Popular Posts

ಜಿಲ್ಲಾ ಆರ್ ಸಿ ಹೇಚ್ ಅಧಿಕಾರಿಯಾಗಿ ಡಾ. ಮಹಾದೆವಪ್ಪ ಅಧಿಕಾರ ಸ್ವೀಕರ ಗೌರವ ಸನ್ಮಾನ

ಬೀದರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರ್ ಸಿ ಹೇಚ್ ಅಧಿಕಾರಿಯಾಗಿ ಡಾ. ಮಹಾದೆವಪ್ಪ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ವತಿಯಿಂದ ಅವರನ್ನು ಗೌರವ ಸನ್ಮಾನ ಮಾಡಲಾಯಿತು.
ನೂತನ ಆರ್‍ಸಿಎಚ್‍ಒ ಅಧಿಕಾರ ವಹಿಸಿಕೊಂಡ ಡಾ. ಮಹಾದೆವಪ್ಪ ಅವರನ್ನು ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಸೌಹಾರ್ದಯುತವಾಗಿ ಭೇಟಿ ಮಾಡಿ, ಪುಸ್ತಕ ನೀಡಿ, ಶಾಲು ಹೊದಿಸಿ ಅಭಿನಂದಿಸಿದರು.
ಡಾ. ಮಹಾದೆವಪ್ಪ ಅವರ ದಕ್ಷ ಆಡಳಿತ ಹಾಗೂ ಆರೋಗ್ಯ ಸೇವೆಯ ಸುದೀರ್ಘ ಅನುಭವದಿಂದ ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳು ಮತ್ತಷ್ಟು ಪರಿಣಾಮಕಾರಿಯಾಗಿ ಅನುμÁ್ಠನಗೊಳ್ಳಲಿವೆ ಎಂದು ಸಂಘದ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮಹಾದೆವಪ್ಪ ಅವರು, “ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯ ಸಹಕಾರದೊಂದಿಗೆ ಜಿಲ್ಲೆಯ ಆರೋಗ್ಯ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲು ಶ್ರಮಿಸಲಾಗುವುದು” ಎಂದು ತಿಳಿಸಿದರು
ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಇಲಾಖೆಯ ಸಿಬ್ಬಂದಿ ಸರ್ಕಾರದ ಆರೋಗ್ಯ ಯೋಜನೆಗಳನ್ನು ತೃಣಮಟ್ಟದಲ್ಲಿ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಎಲ್ಲರೂ ಒಗ್ಗಟ್ಟಿನಿಂದ ಜನಪರ ಆರೋಗ್ಯ ಸೇವೆ ನೀಡಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷರಾದ ಸುನಿಲ ಕಸ್ತೂರೆ ಪ್ರಧಾನ ಕಾರ್ಯದರ್ಶಿ: ವಿವೇಕ ಸ್ವಾಮಿ ಗೌರವ ಅಧ್ಯಕ್ಷರು ವೀರಶೆಟ್ಟಿ ಚನ್ನಶೆಟ್ಟಿ ಬೀದರ್ ತಾಲೂಕು ಅಧ್ಯಕ್ಷರು: ಮಹಮ್ಮದ್ ರಫಿಯೊದ್ದಿನ್ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು: ಸಮಿ ಪಟೇಲ್, ಬಸವರಾಜ ಕೊಸಮ್, ಓಂಕಾರ, ಅನಿಲಕುಮಾರ, ಅಲಿಮೊದ್ದಿನ್ ರವಿ ಗುಪ್ತ್, ಶಶಿಕಾಂತ, ಲೈಕೊದಿನ್, ವಹಿದ್ ಪರವಿಜ್, ನಂದು. ಶಾಮರಾವ, ಇಮಾನ್ವೆಲ್, ಹಾಗೂ ಸೆರಿದಂತೆ ಇಲಾಖೆಯ ಪ್ರಮುಖ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳ ನಿಕಟ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಪ್ರಮುಖ ಪದಾಧಿಕಾರಿಗಳು, ಇಲಾಖೆಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು ನೂತನ ಅಧಿಕಾರಿಗೆ ಶುಭ ಹಾರೈಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading