Popular Posts

ಭ್ರಷ್ಟಾಚಾರ:ದಲ್ಲಿ ಮುಳುಗಿದ ಮರಕಲ್ ಪಿಡಿಒ: ಸೇವೆಯಿಂದ ವಜಾಗೊಳಿಸಲು ಗ್ರಾ.ಪಂ ಸದಸ್ಯರ ಆಗ್ರಹ

ಬೀದರ್: ತಾಲೂಕಿನ ಮರಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ ಜಾಬಾ ಭಾರಿ ಭ್ರಷ್ಟಾಚಾರ ನಡೆಸಿದ್ದು, ಅವರನ್ನು ಸೇವೆಯಿಂದ ಕೂಡಲೇ ವಜಾಗೊಳಿಸಬೇಕೆಂದು ಮಾಜಿ ಗ್ರಾಮ್ ಪಂಚಾಯತ್ ಸದಸ್ಯರು ಹಾಗೂ ಕರ್ನಾಟಕ ಕ್ರೆöÊಸ್ತ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಸುಧಾಕರ ಶಂಕರ ಆಗ್ರಹಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು,  ಮೂರೂವರೆ ವರ್ಷಗಳ ಅವರ ಅವಧಿಯಲ್ಲಿ ೯, ೧೧ಎ, ೧೧ಬಿ ಖಾತಾ ಸೃಷ್ಟಿ, ಸಿ.ಎ. ಸೈಟ್ ಹಂಚಿಕೆ, ಕರ ವಸೂಲಿ, ಬೇರೆ ಬೇರೆ ಕಾಮಗಾರಿಗಳ ಅನುದಾನದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಎಸಗಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಚರ್ಚಿಸದೇ ೧೦ ಸಾವಿರ ಡಿಜಿಟಲ್ ಖಾತಾಗಳನ್ನು ಸೃಷ್ಟಿಸಿದ್ದಾರೆ. ಎನ್.ಎ. ಮಾಡಿಸಿ ಟೌನ್ ಪ್ಲಾನಿಂಗ್, ಬುಡಾ ಅನುಮೋದನೆ ಪಡೆಯದೆ ೧,೫೦೦ ಹಾಗೂ ಪಟ್ಟಾ ಸರ್ವೇ ಸಂಖ್ಯೆ ಮತ್ತು ಇನಾಮಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ ೨ ಸಾವಿರ ೧೧ಬಿ ಖಾತಾಗಳನ್ನು ತೆಗೆದಿದ್ದಾರೆ. ೪೧ ತಿಂಗಳಲ್ಲಿ ಕೇವಲ ೧೦ ಸಾಮಾನ್ಯ ಸಭೆಗಳನ್ನು ಕರೆದಿದ್ದಾರೆ. ಇದರಲ್ಲಿ ೨೦೨೪ ರಲ್ಲಿ ಒಂದೇ ಒಂದು ಸಭೆ ನಡೆಸಿ ಅದರಲ್ಲಿ ಸಾವಿರಾರು ಖಾತೆಗಳನ್ನು ಸೃಷ್ಟಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ತಮಗೆ ಬೇಕಾದವರಿಂದ ಹಣ ಪಡೆದು ಪಂಚಾಯತ್ ಅವಧಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ೨೦೨೬ ರ ಜನವರಿ ೨೮ ರಂದು ತುರ್ತು ವಿಶೇಷ ಸಾಮಾನ್ಯ ಸಭೆ ಕರೆದು, ಸಿ.ಎ. ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಈ ಸಂಬAಧ ಪತ್ರಿಕಾ ಪ್ರಕಟಣೆ ನೀಡಿಲ್ಲ. ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಆಪಾದಿಸಿದರು.
ಮರಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಿಎ ಸೈಟ್‌ಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ. ಅವರ ಅವಧಿಯಲ್ಲಿ ೫ ಕೋಟಿ ರೂಪಾಯಿಯಿಂದ ೬ ಕೋಟಿ ರೂಪಾಯಿ ಅನುದಾನ ದುರುಪಯೋಗ ಪಡೆಸಿಕೊಂಡಿದ್ದಾರೆ. ಗ್ರಾಮ ಪಂಚಾಯತ್‌ಗೆ ನಷ್ಟ ಮಾಡಿದ್ದಾರೆ. ೨೦೨೧-೨೨, ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನ ೧೫ನೇ ಹಣಕಾಸು ಯೋಜನೆಯ ಜೆ.ಜೆ.ಎಂ. ಯೋಜನೆಯ ಶೇ ೫ ರಷ್ಟು ಅನುದಾನ, ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನಲ್ಲಿ ೧೫ನೇ ಹಣಕಾಸು ನಿಧಿಯಲ್ಲಿ ಮರಕಲ್, ಬೆನಕನಳ್ಳಿ, ಚಿಕ್ಕಪೇಟ್ ಗ್ರಾಮಗಳಲ್ಲಿ ವಿಶೇಷ ಚೇತನರ ಶೇ ೩ರಷ್ಟು ಅನುದಾನ, ಸ್ವಚ್ಛತಾ ಅಭಿಯಾನದ ಅನುದಾನ ಹಾಗೂ ಇತರ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದರು.
೧೫ನೇ ಹಣಕಾಸು ನಿಧಿ ಯೋಜನೆಯ ೨೦೨೨-೨೩ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಬೆನಕನಳ್ಳಿ ಗ್ರಾಮದಲ್ಲಿ ಸಾಮಾನ್ಯ ಓಣಿಯ ಅಂಗನವಾಡಿ ಕೇಂದ್ರ ಮತ್ತು ಎಸ್.ಸಿ. ಓಣಿ ಅಂಗನವಾಡಿ ಕೇಂದ್ರದಲ್ಲಿ ಶೌಚಾಲಯ ನಿರ್ಮಿಸದೇ ೧.೪೦ ಲಕ್ಷ ರೂಪಾಯಿ, ಕುಡಿಯುವ ನೀರು ಸರಬರಾಜು ಕಾಮಗಾರಿಯ ಸಾಮಗ್ರಿಗಳ ಬೋಗಸ್ ಬಿಲ್ ಸೃಷ್ಟಿಸಿ ೨.೩೦ ಲಕ್ಷ ರೂಪಾಯಿ ಲೂಟಿ ಮಾಡಿದ್ದಾರೆ. ಬೆನಕನಳ್ಳಿ ಗ್ರಂಥಾಲಯ ತರಾತುರಿಯಲ್ಲಿ ಉದ್ಘಾಟನೆ ಮಾಡಿ, ಸಾಮಾನ್ಯ. ಸಭೆಯ ಅನುಮೋದನೆ ಪಡೆಯದೇ, ಅದಕ್ಕೆ ಒಂದು ಹುದ್ದೆ ಸೃಷ್ಟಿಸಿ ಹಣ ತೆಗೆದುಕೊಂಡು, ನಿಯಮ ಬಾಹಿರವಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಸುಧಾಕರ ಆರೋಪಿಸಿದರು.
ಇನ್ನೋರ್ವ ಮಾಜಿ ಗ್ರಾ.ಪಂ ಸದಸ್ಯರು ಹಾಗೂ ಕ್ರೆöÊಸ್ತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಿಗಂಬರರಾವ್ ಪಂಢರಿನಾಥ ಮಾತನಾಡಿ, ನಿಧಿ ೧, ನಿಧಿ ೨ರಲ್ಲಿನ ಸುಮಾರು ೨ ಕೋಟಿ ರೂಪಾಯಿ ಅನುದಾನವನ್ನು ಕ್ರಿಯಾ ಯೋಜನೆ, ಎಸ್ಟಿಮೆಟ್, ಎಂ.ಬಿ. ರೆಕಾರ್ಡ್, ಸಿ.ಸಿ. ಬಿಲ್ ಮಾಡದೆ, ಮೇಲಾಧಿಕಾರಿಗಳ ಅನುಮತಿ ಪಡೆಯದೆ, ಬಿಲ್ ಆಫ್ ಕಾಸ್ಟ್ ಮಾಡಿ ತಮ್ಮ ಜೊತೆಗಿರುವ ವ್ಯಕ್ತಿಗಳ ಹೆಸರಲ್ಲಿ ಚೆಕ್ ಪಾಸ್ ಮಾಡಿ, ಹಣ ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದರು.
ಪAಚಾಯತ್ ಪಿಡಿಒ, ಕಾರ್ಯದರ್ಶಿ, ಲೆಕ್ಕಾಧಿಕಾರಿ, ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್, ವಾಟರ್‌ಮೆನ್ ಸೇರಿಕೊಂಡು, ಪಂಚಾಯತ್ ಅಭಿವೃದ್ಧಿ ಮಾಡದೆ, ಪಂಚಾಯತ್ ಹಣ ಲೂಟಿ ಮಾಡಿ ಗೋವಾ, ಮುಂಬೈ ಹಾಗೂ ಇನ್ನಿತರ ಸ್ಥಳಗಳಿಗೆ ಹೋಗಿ ಮೋಜು, ಮಸ್ತಿ ಮಾಡಿದ್ದಾರೆ ಎಂದು ಆಪಾದಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಅವ್ಯವಹಾರದ ಬಗ್ಗೆ ಪಂಚಾಯತ್ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಸಾರ್ವಜನಿಕರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದುವರೆಗೆ ಕ್ರಮ ವಹಿಸದೇ ದಿವ್ಯ ಮೌನ ವಹಿಸಿದಕ್ಕೆ ಇದರಲ್ಲಿ ತಾ.ಪಂ ಇಒ ಹಾಗೂ ಜಿ.ಪಂ ಸಿಇಒ ಸಹ ಶಾಮಿಲಾಗಿರಬಹುದೆಂಬ ಅನುಮಾನ ಮೂಡುತ್ತಿದೆ. ಈಗಲಾದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಅವ್ಯವಹಾರಗಳ ಸಮಗ್ರ ತನಿಖೆ ನಡೆಸಿ, ಸೇವೆಯಿಂದ ವಜಾಗೊಳಿಸಬೇಕು ಎಂದು ಡಿಗಂಬರ ಅವರು ಸಹ ಒತ್ತಾಯಿಸಿದ್ದಾರೆ. ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ರಾಜೀವ ಪುಂಢಲಿಕರಾವ, ಪ್ರಕಾಶ ನರಸಪ್ಪ, ಪಂಢರಿ ಮಲ್ಲಪ್ಪ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!