1
1

ಹಿಂದಿನ ನಗರ ಸಭೆ, ಇಂದಿನ ಬೀದರ ಮಹಾನಗರ ಪಾಲಿಕೆ ವಾರ್ಡ ನಂ 34 ವಾರ್ಡ ಕಾರ್ಪೊರೇಟರ್ ಸುರೇಖಾ ಫಿಲೋಮನ್ ರಾಜ್ ರವರು ಗೆಲ್ಲೂವ ವರೆಗೂ 34 ನೇ ವಾರ್ಡಿಗೆ ಬರುತ್ತಿದ್ದರು ಗೆದ್ದ ನಂತರ ವಾರ್ಡಿನ ಜನರ ಕುಂದು ಕೊರತೆ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡದಿರುವುದು. ಹಲವಾರು ಸವಾಲುಗಳು ಸಮಸ್ಯೆ ಪರಿಹಾರವಾಗದಿರುವುದಕ್ಕೆ ಕಾರಣವಾಗಿದೆ. ಈ ಕುರಿತು ವಾಡಿನಲ್ಲಿ ಸುತ್ತಾಡಿ ಕ್ಷೇತ್ರದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲು ಮಹಾ ನಗರ ಪಾಲಿಕೆ ಆಯುಕ್ತರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಸ್ಟೀಪನ ಪೌಲ್ ಆಗ್ರಹವನ್ನು ಮಾಡಿದ್ದಾರೆ. ಅಪೂರ್ಣವಾರಿರುವ ರಸ್ತೆಗಳು ರಸ್ತೆ ಇಲ್ಲದ ಓಣಿಗಳು, ಜನರು ಕುಡಿಯಲು ಶುದ್ದವಿಲ್ಲದ ನೀರಿನ ಸಮಸ್ಯೆ ಬಗ್ಗೆ ಹೇಳುತ್ತಿದ್ದಾರೆ. ಬೀದಿ ದೀಪದ ಸಮಸ್ಯೆ ರಾತ್ರಿ ಹೊತ್ತು ಕತ್ತಲಾಗಿರುವ ಕಾರಣ ಮನೆಗಳಿಗೆ ಹಾವುಗಳು ನುಗ್ಗುತ್ತಿವೆ, ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ವಿದ್ಯುತ್ ಅಘಾತ ಬೋರವೇಲ್ ಮೋಟಾರ್ ಆನ್ ಮಾಡಲು ಹೊದರೆ ಕರೆಂಟ್ ಶಾಖ್ ಹೊಡೆಯುತ್ತದೆ. ದೊಡ್ಡ ಅನಾಹುತವಾಗುವ ಮುನ್ನ ಸರಿಪಡಿಸಬೇಕು. ರಸ್ತೆ ದುರಸ್ತಿ ರಸ್ತೆಗಳು ಅರ್ಧಂಬರ್ಧ ಆಗಿವೆ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ಗುಂಡಿಗಳು ಇವೆ, ರಾತ್ರಿ ಹೊತ್ತಿನಲ್ಲಿ ವೃದ್ಧರು ಮಕ್ಕಳು, ಸಾರ್ವ ಜನಿಕರು ಬಿದ್ದು ಕಾಲುಗಳು ಮುರಿದುಕೊಳ್ಳವ ಸ್ಥಿತಿಯಲ್ಲಿಯಲ್ಲಿದೆ. ರೈಲ್ವೆ ಟ್ರ್ಯಾಕ್ ಪಕ್ಕ ಕಸದ ಗುಡೆ ಪಾಲಿಕೆ ಗಾಡಿಗಳು ಕಸವನ್ನು ತೇಗೆದುಕೊಂಡು ಹೊಗಲು ಬರುತ್ತಿಲ್ಲ. ಪ್ಲಾಸ್ಟಿಕ ಬಟ್ಟೆ ಕಸದ ರಾಷಿ ಇದು ಮಲೇರಿಯಾ ತಾಣವಾಗಿದೆ. ಚರಂಡಿ ಬ್ಲಾಕ್ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕಾರಣ ಸಿ ಸಿ ರಸ್ತೆ ಮತ್ತು ಒಳಚರಂಡಿ ಇರದ ಕಾರಣ ಕುಡಿಯುವ ನೀರಿನ ಪೈಪಲೈನಿಗೂ ಚರಂಡಿ ನೀರು ಸೇರುವುದರಿಂದ ಸಾರ್ವಜನಿಕರಿಗೆ ಮಲಿನವಾಗಿರುವ ನೀರು ಬಳಸುವುದರಿಂದ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಲಿದೆ. ಆಯುಕ್ತರು ವಾರ್ಡ ನಂ 34 ರ ಕಡೆ ಗಮನವನ್ನು ಕೊಟ್ಟು ಬೀದಿ ದೀಪ ಬೋರವೇಲ್ ಅಪೂರ್ಣವಾಗಿರುವ ರಸ್ತೆಗಳು ಪೂರ್ಣಗೊಳಸಿ ಗುಣಮಟ್ಟದ ಸಿ ಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮಾಡಿಕೊಡಿ ಕಸವನ್ನು ಸ್ವಚ್ಚಗೊಳಿಸಲು, ರಸ್ತಬದಿಯಲ್ಲಿ ಹಾಕಿರುವ ಕಸವನ್ನು ಗಾಡಿ ಮೂಲಕ ಎತ್ತಿಕೊಂಡು ಹೊಗುವ ಕೆಲಸ ಕಾರ್ಯಗಳು ಮಾಡಲು ಆಗ್ರಹವನ್ನು ಮಾಡುತ್ತಿದ್ದೇವೆ, ಒಂದುವಾರದಲ್ಲಿ ವಾರ್ಡ ನಂ34 ರ ಸಮಸ್ಯೆ ಪರಿಹಾರ ಮಾಡಿಕೊಡಿ ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಜಿಲ್ಲಾ ಘಟಕದ ಅಧ್ಯಕ್ಷರಾದ ಅವಿನಾಶ ಬುದೇರಾಕರ್ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಸ್ಟೀಫನ್ ಪೌಲ್ ರವರ ನೇತ್ರುತ್ವದಲ್ಲಿ ಬಿದಿಗಿಳಿದು ಹೋರಾಟವನ್ನು ಮಾಡುತ್ತೇವೆಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.
Subscribe to get the latest posts sent to your email.