Popular Posts

ನಾಳೆ ಬೀದರ್‌ನಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ 

ಬೀದರ್: ಸರಿಗಮಪ ಎಂಬ ಜನಪ್ರಿಯ ಗಾನ ರಿಯಾಲಿಟಿ ಶೋ ತನ್ನ ಹೊಸ ಆವೃತ್ತಿಯಾದ ಲಿಟಲ್ ಚಾಂಪ್ಸ್ ಮೂಲಕ ಮತ್ತೆ ಕನ್ನಡಿಗರ ಮನ ಗೆಲ್ಲಲು ಸಜ್ಜಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದ ಆಡಿಷನ್‌ಗಳು ರಾಜ್ಯದ 31 ಜಿಲ್ಲೆಗಳಲ್ಲಿ ನಡೆಯಲಿದ್ದು, ಬೀದರ್ ಜಿಲ್ಲೆಯ ಮಕ್ಕಳಿಗೂ ತಮ್ಮ ಪ್ರತಿಭೆ ತೋರಿಸುವ ಸುವರ್ಣಾವಕಾಶ ದೊರಕಿದೆ.
ನಾಳೆ ಬೆಳಿಗ್ಗೆ 9 ಗಂಟೆಗೆ ಚಿದ್ರಿ ರಸ್ತೆಯಲ್ಲಿರುವ ಹನುಮಾನ ನಗರದಲ್ಲಿರುವ ಕುದ್ರೆ ಏಜ್ಯುಕೇಶನ್ ಕ್ಯಾಂಪಸ್ ನಲ್ಲಿರುವ ಫಿನಿಕ್ಸ್ ವಲ್ಲಾದಲ್ಲಿ ಜರುಗಲಿದೆ.
3ರಿಂದ 15 ವರ್ಷದೊಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧಿಗಳು ಮೂರು ವಿಭಿನ್ನ ಹಾಡುಗಳನ್ನು ಸಿದ್ಧಪಡಿಸಿಕೊಂಡು ಬರಬೇಕು. ಯಾವುದೇ ರೀತಿಯ ಕರಾಓಕೆ ಬಳಕೆ ಅನುಮತಿಸಲಾಗುವುದಿಲ್ಲ. ಆಡಿಷನ್‌ಗೆ ಆಗಮಿಸುವವರು ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ವಿಳಾಸದ ದಾಖಲೆಯ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ವಾಹಿನಿಯು ಸ್ಪಷ್ಟಪಡಿಸಿರುವಂತೆ, ಆಡಿಷನ್‌ಗೆ ಯಾವುದೇ ಶುಲ್ಕವಿಲ್ಲ. ವಾಹಿನಿಯ ಹೆಸರಿನಲ್ಲಿ ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಹಾಡುವ ಪ್ರತಿಭೆ ಹೊಂದಿರುವ ಮಕ್ಕಳಿಗೆ ಇದು ಒಂದು ಅದ್ಭುತ ಅವಕಾಶವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಆಡಿಷನ್‌ಗೆ ಕರೆತರಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!