Popular Posts

ಕೆ.ಕೆ.ಆರ್.ಟಿ.ಸಿ ಕೇಂದ್ರ ಕಛೇರಿಗೆ ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಭೇಟಿ

ಕಲಬುರಗಿ, ಆಗಸ್ಟ್.13(ಕಕ ವಾರ್ತೆ) ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯ ಅಧ್ಯಕ್ಷ ಅತುಲ್ ಕುಮಾರ್ ತಿವಾರಿ, ಹಾಗೂ ಸದಸ್ಯರೂ ಗುರುವಾರ ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ, ವಿವಿಧ ಘಟಕಗಳು ಮತ್ತು ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿದರು.

ಸಮಿತಿಯ ಸದಸ್ಯರುಗಳಾದ ದ್ವಾರಕನಾಥ ಬಾಬು (ಸರಕಾರದ ನಿವೃತ್ತ ಕಾರ್ಯದರ್ಶಿಗಳು) ಮತ್ತು ಡಾ. ಅಬ್ದುಲ್ ಪಿಂಜರಿ ಅವರನ್ನೊಳಗೊಂಡ ತಂಡವು ಕೆ.ಕೆ.ಆರ್.ಟಿ.ಸಿ ಕೇಂದ್ರ ಕಛೇರಿ, ಕಲಬುರಗಿ ಘಟಕ-1, 2, 4, ಕೇಂದ್ರ ಬಸ್ ನಿಲ್ದಾಣ ಹಾಗೂ ವಿಭಾಗೀಯ ಕಾರ್ಯಾಗಾರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೇಂದ್ರ ಕಛೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಮಿತಿಯು ನಿಗಮದ ಕಾರ್ಯಾಚರಣೆ, ಶಕ್ತಿ ಯೋಜನೆ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತು ವಿವರವಾದ ಮಾಹಿತಿ ಪಡೆಯಿತು. ಆನಂತರ ವಿವಿಧ ಘಟಕಗಳಿಗೆ ಭೇಟಿ ನೀಡಿ ವಾಹನಗಳ ನಿರ್ವಹಣೆ, ಸ್ವಚ್ಛತೆ, ಡಿ.ಸಿ. ಎಸ್ ತಂತ್ರಾಂಶ ಹಾಗೂ ಸ್ಮಾರ್ಟ್ ಇ.ಟಿ.ಎಂ ಬಳಕೆಯನ್ನು ಪರಿಶೀಲಿಸಿತು. ಜೊತೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಚಾಲನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಕೆ.ಕೆ.ಆರ್.ಟಿ.ಸಿ.ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಶೀಲಾ ಬಿ.,ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ ವಿ.ಹೆಚ್., ಮುಖ್ಯ ಯಾಂತ್ರಿಕ ಅಭಿಯಂತರರಾದ ಸಂತೋμï ಗೋಗೇರಿ, ಮುಖ್ಯ ಲೆಕ್ಕಾಧಿಕಾರಿ ಬಸವರಾಜ ಬೆಳಗಾವಿ, ಉಪಮುಖ್ಯ ಯೋಜನೆ ಮತ್ತು ಸಂಖ್ಯಾಧಿಕಾರಿ ಜಗದೀಶ ನಾಯಕ ಹಾಗೂ ಇಲಾಖೆಯ ಇತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading