Popular Posts

ರೈಲ್ವೆ ಮಜ್ದೂರ್ ಯುನಿಯನ್‍ನಿಂದ ಪ್ರತಿಭಟನೆ

ಬೀದರ್: ಬೀದರ್ ರೈಲು ನಿಲ್ದಾಣದಲ್ಲಿ ಆರೋಗ್ಯ ಘಟಕ ಸ್ಥಾಪಿಸಲು ಆಗ್ರಹಿಸಿ ಸೌಥ್ ಸೆಂಟ್ರಲ್ ರೈಲ್ವೆ ಮಜ್ದೂರ್ ಯುನಿಯನ್‍ನ ಬೀದರ್ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಇಲ್ಲಿಯ ರೈಲು ನಿಲ್ದಾಣದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬೇಕೇ ಬೇಕು ಆರೋಗ್ಯ ಘಟಕ ಬೇಕು ಎಂಬ ಘೋಷಣೆ ಕೂಗಿದರು.
ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಪರಳಿ ಹಾಗೂ ವಿಕರಾಬಾದ್ ರೈಲು ನಿಲ್ದಾಣಗಳಲ್ಲಿ ಆರೋಗ್ಯ ಘಟಕಗಳು ಇವೆ. ಆದರೆ, ಬೀದರ್‍ನಲ್ಲಿ ಮಾತ್ರ ಸ್ಥಾಪಿಸಲಾಗಿಲ್ಲ. ಹೀಗಾಗಿ ರೈಲ್ವೆ ಇಲಾಖೆಯ ಹಾಲಿ ನೌಕರರು, ನಿವೃತ್ತ ನೌಕರರು ಹಾಗೂ ಅವರ ಕುಟುಂಬಗಳಿಗೆ ವೈದ್ಯಕೀಯ ಸೇವೆ ಸಿಗದಂತಾಗಿದೆ ಎಂದು ದೂರಿದರು.
ಘಟಕ ಸ್ಥಾಪಿಸಿದ್ದಲ್ಲಿ 1,000 ನೌಕರರು, 300 ನಿವೃತ್ತ ನೌಕರರು ಹಾಗೂ ಅವರ ಕುಟುಂಬದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಯುನಿಯನ್ ಬೀದರ್ ಘಟಕದ ಅಧ್ಯಕ್ಷ ಎಸ್. ಶ್ರೀಪತಿ, ಕಾರ್ಯದರ್ಶಿ ರಮೇಶಕುಮಾರ, ಪ್ರಮುಖರಾದ ಮುಹಮ್ಮದ್ ಮುಜೀಬ್, ವೀರಶೆಟ್ಟಿ ಮತ್ತಿತರರು ಇದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading

Subscribe