Popular Posts

ಆ.೧೩ರಂದು ಹೂಗಾರ ಮಹಾಸಭಾದ ನೂತನ ಪದಾಧಿಕಾರಿಗಳ ಪದಗ್ರಹಣ

ಬೀದರ್: ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ನೂತನ ಬೀದರ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇದೇ ಆಗಸ್ಟ್ ೧೩ ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ರಾಜ್ಯ ಸಲಹಾ ಕಾರ್ಯಧ್ಯಕ್ಷ ಚಂದ್ರಕಾAತ ಹೂಗಾರ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಗಾಂಧಿ ಗಂಜ್‌ನ ಬಸವಣ್ಣನ ದೇವಸ್ಥಾನದಿಂದ ಚಿದ್ರಿ ಬಳಿಯ ಬುತ್ತಿ ಬಸವಣ್ಣನ ದೇವಸ್ಥಾನದ ವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ನಂತರ ಬುತ್ತಿ ಬಸವಣ್ಣನ ದೇವಸ್ಥಾನದ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಕಪಿಲ್ ಹೂಗಾರ, ಕಾರ್ಯಾಧ್ಯಕ್ಷ ನೇಮಕವಾದ ಸಿದ್ದು ಫುಲಾರಿ ಸೇರಿದಂತೆ ಇತರೆ ಪದಾಧಿಕಾರಿಗಳು ಅಲ್ಲಿ ಪದಗ್ರಹಣ ಮಾಡಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ರಾಜ್ಯಾಧ್ಯಕ್ಷ ಬಸವರಾe ಹೂಗಾರ ಆಗಮಿಸಲಿದ್ದಾರೆ. ಆದ್ದರಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆ ಕೊಟ್ಟರು.
ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದು ಫುಲಾರಿ ಮಾತನಾಡಿ, ಬಹು ದಿನಗಳ ಹೋರಾಟದ ಫಲವಾಗಿ ಅಂದಿನ ಬಸವರಾe ಬೊಮ್ಮಾಯಿ ಸರ್ಕಾರ ಹೂಗಾರ ನಿಗಮ ಮಂಡಳಿ ಸ್ಥಾಪಿಸಿತು, ಆದರೆ ಅದಕ್ಕೆ ಇಲ್ಲಿಯ ವರೆಗೆ ಅನುದಾನ ನೀಡಿಲ್ಲ, ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಈಗಾಗಲೇ ಸುಮಾರು ಸಾರಿ ರಾಜ್ಯ ಸರ್ಕಾರಕ್ಕೆ ೧ ಸಾವಿರ ಕೋಟಿ ಅನುದಾನ ನೀಡುವಂತೆ ಹಾಗೂ ಅಧ್ಯಕ್ಷರನ್ನು ನೇಮಕ ಮಾಡುವಂತೆ ಮನವಿ ಸಲ್ಲಿಸಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಶೀಘ್ರದಲ್ಲಿ ಸರ್ಕಾರ ಎಚ್ಛೆತ್ತುಕೊಂಡು ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸಮಾಜದ ಪ್ರಮುಖರಾದ ಪ್ರಮುಖರಾದ ಸತೀಶ ಹೂಗಾರ, ಶ್ರೀನಿವಾಸ, ಹಣಮಂತಪ್ಪ ಹೂಗಾರ, ಮಾದಪ್ಪ ಹೂಗಾರ, ಮಹದೇವ ಹೂಗಾರ, ಬಸವರಾಜ ಹೂಗಾರ, ರಾಜಕುಮಾರ, ಘಳೆಪ್ಪಾ ಸೇರಿದಂತೆ ಇತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading