Popular Posts

ಪಶ್ಚಿಮ ಬಂಗಾಳಕ್ಕೆ ‘ಬೆಸ್ಟ್ ಬೆಂಗಾಲ್’ ಹೆಸರಿಸಲು ರಾಷ್ಟ್ರಪತಿಗೆ ಪತ್ರ ಬರೆಯಲಾಗಿದೆ: ಚಂದ್ರಶೇಖರ ತಗಾರೆ

ಬೀದರ್: ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ‘ಬೆಸ್ಟ್ ಬೆಂಗಾಲ್’ ಅಥವಾ ‘ಉತ್ತಮ್ ಬೆಂಗಾಲ್’ ಎಂದು ಮರು ನಾಮಕರಣ ಮಾಡುವಂತೆ ರಾಷ್ಟ್ರಪತಿ ದ್ರೌಪದಿ ಮೂರ್ಮು ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ತಗಾರೆ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಆಗಸ್ಟ್ ೧೫ರಂದು ರಾಷ್ಟ್ರಪತಿ ಭವನಕ್ಕೆ ಕಳುಹಿಸಿರುವ ಮನವಿಯಲ್ಲಿ, ಪಶ್ಚಿಮ ಬಂಗಾಳವು ಸ್ವಾಮಿ ವಿವೇಕಾನಂದ, ಸುಭಾಷ ಚಂದ್ರ ಭೋಷ, ರವೀಂದ್ರನಾಥ ಟಾಗೋರ್ ಸೇರಿದಂತೆ ಹಲವು ಮಹನೀಯರನ್ನು ದೇಶಕ್ಕೆ ಕೊಡುಗೆಯಾಗಿ ನೀಡೊಇರುವ ನಾಡಾಗಿದೆ. ಹೀಗಾಗಿ ‘ವೆಸ್ಟ್ ಬೆಂಗಾಲ್’ ಎಂಬ ಹೆಸರಿನ ಬದಲಿಗೆ ‘ಬೆಸ್ಟ್ ಬೆಂಗಾಲ್’ ಅಥವಾ ‘ಉತ್ತಮ್ ಬೆಂಗಾಲ್’ ಎಂದು ಮರು ನಾಮಕರಣ ಮಾಡುವುದು ಸೂಕ್ತ ಎಂದು ಅವರು ತಿಳಿಸಿದರು.
ಪ್ರಸ್ತುತ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಹೆಸರಿನ ಬದಲಾವಣೆಗೆ ಪರಿಗಣನೆ ನೀಡಬೇಕು, ಅಲ್ಲಿ ಈಗ ದೇಶಭಕ್ತ ಸರ್ಕಾರ ಅಧಿಕಾರದಲ್ಲಿದೆ. ಪಕ್ಕದಲ್ಲಿ ಬಾಂಗ್ಲಾ ದೇಶಿಗರು ನುಸುಳದಂತೆ ಈ ಸರ್ಕಾರ ನೋಡಿಕೊಳ್ಳುತ್ತಿದೆ. ಜಂಗಲ್ ರಾಜ್ ಇದ್ದುದು ಈಗ ಮಂಗಲ್ ರಾಜ್ ಮಾಡಿದ್ದಾರೆ, ಉತ್ತಮ ಅಡಳಿತ ಅಲ್ಲಿರುವುದರಿಂದ ಇದಕ್ಕೆ ಉತ್ತಮ ಬಂಗಾಲ ಎಂದು ಹೆಸರು ಬದಲಾಯಿಸಲು ಅಲ್ಲಿನ ಸಿಎಂ ಸುವೆಂಧು ಅಧಿಕಾರಿ ಅವರಿಗೂ ಸಹ ಮನವಿ ಮಾಡಲಾಗಿದೆ ಎಂದು ಹೇಳಿದರು.
ಇವತ್ತು ಬರೀ ಕಾಶ್ಮಿರ ಇದ್ದರೆ ಚನ್ನಾಗಿತ್ತು. ಅದಕ್ಕೆ ಜಮ್ಮು ಸೇರಿಸಿದಕ್ಕಾಗಿಯೇ ಇಂದು ಪಿ.ಒ.ಕೆ ನಮ್ಮಿಂದ ಕೈಮೀರಿ ಹೋಯಿತು. ಬಂಗಾಲ ಹಾಗಾಗಬಾರದೆಂದರೆ ಕೂಡಲೇ ಅದಕ್ಕೆ ಉತ್ತಮ ಬಂಗಾಲ ಎಂದು ಕೂಡಲೇ ಮರು ನಾಮಕರಣ ಮಾಡಬೇಕಾಗಿದೆ. ಈಗಾಗಲೇ ಬಾಂಬೆಯನ್ನು ಮುಂಬೈಯಾಗಿ, ಮೈಸೂರನ್ನು ಕರ್ನಾಟಕವನ್ನಾಗಿ, ಮದ್ರಾಸ್‌ನ್ನು ಚನೈ ಆಗಿ ನಾಮಕರಣ ಮಾಡಲಾಗಿದೆ. ಈ ಹಿಂದೆ ಬೀದರ್‌ನ್ನು ಎಂ. ಬೀದರ್ ಎಂದು ಕರೆಯಲಾಗುತ್ತಿತ್ತು. ಎಂ ತೆಗೆದು ಈಗ ಬೀದರ್ ಎಂದು ನಾಮಕರಣ ಮಾಡಲಾಗಿದೆ. ಹಾಗೇ ವೆಸ್ಟ್ ಬಂಗಾಲ್ ತೆಗೆದು ಬೆಸ್ಟ್ ಬೆಂಗಾಲ್ ಮಾಡಲಿ ಎಂಬುದು ನಮ್ಮ ಸದಾಭಿಪ್ರಾಯವಾಗಿದೆ ಎಂದವರು ಹೇಳಿದರು. ಟ್ರಸ್ಟ್ ಉಪಾಧ್ಯಕ್ಷ ವಿಕ್ರಮ ತಗಾರೆ ಪತ್ರಿಕಾಗೋಷ್ಟಿಯಲ್ಲಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading