಾರ ಅವರ ‘ಸೌಹಾರ್ದತೆಯ ಸಂತ’ ಕಾವ್ಯಗುಚ್ಛ ಕೃತಿ ಬಿಡುಗಡೆ ಸಮಾರಂಭ ಇಂದು ಸಂಜೆ 6 ಗಂಟೆಗೆ ಹುಮನಾಬಾದ್ನ ಲಾಲಧರಿ ಆಶ್ರಮದಲ್ಲಿ ನಡೆಯಲಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬೀದರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಬಿ. ಜಾಧವ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.
ಸಮಾರಂಭದಲ್ಲಿ ಹುಮನಾಬಾದ್ ತಾಲ್ಲೂಕಿನ ತಹಶೀಲ್ದಾರ್ ಜಗದೀಶ ಎಸ್. ಚೌರ, ಬೀದರ ಯೋಜನಾ ನಿರ್ದೇಶಕ ಲಕ್ಷ್ಮಿಕಾಂತ ಅವಲಿ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತೀವಾಳೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
‘ಸೌಹಾರ್ದತೆಯ ಸಂತ’ ಕೃತಿಯ ಕುರಿತು ಸಾಹಿತಿ ಹಾಗೂ ಉಪನ್ಯಾಸಕ ಬಸವರಾಜ ಮಯೂರ ಮಾತನಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ಮಾಣಿಕ ರೇಡ್ಡಿ ಇಸ್ಲಾಂಪೂರ ವಹಿಸಲಿದ್ದಾರೆ. ಲಾಲಧರಿ ಸಂಸ್ಥೆಯ ಅಧ್ಯಕ್ಷ ನಾಗರಡ್ಡಿ ಬಯಾನ್, ದಿ. ರುಕ್ಮೋದ್ದಿನ್ ಇಸ್ಲಾಂಪೂರ ಅವರ ಕುಟುಂಬದ ಶ್ರೀಮತಿ ಸುಹಿಲಾ ತಬಸ್ಸುಮ ಇಸ್ಲಾಂಪೂರ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ದಿ. ರುಕ್ಮೋದ್ದಿನ್ ಇಸ್ಲಾಂಪೂರ ಅವರ ಸಾಹಿತ್ಯ ಸೇವೆ ಹಾಗೂ ಸೌಹಾರ್ದತೆಯ ಸಂದೇಶವನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ರಮೇಶ ಬಿರಾದಾರ ಅವರು ಮನವಿ ಮಾಡಿದ್ದಾರೆ.
Subscribe to get the latest posts sent to your email.