Popular Posts

ಸಂಭ್ರಮದ ಔದುಂಬರಲಿಂಗ ಆಶ್ರಮ ಜಾತ್ರೆ

ಬೀದರ್: ಇಲ್ಲಿಯ ನೌಬಾದ್ ಸಮೀಪದ ಔದುಂಬರಲಿಂಗ ಮಲ್ಲಿನಾಥ ಆಶ್ರಮದ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ ಸಂಭ್ರಮ, ಸಡಗರದಿಂದ ನಡೆಯಿತು.
ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಆಶ್ರಮದಲ್ಲಿಯ ಲಿಂಗಕ್ಕೆ ಶ್ರದ್ಧೆ, ಭಕ್ತಿಯಿಂದ ಅಲಂಕಾರ, ಅಭಿಷೇಕ, ವಿಶೇಷ ಪೂಜೆ ಜರುಗಿದವು.
ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ನಾನಾ ಬಗೆಯ ಪ್ರಸಾದ ಸವಿದರು.
ಜಾತ್ರೆ ಅಂಗವಾಗಿ ಆಶ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಭಕ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ, ಪ್ರಮುಖರಾದ ಶಿವಕುಮಾರ ಮದನೂರು, ನಿತೀಶ್ ಪಾಟೀಲ, ಸಿದ್ದು ಮಮದಾಪುರೆ, ವೀರಶೆಟ್ಟಿ ಕೊಳಾರ, ಉಮೇಶ, ಪ್ರಣವ್, ಭಗವಂತ, ಕೃಷ್ಣ, ಕಿರಣ್, ಸಾಯಿನಾಥ, ರಾಕೇಶ್, ವೀರೇಶ್, ಅಶೋಕ್ ಮಿಲ್ಟ್ರಿ, ಸಿದ್ದಪ್ಪ, ಈಶ್ವರ ಕಾಂಬಳೆ, ವಿಜಯಕುಮಾರ, ಉಮಾಕಾಂತ, ರಾಜು ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!