1
1

ಬೀದರ: ನಗರದ ಬ್ರೀಮ್ಸ್ ಆಸ್ಪತ್ರೆಯಲ್ಲಿ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ವತಿಯಿಂದ ದಿನಾಂಕ 25-08-2026 ಬೆಳಿಗ್ಗೆ 11:30 ಗಂಟೆಗೆ ನಾಡೋಜ ಪರಮಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರ 76ನೇ ಹುಟ್ಟು ಹಬ್ಬದ ನಿಮಿತ್ಯವಾಗಿ ಬಡ ರೋಗಗಳಿಗೆ ಹಾಲು, ಹಣ್ಣು-ಹಂಪಲ ಮತ್ತು ಬಿಸ್ಕಟ್‌ಗಳನ್ನು ವಿತರಣೆ ಮಾಡುವುದರ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.
ಮಹಾತ್ಮ ಬಸವೇಶ್ವರರ ಪೂಜೆಯನ್ನು ಬ್ರೀಮ್ಸ್ ಆಸ್ಪತ್ರೆಯ ಆಯುಷ್ಯಮಾನ ಭಾರತ ಜಿಲ್ಲಾ ಸಂಯೋಜಕರಾದ ಡಾ. ಶಂಕರರಾವ ದೇಶಮುಖ ರವರ ಕೈಯಿಂದ ನೆರವೇರಿಸಲಾಯಿತು. ನಂತರ ಅವರು ಮಾತನಾಡುತ್ತಾ, ಡಾ. ಬಸವಲಿಂಗ ಪಟ್ಟದ್ದೇವರು ಈ ಭಾಗದಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರದಿAದ ಕೂಡಿದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬಡ ದೀನ, ದಲಿತರ ಪ್ರತಿಭಾವಂತರಿಗೆ ಶಿಕ್ಷಣ ಕೊಡುವಂತಹ ಕಾರ್ಯ ಮಾಡುತ್ತಿದ್ದಾರೆ. ಅಲ್ಲಿ ಕಲಿತ ಮಕ್ಕಳು ರಾಜ್ಯ, ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರು ಬಸವ ತತ್ವವನ್ನು ಮನೆ ಮನೆಗೆ, ಹೊರ ರಾಜ್ಯಗಳಿಗೆ ಸಂದೇಶ ಮುಟ್ಟಿಸುವಂತಹ ಬಹುದೊಡ್ಡ ಕಾರ್ಯ ಮಾಡುತ್ತಿದ್ದಾರೆ. ಅವರ ಸೇವೆ ಶ್ರೇಷ್ಠದಾಯಕವಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ ಧಾರವಾಡದ ಪರಮಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು ಆಶೀರ್ವಚನ ನೀಡುತ್ತಾ, ಪೂಜ್ಯರು ಮಾತೃ ಹೃದಯಿಯಾಗಿದ್ದು, ಅನಾಥ ತಿಪ್ಪೆಯಲ್ಲಿ ಬಿದ್ದಂತಹ ಮಕ್ಕಳನ್ನು ತಂದು ಲಾಲನೆ-ಪೋಷಣೆ ಮಾಡಿ ಅವರ ಬದುಕು ಕಟ್ಟಿಕೊಟ್ಟಿದ್ದಾರೆ. ಬಡವ, ಶ್ರೀಮಂತ, ಜಾತಿ, ಮತ ಭೇದ ಮಾಡಲಾರದೇ ಸರ್ವರನ್ನು ಗೌರವದಿಂದ ಕಾಣುತ್ತಾರೆ. ಅವರೊಬ್ಬರು ಗುರುಲಿಂಗ ಜಂಗಮ ಪುರುಷರಾಗಿದ್ದಾರೆ. ಕರ್ನಾಟಕದ ಸುಮಾರು 5000 ಮಠಗಳಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನವು ಬಸವ ತತ್ವ ಲಿಂಗಾಯತ ಧರ್ಮದ ಮಠವಾಗಿದೆ. ಅವರ ಅಂತಃಕರಣ ಮಾನವೀಯ ಮತ್ತು ಸಾಮಾಜಿಕ ಮೌಲ್ಯದಿಂದ ಕೂಡಿದೆ. ಅವರ ಸೇವೆಯ ಆದರ್ಶತೆ ಮಠಾಧೀಶರಿಗೆ ಮಾದರಿಯಾಗಿದೆ ಎಂದು ನುಡಿದರು.
ಬಸವ ತತ್ವ ನಿಷ್ಠುರರಾದ ಡಾ. ದೇವಕಿ ನಾಗೊರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಡಾ. ಬಸವಲಿಂಗ ಪಟ್ಟದ್ದೇವರು ತಮ್ಮ ಹುಟ್ಟು ಹಬ್ಬವನ್ನು ಸುದೈವಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಸಂತಸ ವಿಷಯವಾದುದು, ಅವರೊಬ್ಬರು ಕನ್ನಡದ ಜಂಗಮರು, ಬಸವ ತತ್ವದ ಸಂದೇಶವನ್ನು ಸಮಾಜಕ್ಕೆ ಮುಟ್ಟಿಸುವಂತಹ ಬಹುದೊಡ್ಡ ಕಾರ್ಯ ಮಾಡುತ್ತಿದ್ದಾರೆ. ಅದರ ಜೊತೆಗೆ ಮೌಲ್ಯದಾಯಕ ಶಿಕ್ಷಣವನ್ನು ಮಕ್ಕಳಿಗೆ ಕೊಡುತ್ತಿದ್ದಾರೆ. ಅವರು ಅನಾಥ ಮಕ್ಕಳ ಕಣ್ಮಿಯಾಗಿದ್ದಾರೆ ಎಂದರು. ಶ್ರಾವಣ ಮಾಸ ಸೇವಾ ಸಮಿತಿಯ ಅಧ್ಯಕ್ಷರಾದ ಯೋಗೇಶ ಸಿರಿಗೇರೆ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರ ವಿಚಾರಗಳು ಮತ್ತು ಆದರ್ಶತೆಯು ನಮ್ಮಂತಹ ಯುವ ಜನಾಂಗಕ್ಕೆ ದಾರಿದೀಪವಾಗಿದೆ ಎಂದರು.
ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾದ ಭಾರತೀಯ ಬಸವ ಬಳಗದ ಮಹಿಳಾ ಘಟಕದ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ, ಡಾ. ಸಂತೋಷ ಭಂಗೂರೆ, ಡಾ. ವೈಜಿನಾಥ ಬಿರಾದಾರ ಮತ್ತು ಬ್ರೀಮ್ಸ್ ಆಸ್ಪತ್ರೆಯ ಸಿಬ್ಬಂದಿಗಳಾದ ಸಂತೋಷ ಮುಚಳಂಬೆ, ಶ್ರೀನಿವಾಸ ವಗ್ಗೆ, ಅರುಣಕುಮಾರ, ಮಂಜುನಾಥ ಮತ್ತು ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ವಿದ್ಯಾರ್ಥಿಗಳಾದ ಸಂಕೇತ, ಮಹೇಶ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಪ್ರೊ. ಸಂಗ್ರಾಮ ಎಂಗಳೆ ಸ್ವಾಗತ ಕೋರಿದರೆ, ಪ್ರೊ. ಉಮಾಕಾಂತ ಮೀಸೆ ನಿರೂಪಿಸಿದರು, ಸಂಗ್ರಾಮಪ್ಪಾ ಬಿರಾದಾರ ವಂದಿಸಿದರು. ನಂತರ ಬಡ ರೋಗಿಗಳಿಗೆ ಹಾಲು, ಹಣ್ಣ-ಹಂಪಲ ವಿತರಿಸಲಾಯಿತು.