Popular Posts

ಬಸವಣ್ಣನವರ ಪರಿಕಲ್ಪನೆ ಎತ್ತಿ ಹಿಡಿದವರು ಬೀದರ್ ಮಂದಿ: ಬಸವರಾಜ ಹೊರಟ್ಟಿ

ಬೀದರ್: ಬಸವಣ್ಣನವರ ಪರಿಕಲ್ಪನೆ ಎತ್ತಿ ಹಿಡಿದವರು ಕೇವಲ ಬಿದರ್ ಜನರು ಮಾತ್ರ. ಇವರ ಮುಗ್ದ ಸ್ವಭಾವ, ಸಹಕಾರ ಮನೋಭಾವ, ಇತರರ ಬಗ್ಗೆ ಇವರಿಗಿರುವ ಕಾಳಜಿ ಇಡೀ ನಾಡಿಗೆ ಮಾದರಿ ಪ್ರಾಯವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕದಿಂದ ೪೦ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿರುವ ಅವರು, ಬಸವಣ್ಣನವರ ಕರ್ಮಭೂಮಿ ಬೀದರ್‌ನಲ್ಲಿ ೪೦ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಮಾಡಲು ಮುಂದಾಗಿರುವುದು ಬಹಳ ಸಂತೋಷದ ಸಂಗತಿ. ಹೊರ ದೇಶಗಳಿಂದ ಪತ್ರಕರ್ತರನ್ನು ಸಮ್ಮೇಳನಕ್ಕೆ ಅವ್ಹಾನ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಅವರು ಬೀದರ್‌ಗೆ ಬಂದು ಬಸವಣ್ಣನವರ ಬಗ್ಗೆ ಅರಿತುಕೊಳ್ಳಲು ಬಹಳಷ್ಟು ಅನುಕುಲ ಆಗಲಿದೆ ಎಂದರು.
ಶಾಸಕಾAಗ, ಕಾರ್ಯಾಂಗ, ನ್ಯಾಯಾಂಗಗಳನ್ನು ಸರಿ ದಾರಿಗೆ ತರುವ, ಅವುಗಳ ಯೋಜನೆ ಹಾಗೂ ಕಾರ್ಯಶೈಲಿ ಬಿತ್ತರಿಸುವ ಕಾರ್ಯ ಮಾಧ್ಯಮಗಳು ಮಾಡುತ್ತವೆ. ಇಂದು ನನ್ನಂತಹ ಒಬ್ಬ ಪರಿಪೂರ್ಣ ರಾಜಕೀಯ ಧುರಿಣರನ್ನು ತಯ್ಯಾರು ಮಾಡುವ ಹಾಗೂ ಅಂಥವರಿಗೆ ಮಾರ್ಗದರ್ಶನ ಮಾಡುವ ಕಾರ್ಯ ಸಹ ಮಾಧ್ಯಮಗಳು ಮಾಡುತ್ತವೆ. ಇವತ್ತು ನಿಸ್ವಾರ್ಥಿ ರಾಜಕಾರಣಿಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ಮಾಧ್ಯಮಗಳ ಪಾತ್ರ ಬಹಳಷ್ಟಿದೆ ಎಂದರು.
ಮಾಧ್ಯಮಗಳಲ್ಲಿ ಇನ್ನು ಸಾಕಷ್ಟು ಮಹಿಳೆಯರು ತಮ್ಮನ್ನು ತಾವು ತೊಡಗಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲಿ ತೋರಿದ ಅಭಿಲಾಷೆ ಈ ಕ್ಷೇತ್ರದಲ್ಲೂ ತೋರಬೇಕು. ಇತ್ತಿಚೀಗೆ ತಗಡೂರು ಅವರ ನೇತೃತ್ವದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿರುವ ಸಮಾಜಮುಖಿ ಕಾರ್ಯ ಮೆಚ್ಚುವಂಥದ್ದು. ಮುಂಬರುವ ದಿನಗಳಲ್ಲಿ ತಾವು ನಿರ್ಧರಿಸಿದ ರಾಜ್ಯ ಸಮ್ಮೇಳನಕ್ಕೆ ಖಂಡಿತ ಆಗಮಿಸುವುದಾಗಿ ಹೊರಟ್ಟಿ ಭರವಸೆ ನೀಡಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ ಸಮ್ಮೇಳನದ ವೆಬಸೈಟ್ ಅನಾವರಣಗೊಳಿಸಿದರು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹಿಮ್ ಖಾನ್ ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಅನಂದ ದೇವಪ್ಪ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಸಂಘದ ಉಪಾಧ್ಯಕ್ಷರಾದ ಹೆಚ್.ಬು ಮದನಗೌಡ, ಮತ್ತಿಕೆರೆ ಜಯರಾಮ, ಅಜ್ಜಮಾಡ ರಮೇಶ ಕುಟ್ಟಪ್ಪ, ಕಾರ್ಯದರ್ಶಿಗಳಾದ ಪುಂಢಲಿಕ ಬಾಳೊಜಿ, ಸೋಮಶೇಖರ ಕೆರೆಗುಡು, ಖಜಾಂಚಿ ವಾಸುದೇವ ಹೊಳ್ಳ, ಮಾಜಿ ಉಪಾಧ್ಯಕ್ಷ  ವೇದಿಕೆಯಲ್ಲಿದ್ದರು. ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ ಠಾಕೂರ್, ಅಡಾಕ ಸಮಿತಿ ಸದಸ್ಯರಾದ ಶಿವಕುಮಾರ ಸ್ವಾಮಿ, ಅಪ್ಪಾರಾವ ಸೌದಿ, ಮಾಜಿ ಜಿಲ್ಲಾಧ್ಯಕ್ಷರಾದ ಗಂಧರ್ವ ಸೇನಾ, ಮಲ್ಲಿಕಾರ್ಜುನ ಬಿರಾದಾರ, ಬಸವರಾಜ ಕಾಮಶೆಟ್ಟಿ, ಅಶೋಕಕುಮಾರ ಕರಂಜಿ, ಡಿ.ಕೆ ಗಣಪತಿ, ದೀಪಕ ವಾಲಿ, ಡಾ.ರಜನೀಶ ವಾಲಿ ಹಾಗೂ ಇತರರಿದ್ದರು. ಮಾಜಿ ಜಿಲ್ಲಾಧ್ಯಕ್ಷ ಬಾಬುವಾಲಿ ಕಾರ್ಯಕ್ರಮ ನಿರೂಪಿಸಿ, ಪ್ರಥ್ವಿರಾಜ.ಎಸ್ ವಂದಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading