Popular Posts

“182ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮ ಹಾಗೂ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ವಾರ್ಷಿಕೋತ್ಸವ ಸಮಾರಂಭ”

ಬೀದರ: ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದನಿಲಯದಲ್ಲಿ ದಿನಾಂಕ 11/02/2026 ರಂದು ಸಂಜೆ 5:00 ಗಂಟೆಗೆ 182 ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ವಾರ್ಷಿಕೋತ್ಸವ ಸಮಾರಂಭ ಜರುಗಿತು.
ಬೀದರ ದಕ್ಷಿಣ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ರವರು ಉದ್ಘಾಟಕರಾಗಿ ಆಗಮಿಸಿ, ಬಸವಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡುತ್ತಾ, ಡಾ. ಬಸವಲಿಂಗ ಪಟ್ಟದೇವರು ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಎಂಬ ವಿನೂತನ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯವಾಗಿದೆ. ಪ್ರಸ್ತುತ ಮಕ್ಕಳಲ್ಲಿ ದೇಶ, ಸಮಾಜದ ಬಗ್ಗೆ ಕಾಳಜಿ ಮಾಡುವುದು ಅಗತ್ಯವಿದೆ, ಪೂಜ್ಯರು ಸಮಾಜದ ಬಗ್ಗೆ, ಶಿಕ್ಷಣದ ಬಗ್ಗೆ ಬಸವಾದಿ ಶರಣರು ನೀಡಿದ ತತ್ವದ ಬಗ್ಗೆ ಅಪಾರವಾದ ಕಾಳಜಿಉಳ್ಳವರಾಗಿ ಬಸವ ಸಂಸ್ಕೃತಿಯನ್ನು ಮನೆ-ಮನಗಳಿಗೆ ಮುಟ್ಟುವಂತಹ ಕಾರ್ಯ ಮಾಡುತ್ತಿದ್ದಾರೆ. ಗುರುಕುಲ ಶಾಲೆಯ ಶಿಕ್ಷಣವು ಮಕ್ಕಳಿಗೆ ಉತ್ತಮ ಸದ್ಭರ್ತನೆ, ಸದ್ವಿಚಾರ ಉತ್ತಮ ಸಂಸ್ಕೃತಿ ಗೌರವ ಮತ್ತು ಮಾನವೀಯ ಪ್ರೇಮವನ್ನು ಕಲಿಸುವುದಾಗಿದೆ. ವ್ಯಕ್ತಿ ಒಳ್ಳೆಯ ಪ್ರಯತ್ನ ಮಾಡಿದರೆ ಉತ್ತಮ ಫಲ ದೊರಕುತ್ತದೆ. ಪ್ರಸ್ತುತ ಸಮಯದಲ್ಲಿ ಹೊನ್ನು, ಹೆಣ್ಣು, ಮಣ್ಣಿಗಾಗಿ ವ್ಯಕ್ತಿ ಹೋರಾಟ ಮಾಡುತ್ತಲ್ಲಿದ್ದಾನೆ. ಆದರೆ ನಿಜವಾದ ಸುಜ್ಞಾನದ ಸಂಪಾದನೆಗಾಗಿ ಒಬ್ಬರೂ ಹೋರಾಟ ಮಾಡುತ್ತಿಲ್ಲ. ಬೇರೋಬ್ಬರ ಮನಸ್ಸು ನೋವಾಗದಂತೆ ಬದುಕು ಸಾಧಿಸಿಕೊಂಡು ಹೋಗುವುದು ಸಾರ್ಥಕತೆಯ ಬದುಕಾಗುತ್ತದೆ. 12ನೇ ಶತಮಾನದ ಬಸವಾದಿ ಶರಣರ ಬದುಕು ನಮಗೆ ಪ್ರೇರಣದಾಯಕವಾಗಿದೆ. ಮುಂದುವರೆದು ಮಾತನಾಡುತ್ತಾ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ 2 ಲಕ್ಷ ರೂಪಾಯಿಗಳ ಖರ್ಚಿನ ಹಣ ಕೊಡುವುದಾಗಿ ತಿಳಿಸಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಶಿಕ್ಷಣವು ರಾಜ್ಯಕ್ಕೆ ಮಾದರಿಯಾಗಿದೆ ಎಂದು ನುಡಿದರು.
ದಿವ್ಯ ಸಾನಿಧ್ಯ ವಹಿಸಿರುವ ಅನುಭವ ಮಂಟಪ ಬಸವಕಲ್ಯಾಣದ ಅಧ್ಯಕ್ಷರಾದ ನಾಡೋಜ. ಪರಮಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಆಶೀರ್ವಚನ ನೀಡುತ್ತಾ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಪ್ರಮುಖ ಗುರಿಯು ಉತ್ತಮ ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ಕೊಡುವುದಾಗಿದೆ. ಜಾಗತೀಕರಣ ಸಮಯದಲ್ಲಿ ಯುವಜನಾಂಗ ಕೇವಲ ಹಣ ಸಂಪಾದನೆ ಮಾಡುವಲ್ಲಿ ಬದುಕು ಸಾಗಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಮಾನವೀಯ ಪ್ರೇಮ, ಗೌರವ, ಗುರು-ಹಿರಿಯರ ಮೇಲೆ ದಯಾಪರತೆ ಇಲ್ಲದೇ ಸ್ವಾರ್ಥತೆ ಬದುಕು ಮಾಡುತ್ತಲ್ಲಿದ್ದಾನೆ. ಇದರಿಂದ ಸಮಾಜ ಅಧೋಗತಿಗೆ ಸಾಗುತ್ತಲಿದೆ. ಆದರೆ ಅನುಭವ ಮಂಟಪದ ಸಂಸ್ಕೃತಿ ವಿದ್ಯಾಲಯದಿಂದ ಬಸವ ತತ್ವದ ಪ್ರಚಾರ, ಲಿಂಗ ತತ್ವದ ಅರಿವು ಮೂಡಿಸುತ್ತಿದೆ. ಇಲ್ಲಿ ಪಠ್ಯಕ್ರಮದ ಜೊತೆಗೆ, ಪಠ್ಯಪೂರಕ  ಚಟುವಟಿಕೆಗಳು ಮತ್ತು ಆಧ್ಮಾತ್ಮಿಕ ಶಿಕ್ಷಣ
-2-
ಕೊಡುವುದಾಗಿದೆ, ಈ ಶಾಲೆಯಲ್ಲಿ ಪ್ರತಿಭೆ ಆಧಾರದ ಮೇಲೆ ಪ್ರವೇಶ ಕೊಡಲಾಗಿದ್ದು, ಮತ್ತು ಶಿಕ್ಷಣ ಉಚಿತವಾಗಿ ಕೊಡುವುದಾಗಿದೆ. ಹಿಂದಿನ ಕಾಲದ ಗುರುಕುಲದಂತೆ ಇಲ್ಲಿ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳ ಶಿಕ್ಷಣ ಕೊಡುವುದಾಗಿದೆ. ಆಧುನಿಕ ಕುಟುಂಬಗಳು ಬಸವಮಯವಾಗಬೇಕೆಂಬುವುದಾಗಿದೆ ಎಂದು ನುಡಿದರು.
ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕರಾದ ಸುವರ್ಣಾ ಚಿಮಕೋಡೆ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಬೀದರನಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಪ್ರಾರಂಭವಾಗಿ 4 ವರ್ಷಗಳಾಗಿವೆ. ಇಲ್ಲಿ ಮಕ್ಕಳಿಗೆ ಯೋಗ, ಧ್ಯಾನ, ಲಿಂಗಪೂಜೆ, ಪಠ್ಯಕ್ರಮ ಶಿಕ್ಷಣ ಮತ್ತು ಆಧ್ಮಾತ್ಮಿಕ ಶಿಕ್ಷಣ ಕೊಡುವುದಾಗಿದೆ, ಪ್ರತಿಭೆ ಆಧಾರದ ಮೇಲೆ 6ನೇ ತರಗತಿಗೆ ಮಕ್ಕಳಿಗೆ ಆಯ್ಕೆ ಮಾಡುವುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಾರ್ಷಿಕೋತ್ಸವ ನಿಮಿತ್ಯ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಾದ ನಾಟಕ, ವಚನ ನೃತ್ಯ, ಭರತನೃತ್ಯ, ನಗೆಹನಿ ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ. ಹಿರೇಮಠ ಸಂಸ್ಥಾನ ಭಾಲ್ಕಿಯ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು.
ಹಿರೇಮಠ ಸಂಸ್ಥಾನ ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಮೋಹನರೆಡ್ಡಿ, ಖ್ಯಾತ ಸ್ತಿç-ರೋಗ ತಜ್ಞರಾದ ಜಯಶ್ರೀ ಬಶೆಟ್ಟಿ, ಡಾ. ದೇವಕಿ ನಾಗೂರೆ, ಪ್ರವಚನಕಾರರಾದ ಭಾರತಿ ಪಾಟೀಲ, ಮುಖ್ಯ ಗುರುಗಳಾದ ಸುಧಾ ಎನ್. ರವರು ಗೌರವ ಉಪಸ್ಥಿತರಿದ್ದರು. ಶೀಲಾ ರೇವಣಪ್ಪಾ ಮೂಲಗೆ ರವರು ಭಕ್ತಿ ದಾಸೋಹ ಮಾಡಿದರು. ಮಹಾಂತೇಶ ಚನ್ನಬಸಪ್ಪಾ ನೌಬಾದೆ ವಚನ ಗಾಯನ ನಡೆಸಿಕೊಟ್ಟರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಶಿಕ್ಷಕಿಯರಾದ ಮಹಾದೇವಿ, ಶಿವಲೀಲಾ, ಸಾರಿಕಾ, ಅಶ್ವಿನಿ, ಶೃತಿ, ನೀಲಾಂಬಿಕೆ, ವಿಶ್ವನಾಥ ಮತ್ತು ವಿದ್ಯಾಲಯದ ವಾರ್ಡನ್ ತೀರ್ಥಮ್ಮಾ ರೆಡ್ಡಿ ಹಾಗೂ ಪ್ರಮುಖರಾದ ಸಂಗ್ರಾಮ ಎಂಗಳೆ, ಉಮಾಕಾಂತ ಮೀಸೆ, ಸಂಗ್ರಾಮಪ್ಪಾ ಬಿರಾದಾರ, ಶರಣಪ್ಪಾ ಚಿಮಕೋಡೆ, ಶಾಮರಾವ ಮ್ಯಾಕರೆ, ಗುರುನಾಥ ಬಿರಾದಾರ, ಶ್ರೀಕಾಂತ ಸ್ವಾಮಿ, ಮಲ್ಲಿಕಾರ್ಜುನ ಹುಡಗೆ, ಶರಣಪ್ಪಾ ಖೇಡ್, ಆರ್.ಎಸ್. ಬಿರಾದಾರ, ಲಕ್ಷಿö್ಮÃಬಾಯಿ ಮಾಳಗೆ, ಲಕ್ಷಿö್ಮÃಬಾಯಿ ಬಿರಾದಾರ, ಸೂರ್ಯಕಾಂತ ಮಾಳಗೆ, ಮಕ್ಕಳ ಪಾಲಕರು, ಪ್ರಸಾದ ನಿಲಯದ ಮತ್ತು ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿಗಳು, ಸುಮಾರು ಒಂದು ಸಾವಿರ ಪಾಲಕರು-ಪೋಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪೂಜ್ಯರಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅಲ್ಲದೇ ವಿಜ್ಞಾನ ಮೇಳ ಪ್ರದರ್ಶನ ಮಾಡಲಾಯಿತು.
ಅರ್ಪಿತಾ ಜಗನ್ನಾಥ ಸ್ವಾಗತ ಕೋರಿದರೆ, ರಾಜುಜುಬ್ರೆ ಮತ್ತು ನೇಹಾ ವೀರಶೆಟ್ಟಿ ನಿರೂಪಿಸಿದರು. ಕು. ಭಾಗ್ಯಶ್ರೀ ಅನೀಲ ವಂದಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading