1
1
ಕಲಬುರಗಿ,ಫೆ.14.(ಕರ್ನಾಟಕ ವಾರ್ತೆ)-ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಹಾಗೂ ಹೋಳಿ ಹಬ್ಬ ಮತ್ತು ಬೇಸಿಗೆ ರಜೆಗಳ ಹಿನ್ನೆಲೆಯಲ್ಲಿ ಸೋಲಾಪುರ ವಿಭಾಗದ ಮೂಲಕ ಚಲಿಸುವ ಕೆಳಕಂಡ ವಿಶೇಷ ರೈಲುಗಳ ಸೇವೆಯನ್ನು ಮುಂದುವರಿಸಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೋಲಾಪುರ-ಲೋಕಮಾನ್ಯ ತಿಲಕ್ (ರೈಲು ಸಂಖ್ಯೆ 01435) ಟರ್ಮಿನಸ್ ಮುಂಬೈ ಸಾಪ್ತಾಹಿಕ ವಿಶೇಷ ರೈಲು ಪ್ರತಿ ಮಂಗಳವಾರ 2026ರ ಜುಲೈ 14 ರವರೆಗೆ ಮುಂದುವರೆಸಿದ್ದು, ಈ ಹಿಂದೆ ಈ ರೈಲು ಫೆಬ್ರವರಿ 24 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು.
ಲೋಕಮಾನ್ಯ ತಿಲಕ್ ಟರ್ಮಿನಸ್ ಮುಂಬೈ-ಸೋಲಾಪುರ ಸಾಪ್ತಾಹಿಕ (ರೈಲು ಸಂಖ್ಯೆ 01436) ವಿಶೇಷ ರೈಲು ಪ್ರತಿ ಬುಧವಾರ 2026ರ ಜುಲೈ 15 ರವರೆಗೆ ಮುಂದುವರಿಸಿದ್ದು, ಈ ಹಿಂದೆ ಫೆಬ್ರವರಿ 25 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು.
ಸೋಲಾಪುರ-ಅನಕಪಲ್ಲೆ (ರೈಲು ಸಂಖ್ಯೆ 01477) ಸಾಪ್ತಾಹಿಕ ವಿಶೇಷ ರೈಲು ಪ್ರತಿ ಶುಕ್ರವಾರದಂದು 2026ರ ಜುಲೈ 10 ರವರೆಗೆ ಸಂಚಾರ ಮುಂದುವರಿಸಲಾಗಿದ್ದು, ಈ ಹಿಂದೆ ಈ ರೈಲು ಫೆಬ್ರವರಿ 27 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು.
ಅನಕಪಲ್ಲೆ-ಸೋಲಾಪುರ (ರೈಲು ಸಂಖ್ಯೆ 01478) ಸಾಪ್ತಾಹಿಕ ವಿಶೇಷ ರೈಲು ಪ್ರತಿ ಶನಿವಾರದಂದು 2026ರ ಜುಲೈ 11 ರವರೆಗೆ ಮುಂದುವರಿಸಲಾಗಿದ್ದು, ಈ ಹಿಂದೆ ಈ ರೈಲು ಫೆಬ್ರವರಿ 27 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು.
ದೈನಂದಿನ ರೈಲುಗಳು ಮುಂದುವರಿಕೆ: ಅದೇ ರೀತಿ ಸೋಲಾಪುರ-ದೌಂಡ್ (ರೈಲು ಸಂಖ್ಯೆ 01461/01462), ಸೋಲಾಪುರ-ಕಲಬುರಗಿ (ರೈಲು ಸಂಖ್ಯೆ 01465/01466) ಹಾಗೂ ಹಡಪ್ಸರ್-ಹರಂಗುಲ್ (ರೈಲು ಸಂಖ್ಯೆ 01487/01488) ಕಾಯ್ದಿರಿಸದ ದೈನಂದಿನ ವಿಶೇಷ ರೈಲುಗಳು 2026ರ ಜುಲೈ 15 ರವರೆಗೆ ಮುಂದುವರಿಸಿದ್ದು, ಈ ಹಿಂದೆ ಈ ವಿಶೇಷ ದೈನಂದಿನ ರೈಲುಗಳು 2026ರ ಫೆಬ್ರವರಿ 28 ರವರೆಗೆ ಓಡಾಟ ನಡೆಸಲಿವೆ ಎಂದು ತಿಳಿಸಲಾಗಿತ್ತು.
ರೈಲುಗಳ ಸಮಯ, ಸಂಯೋಜನೆ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬುಕಿಂಗ್, ವಿಶೇಷ ಶುಲ್ಕದ ಮೇಲೆ ವಿಶೇಷ ರೈಲುಗಳ ಪ್ರಯಾಣಕ್ಕಾಗಿ ಕಾಯ್ದಿರಿಸುವಿಕೆಗಳು ಎಲ್ಲಾ ಗಣಕೀಕೃತ ಮೀಸಲಾತಿ ಕೇಂದ್ರಗಳಲ್ಲಿ ಮತ್ತು ತಿತಿತಿ.iಡಿಛಿಣಛಿ.ಛಿo.iಟಿ ವೆಬ್ಸೈಟ್ದಲ್ಲಿ ಲಭ್ಯವಿದ್ದು, ಕಾಯ್ದಿರಿಸದ ಬೋಗಿಗಳ ಬುಕಿಂಗ್ನ್ನು ನಿಲ್ದಾಣಗಳಲ್ಲಿನ ಬುಕಿಂಗ್ ಕೌಂಟರ್ಗಳಲ್ಲಿ ಮತ್ತು ರೈಲ್ಒನ್ ಅಪ್ಲಿಕೇಶನ್ ಮೂಲಕವೂ ಮಾಡಬಹುದಾಗಿದೆ. ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ತಪ್ಪದೇ ಟಿಕೇಟ್ದೊಂದಿಗೆ ಪ್ರಯಾಣಿಸಬೇಕು.
ಈ ವಿಶೇಷ ರೈಲುಗಳ ನಿಲುಗಡೆಗಳ ವಿವರವಾದ ಸಮಯಕ್ಕಾಗಿ ತಿತಿತಿ.eಟಿquiಡಿಥಿ.iಟಿಜiಚಿಟಿಡಿಚಿiಟ.gov.iಟಿ ಗೆ ಭೇಟಿ ನೀಡಲು ಅಥವಾ ರೈಲ್ಒನ್ (ಖಚಿiಟಔಟಿe) ಅಪ್ಲಿಕೇಶನ್ ಅಥವಾ ಎನ್ಟಿಇಎಸ್ (ಓಖಿಇS) ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಪಡೆಯಬಹುದಾಗಿದೆ.
Subscribe to get the latest posts sent to your email.