Popular Posts

ವಿಜ್ಞಾನ ಹಾಗೂ ಗಣಿತ ವಿಷಯದ ಬಗ್ಗೆ ದೃಷ್ಟೀವಿಶೇಷ ಚೇತನ ಮಕ್ಕಳಿಂದ ವಸ್ತು ಪ್ರದರ್ಶನ

ಶ್ರೀ ಮಾಣಿಕ ಪ್ರಭು ಶಿಕ್ಷಣ ಸಮಿತಿ ಸಂಚಾಲಿತ ಶ್ರೀ ಮಾಣಿಕಪ್ರಭು ಅಂಧ ಮಕ್ಕಳ ಪಾಠಶಾಲೆ ಮತ್ತು ವಿಷನ್ ಎಂಪವರ್ಡ್ ಇವರ ಸಂಯುಕ್ತಶ್ರಯದಲ್ಲಿ ಸೈನ್ಸ್ ಫೇರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಪ್ರರ್ಥನೆ ಗೀತೆಯು ಶಾಲೆಯ ಮಕ್ಕಳಿಂದ ನಡೆಸಿಕೊಡಲಾಯಿತು. ಹಾಗೂ ಸರ್. ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮೂಲಕ ವೇದಿಕಿಯ ಮೇಲೆ ಇರುವ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ವಿಷನ್ ಎಂಪವರ್ಡ್ ಫೀಲ್ಡ್ ಕೊ – ಆರ್ಡಿನೇಟರ್ ಆಗಿರುವ ಸೃಷ್ಟಿ ಬಿರಾದರ್ ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ನುಡಿದರು. ಅದೆ ರೀತಿಯಾಗಿ ಶ್ರೀ ಮಾಣಿಕ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ರಜನಿ ಅಯ್ಯರ್ ಅವರು ತಮ್ಮ ಮುಖ್ಯ ಅತಿಥಿಯ ನುಡಿಯಲ್ಲಿ ಶ್ರೀ ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು ಹಾಗೂ ಅಂಧ ಮಕ್ಕಳು ಮಾಡುತ್ತಿರುವ ವಿಜ್ಞಾನ ಚಟುವಟಿಕೆಗಳು ಮಾಡುತ್ತಿರುವುದನ್ನು ನೋಡಿ ತಮ್ಮ ಮಾತುಗಳಲ್ಲಿ ಖುಷಿಯನ್ನು ವ್ಯಕ್ತಪಡಿಸಿದರು. ಅದೆ ರೀತಿಯಾಗಿ ಶ್ರೀ ಮಾಣಿಕಪ್ರಭು ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಆನಂದಕುಮಾರ. ಎಸ್ ಅವರು ತಮ್ಮ ಮಾತುಗಳ ಮೂಲಕ ವಿಜ್ಞಾನದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಹಾಗೇಯೇ ಶ್ರೀ ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯ ಮುಖ್ಯೋಪಧ್ಯಾಯರಾಗಿರುವ ಶ್ರೀಮತಿ ಸುಭದ್ರ. ಆರ್. ಗಿರಿ ಅವರು ವಿಷನ್ ಎಂಪವರ್ಡ್ ಸಂಸ್ಥೆ ಹಾಗೂ ಶ್ರೀ ಮಾಣಿಕಪ್ರಭು ಅಂಧ ಮಕ್ಕಳ ಪಾಠಶಾಲೆಯ ಇವರ ಸಹಯೋಗದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಬಗ್ಗೆ ತಮ್ಮ ಅತಿಥಿ ಭಾಷಣದಲ್ಲಿ ಮಾತಾನ್ನಾಡಿ ಖುಷಿಯನ್ನ ವ್ಯಕ್ತಪಡಿಸಿದರು. ಅದೇ ರೀತಿಯಾಗಿ ಶ್ರೀ ಮಾಣಿಕಪ್ರಭು ಶಿಕ್ಷಣ ಸಮಿತಿಯ ವ್ಯವಸ್ಥಾಪಕರಾಗಿರುವ ಶ್ರೀಯುತ ಪ್ರಭು.ಎಂ.ಪಂಚಾಳ ಅವರು ತಮ್ಮ ಅಧ್ಯಕ್ಷತೆಯ ನುಡಿಯನ್ನು ನುಡಿದರು. ಹಾಗೇಯೇ ಈ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿರುವಂತಹ ದೃಷ್ಟೀವಿಶೇಷ ಚೇತನ ಮಕ್ಕಳಿಂದ ಗಣಿತ ಹಾಗೂ ವಿಜ್ಞಾನದಲ್ಲಿ ಅವರು ಕಲಿತಿರುವ ಹಲವಾರು ಪ್ರಯೋಗಗಳನ್ನು ಈ ಕಾರ್ಯಕ್ರಮದಲ್ಲಿ ಮಾಡಿ ತೋರಿಸಿದರು. ಕಾರ್ಯಕ್ರಮದ ನಿರೂಪಣೆ – ಶ್ರೀಯುತ ತುಕರಾಮ ಸರ್ ಸ್ವಾಗತ ಭಾಷಣ – ಕುಮಾರಿ ಅನುರಾಧ ಕಾರ್ಯಕ್ರಮದ ವಂದಾನರ್ಪಣೆ ಶ್ರೀಯುತ ಮೌನೇಶ ಹಾಗೂ ರಾಜಪ್ಪಾ, ವಿವೇಕನಂದ, ನಾಗೇಶ, ನಾಗಣ್ಣಾ, ಸರೀತಾ, ಶಾಂತಾ, ಸುನೀತಾ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಾಗೇಯೇ ಶ್ರೀ ಮಾಣಿಕ ಪ್ರಭು ಅಂಧ ಮಕ್ಕಳ ಶಾಲೆಯ ಮಕ್ಕಳು ಮಾಡಿರುವ ಈ ಒಂದು ಪ್ರಯೋಗವನ್ನು ಹಾಲವಾರು ಶಾಲಾ ಮಕ್ಕಳು ವಿಕ್ಷಿಸಿ ತಮ್ಮ ಖುಷಿಯನ್ನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!