Popular Posts

ಗಾಂಧಿ ಗಂಜ್: ಗಾಂಧಿ ಚೌಕ್ ನಿರ್ಮಾಣಕ್ಕೆ ಚಾಲನೆ

ಬೀದರ್: ಮಹಾತ್ಮ ಗಾಂಧಿಜಿ ಅವರ ಪ್ರತಿಮೆಯೊಂದಿಗೆ ಚೌಕ್ ನಿರ್ಮಾಣಕ್ಕೆ ನಗರದ ವಾಣಿಜ್ಯ ಕೇಂದ್ರ ಗಾಂಧಿಗಂಜ್‍ನಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು ಭೂಮಿ ಪೂಜೆ ನೆರವೇರಿಸಿದರು.
ಗಾಂಧಿಜಿ ಅವರ ಹೆಸರನ್ನೇ ಹೊಂದಿರುವ ಗಾಂಧಿಗಂಜ್‍ನಲ್ಲಿ ಈವರೆಗೆ ಗಾಂಧಿಜಿ ಅವರ ಪ್ರತಿಮೆ ಇರಲಿಲ್ಲ. ಹೀಗಾಗಿ ಈಚೆಗೆ ನಡೆದ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಸಭೆಯಲ್ಲಿ ಚೌಕ್ ನಿರ್ಮಿಸಿ ಸುಂದರ ಧ್ಯಾನಸ್ಥ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಅದರಂತೆ ಚೌಕ್ ನಿರ್ಮಾಣಕ್ಕೆ ಚಾಲನೆ ಕೊಡಲಾಗಿದೆ ಎಂದು ಅವರು ಹೇಳಿದರು.
ಅಸೋಸಿಯೇಷನ್ ನೇತೃತ್ವದಲ್ಲಿ ಗಾಂಧಿಗಂಜ್‍ನ ಎಲ್ಲ ವ್ಯಾಪಾರಿಗಳ ಸಹಕಾರದೊಂದಿಗೆ ಚೌಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಲ್ಲಯ್ಯ ಸ್ವಾಮಿ ಬೋರಂಚಿ, ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗೆ, ಕಾರ್ಯದರ್ಶಿ ಭಗವಂತ ಔದತ್ತಪುರ, ಕೋಶಾಧ್ಯಕ್ಷ ಬಂಡೆಪ್ಪ ಗಡ್ಡೆ, ನಿರ್ದೇಶಕರಾದ ಸೋಮನಾಥ ಗಂಗಶೆಟ್ಟಿ, ರಾಜಕುಮಾರ ಬಸವಣ್ಣನವರ್, ನಾಗಶೆಟ್ಟಿ ಕಾರಾಮುಂಗಿ, ಶಿವಾನಂದ ಸ್ವಾಮಿ, ಗುಂಡಪ್ಪ ಎಮ್ಮೆ, ರಮೇಶ ಪಾಟೀಲ ಮೈಲೂರು, ಬಸವರಾಜ ಲಾಧಾ, ರಾಜಕುಮಾರ ಹಜ್ಜರಗಿ, ವೀರಭದ್ರಯ್ಯ ಸ್ವಾಮಿ, ರಮೇಶ ವಿಳಾಸಪುರ, ಪ್ರದೀಪ್ ಬಿರಾದಾರ, ಕಲ್ಯಾಣರಾವ್ ಪಾಟೀಲ, ಸಂತೋಷ್ ಗಾದಗಿ, ಎಂಜಿನಿಯರ್ ಕೀರ್ತಿ ವಾಲೆ ಮತ್ತಿತರರು ಇದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading