1
1
ಬೀದರ್, ಆಗಸ್ಟ್ 25 : ಇದೇ ಆಗಸ್ಟ್ 29 ರಂದು ಮೇಜರ್ ಧ್ಯಾನ್‌ಚಂದ್ ರವರ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ವಿಜೃಂಭಣೆಯಿಂದ ಆಚರಿಸುವ ನಿಮಿತ್ತ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಬೀದರ್ ಜಿಲ್ಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಬೀದರ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಆಯೋಜಿಸಲಾದ ಸ್ಪರ್ಧೆಗಳ ವಿವರ, ಶಟಲ್ ಬ್ಯಾಡ್ಮಿಂಟನ್ (ಬಾಲಕ ಮತ್ತು ಬಾಲಕಿಯರಿಗೆ – ಸಿಂಗಲ್ಸ್ ಹಾಗೂ ಡಬಲ್ಸ್) 18 ವರ್ಷದೊಳಗಿನವರಿಗೆ ಮತ್ತು ಶಟಲ್ ಬ್ಯಾಡ್ಮಿಂಟನ್ ವೆಟರನ್ಸ್ (ಡಬಲ್ಸ್) 40 ವರ್ಷ ಮೇಲ್ಪಟ್ಟವರಿಗೆ.
ದಿನಾಂಕ & ಸ್ಥಳ 2026ರ ಆಗಸ್ಟ್ 28 ರಂದು ಬೀದರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್ ಭುರೆ (ಮೊ.ಸಂ. 9449034923) ಅವರನ್ನು ಸಂಪರ್ಕಿಸಬಹುದು. ವಾಲಿಬಾಲ್ (ಪುರುಷರಿಗೆ ಮಾತ್ರ-ಎಲ್ಲರಿಗೂ ಮುಕ್ತ) 2026ರ ಆಗಸ್ಟ್ 28 ರಂದು ಬೀದರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಕ್ರಮ (ಮೊ.ಸಂ.9148075926) ಅವರನ್ನು ಸಂಪರ್ಕಿಸಬಹುದು. ಸೈಕಲ್ ರ‍್ಯಾಲಿ (ಮಕ್ಕಳಿಗಾಗಿ) 2026ರ ಆಗಸ್ಟ್ 30 ರಂದು ಬೆಳಿಗ್ಗೆ 6.30ಕ್ಕೆ ಪ್ರಾರಂಭ. ಮಾರ್ಗ ಅಂಬೇಡ್ಕರ್ ವೃತ್ತದಿಂದ ನೆಹರು ಕ್ರೀಡಾಂಗಣದವರೆಗೆ ನಡೆಯಲಿದೆ ವಿನೋದ್ (ಮೊ.ಸಂ.7411428070), ವಿಶಾಲ್ (ಮೊ.ಸಂ. 6363873737) ಅವರನ್ನು ಸಂಪರ್ಕಿಸಬಹುದು. ಆಸಕ್ತ ಸ್ಪರ್ಧಾಳುಗಳು 2026ರ ಆಗಸ್ಟ್ 27 ರಂದು ಸಂಜೆ 6 ಗಂಟೆಯೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಬೀದರ್ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ನೆಹರು ಕ್ರೀಡಾಂಗಣ, ದೂರವಾಣಿ ಸಂಖ್ಯೆ: 08482-226681ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.