1
1

ಬೀದರ್: “ಸ್ವ-ಪರಿವರ್ತನೆಯಿಂದ ಮಾತ್ರ ವಿಶ್ವದ ಪರಿವರ್ತನೆ ಸಾಧ್ಯ ಎಂದು ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ಜಿ ಹೇಳಿದರು.
ಗುರುವಾರ ನಗರದ ಜಿ.ಪಿ ನಗರ ಬಡಾವಣೆಯಲ್ಲಿರುವ ಬ್ರಹ್ಮಾಕುಮಾರಿಸ್ ಕೇಂದ್ರ ಪಾವನಧಾಮ ಅವರಣದಲ್ಲಿ ಇತ್ತಿಚೀಗೆ ಎಸ್.ಬಿ.ಆಯ್ ಎ.ಟಿ.ಎಮ್ ದರೊಡೆಕೋರರ ಹೆಡೆಮುರಿ ಕಟ್ಟುವಲ್ಲಿ ಯಶಶ್ವಿಯಾದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಪ್ರದಿಪ ಗುಂಟಿ ಹಾಗೂ ಅದ್ಭುತ ಸಾಧನೆಗೈದು ಇತ್ತಿಚೀಗೆ ಮುಖ್ಯಮಂತ್ರಿಗಳಿAದ ಪ್ರಶಸ್ತಿ ಮುಡಿಗೇರಿಸಿಕೊಂಡ ಶೈನಿ ಪ್ರದಿಪ ಗುಂಟಿ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಪ್ರತಿಯೊಬ್ಬರೂ ದಿನದಲ್ಲಿ ಕನಿಷ್ಠ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮನಸ್ಸಿನ ಶಾಂತಿ ಹಾಗೂ ಸಕಾರಾತ್ಮಕ ಬದಲಾವಣೆ ಸಾಧ್ಯ. ಪರಮಾತ್ಮನು ನಿರಾಕಾರನಾಗಿದ್ದು, ಜಗತ್ತಿನ ಕಲ್ಯಾಣಕ್ಕಾಗಿ ಜ್ಞಾನವನ್ನು ನೀಡುತ್ತಿದ್ದಾನೆ. ಕೋಪ, ದ್ವೇಷ ಅಥವಾ ಕೆಟ್ಟ ವಿಚಾರಗಳು ಮನಸ್ಸಿಗೆ ಬಂದಾಗ ತಕ್ಷಣವೇ ಪರಮಾತ್ಮನನ್ನು ಧ್ಯಾನಿಸುವ ಮೂಲಕ ಅವುಗಳನ್ನು ನಿಯಂತ್ರಿಸಬಹುದು. ಋಷಿಮುನಿಗಳು ಬಳಸುತ್ತಿದ್ದ ‘ಮೂರನೇ ನೇತ್ರ’ (ಜ್ಞಾನದ ಕಣ್ಣು) ಪ್ರತಿಯೊಬ್ಬರಲ್ಲೂ ಇದ್ದು, ಶುದ್ಧ ಮನಸ್ಸಿನಿಂದ ಇತರರ ತಪ್ಪುಗಳನ್ನೂ ಸರಿಪಡಿಸುವ ಶಕ್ತಿ ನಮಗಿದೆ ಎಂದು ಬಹೆನ್ಜಿ ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ ಅವರು, ಇತ್ತೀಚೆಗೆ ಬಿಹಾರದಲ್ಲಿ ನಡೆದ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಸ್ಮರಿಸಿದ ಅವರು, ಬೀದರನಿಂದ 28 ಜನರ ಪೊಲೀಸ್ ತಂಡವೊAದು ಕಾರ್ಯಾಚರಣೆಗಾಗಿ ಬಿಹಾರಕ್ಕೆ ತೆರಳಿತ್ತು. ಕಾರ್ಯಾಚರಣೆ ಅತ್ಯಂತ ಅಪಾಯಕಾರಿಯಾಗಿದ್ದರೂ, ತಂಡದ ಒಬ್ಬ ಸಿಬ್ಬಂದಿಯ ಕೈಗೆ ಸಣ್ಣ ಗಾಯ (ಫ್ರ್ಯಾಕ್ಚರ್) ಆಗಿದ್ದನ್ನು ಹೊರತುಪಡಿಸಿ, ಇಡೀ ತಂಡ ಸುರಕ್ಷಿತವಾಗಿ ಮರಳಿದೆ. ಈ ಯಶಸ್ಸು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ದೇವರ ಆಶೀರ್ವಾದ ಹಾಗೂ ಹಿರಿಯರ ಹಾರೈಕೆಯೇ ಕಾರಣ ಎಂದು ಅವರು ಕೃತಜ್ಞತೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿದ ಅಕ್ಕಪಡೆಯ ರಾಜ್ಯ ಸಂಚಾಲಕಿ ಶೈನಿ ಪ್ರದಿಪ ಗುಂಟಿ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಮಹಿಳಾ ಪೊಲೀಸ್ ಸಿಬ್ಬಂದಿಯ ‘ಅಕ್ಕಪಡೆ’ ಉಪಕ್ರಮವು ಇಂದು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ಸುರಕ್ಷತೆಯ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಣೆಯಾಗುತ್ತಿದೆ ಹರ್ಷ ವ್ಯಕ್ತಪಡಿಸಿದ ಅವರು, ಬ್ರಹ್ಮಕುಮಾರೀಸ್ ಸಂಸ್ಥೆಯ ಬೆಂಬಲ ಹಾಗೂ ಮಾರ್ಗದರ್ಶನದಿಂದ ವೃತ್ತಿ ಜೀವನದಲ್ಲಿ ಹೆಚ್ಚಿನ ಶಕ್ತಿ ಸಿಕ್ಕಿದೆ ಎಂದು ಅವರು ಮೌಂಟ್ ಅಬುವಿಗೆ ತೆರಳುವ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊAಡರು.
ಕೇAದ್ರದ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Subscribe to get the latest posts sent to your email.