Popular Posts

ಜನವಿರೋಧಿ–ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಾಷ್ಟ್ರಮಟ್ಟದ ಒಂದು ದಿನದ ಮುಷ್ಕರ

ಬೀದರ್:-ಕೇಂದ್ರ ಸರ್ಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಖಾಸಗೀಕರಣ ನೀತಿಗಳ ವಿರುದ್ಧ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ ಮತ್ತು ನೌಕರರ ಸಂಘ (ಂIಖಖಃಇA),ಆಲ್ ಇಂಡಿಯಾ ಬ್ಯಾಂಕರ್ಸ್ ಅಸೋಸಿಯೇಶನ್ ಹಾಗೂ ಎಲ್‌ಐಸಿ ನೌಕರರ ಸಂಘಟನೆಗಳ ಸಹಯೋಗದಲ್ಲಿ ಇಂದು ಒಂದು ದಿನದ ರಾಷ್ಟ್ರಮಟ್ಟದ ಮುಷಕರವನ್ನು ನಗರದ ಎಲ್‌ಐಸಿ ಕೇಂದ್ರ ಕಚೇರಿಯ ಎದುರಗಡೆ ಮಾಡಲಾಯಿತು.
ಪ್ರಮುಖ ಬೇಡಿಕೆಗಳು: ನಾಲ್ಕು ಲೇಬರ್ ಕೋಡ್‌ಗಳು ಮತ್ತು ನಿಯಮಾವಳಿಗಳನ್ನು ರದ್ದುಪಡಿಸಬೇಕು,
ಡ್ರಾಫ್ಟ್ ಸೀಡ್ ಬಿಲ್ ಮತ್ತು ಎಲೆಕ್ಟ್ರಿಸಿಟಿ ಅಮೆಂಡ್‌ಮೆAಟ್ ಬಿಲ್ ವಾಪಸ್ ಪಡೆಯಬೇಕು. ಒಉಓಖಇಉಂ ಮರುಸ್ಥಾಪಿಸಿ ವಿಕ್ಸಿತ್ ಭಾರತ ಉದ್ಯೋಗ ಕಾಯ್ದೆ ರದ್ದುಪಡಿಸಬೇಕು. ಇನ್ಸೂರೆನ್ಸ್ ಕ್ಷೇತ್ರದಲ್ಲಿ 100% ಎಫ್‌ಡಿಐ ವಾಪಸ್ ಪಡೆಯಬೇಕು. ವಿಕ್ಸಿತ್ ಭಾರತ ಶಿಕ್ಷಣ ಅಧಿಷ್ಠಾನ ಬಿಲ್ ಹಿಂಪಡೆಯಬೇಕು. ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ, ಅಂಗನವಾಡಿ, ಆಶಾ, ಎಂಡಿಎA ಹಾಗೂ ಎನ್‌ಎಚ್‌ಎಂ ಸಿಬ್ಬಂದಿಯನ್ನು ಶಾಶ್ವತಗೊಳಿಸಬೇಕು. ಗ್ರಾಮಿಣ ಬ್ಯಾಂಕಗಳಲ್ಲಿ  ಐಪಿಓ  ಪ್ರಾಸ್ತಾವನೆ ವಿರೋಧಿಸಬೇಕು. ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹಾಗೂ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಇನ್ಸುರೆನ್ಸ್ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಲ್ಲೇಶ, ಪ್ರದಾನ ಕಾರ್ಯದರ್ಶಿ ರಾಜಶೇಖರ, ಖಜಾಂಚಿ ವಿಜಯಕುಮಾರ, ಮಾಜಿ ಅಧ್ಯಕ್ಷರಾದ ಬಸವರಾಜ ಮಾಳಗೆ, ಶಿವಲಿಂಗಪ್ಪಾ, ಸತೀಶ ನಾಟೇಕರ್, ಮಹಾಲ್ಷಿö್ಮ, ವಿಜಯಲಕ್ಷಿö್ಮ,  ಕರ್ಣಾಟಕ ಗ್ರಾಮೀಣ ಬ್ಯಾಂಕ್(ಏಉಃಔA )ನ ಕಾರ್ಯಾಧ್ಯಕ್ಷ ಸಿದ್ದಣ್ಣ ಎಚ್. ಮಂದರವಾಡಕರ್, ಪ್ರಾದೇಶಿಕ ಅಧ್ಯಕ್ಷ ಸಂತೋಷ್ ಹಿರೇಮಠ, (ಏಉಃ ಔಂ) ಸಹಾಯಕ ಪ್ರಧಾನ ಕಾರ್ಯದರ್ಶಿ ಸಚಿನ್ ಸೋಶೆಟ್ಟಿ, (ಏಉಃಉS) ಪ್ರತಿನಿಧಿ ಸಂತೋಷ್ ಬಶೇಟ್ಟಿ (ಏಉಃಎS), ಜಿಲ್ಲಾ ಕಾರ್ಯದರ್ಶಿ ಹವಗಿ ಸ್ವಾಮಿ, (ಏಉಃ ಖಇWಂ )ಪ್ರತಿನಿಧಿ ಮಂಜುನಾಥ್ ಭಗವತ್ ಹಾಗೂ (ಏಉಃ Sಅ/Sಖಿ) ವೆಲ್ಫೇರ್ ಅಸೋಸಿಯೇಷನ್ ಕಲಬುರಗಿ ಪ್ರತಿನಿಧಿ ವೆನುಗೋಪಾಲ್, ಕೆನಾರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಶಿವಾಜಿರಾವ ಮಾನೆ  ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!