Popular Posts

ಮಾಜಿ ಕೇಂದ್ರ ಸಚಿವ ಭಗವಂತ ಖೂಬಾಗೆ ಜೀವ ಬೆದರಿಕೆ – ಕ್ರಿಮಿನಲ್ ಪ್ರಕರಣಕ್ಕೆ ಶಶಿಕುಮಾರ ಎಸ್. ಪೊಲೀಸ ಪಾಟೀಲ ಆಗ್ರಹ

ಬೀದರ್:ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಹಾಗೂ ಅವಾಚ್ಯ, ಹಿಂಸಾತ್ಮಕ ಭಾಷೆ ಬಳಸಿ ನಿಂದಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬAಧಿಸಿದ ಆರೋಪಿಗಳ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಡಿಫಡೆಂಟ್ ಶಾಸಕ ಶ್ರೀ ಶಶಿಕುಮಾರ ಎಸ್. ಪೊಲೀಸ ಪಾಟೀಲ ಅವರು ಒತ್ತಾಯಿಸಿದ್ದಾರೆ.

ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ “ನಿನ್ನ ನಾಲಿಗೆ ಕಟ್ ಮಾಡುತ್ತೇನೆ, ಕೈ–ಕಾಲು ಕಡಿದು ಹಾಕುತ್ತೇನೆ” ಎಂಬAತಹ ಹಿಂಸಾತ್ಮಕ ಹಾಗೂ ಬೆದರಿಕೆಯ ಮಾತುಗಳನ್ನು ಬಳಸಿರುವುದು ಕಾನೂನು ಬಾಹಿರ ಮತ್ತು ಗಂಭೀರ ಅಪರಾಧ ಎಂದು ಅವರು ಹೇಳಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದಲ್ಲಿ ಸಹಜವಾದರೂ, ಜೀವ ಬೆದರಿಕೆ, ಹಿಂಸೆಗೆ ಪ್ರಚೋದನೆ ಮತ್ತು ಸಾಮಾಜಿಕ ಜಾಲತಾಣದ ದುರುಪಯೋಗವನ್ನು ಸಹಿಸಲಾಗುವುದಿಲ್ಲ ಎಂದು ಶಶಿಕುಮಾರ ಎಸ್. ಪೊಲೀಸ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರಿಕಾ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading