1
1

ಬೀದರ್: ನಗರದ ಬಾಂಬೆ ಬಿಲ್ಡಿಂಗ್ ಸಮೀಪದ ಸಮಾಜವಾದಿ ಜನತಾ ಪಾರ್ಟಿ ಕಚೇರಿಯಲ್ಲಿ ಆ.10ರಂದು ನಡೆದ ಸಭೆಯಲ್ಲಿ ಪಕ್ಷದ ಬೀದರ್ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಪಕ್ಷದ ಸಂಸ್ಥಾಪಕ ಜಿ.ಎಂ. ಗಟಕರ್ ಅವರ ಆದೇಶದಂತೆ, ರಾಜ್ಯ ಕಾರ್ಯದರ್ಶಿ ಡಾ. ಶಿರೋಮಣಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸತೀಶಕುಮಾರ ಪಾಟೀಲ್ ಅವರನ್ನು ಜಿಲ್ಲಾಧ್ಯಕ್ಷರಾಗಿ, ಶ್ರೀಮತಿ ರೂಪಾ ಜೋಶಿ ಅವರನ್ನು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪ್ರಕಾಶ ರೆಡ್ಡಿ ಜಿಲ್ಲಾ ಕಾರ್ಯದರ್ಶಿಯಾಗಿ, ವಿನೋದ ಕುಲಕರ್ಣಿ, ಸುಜಾವೋದ್ದೀನ್ ಹಾಗೂ ದೇವಿದಾಸ ರಾಠೋಡ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅದೇ ರೀತಿ ರವೀಂದ್ರ ಕೊಳ್ಳೂರ್ ಅವರನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಪ್ರೇಮಕುಮಾರ ಅವರನ್ನು ಜಿಲ್ಲಾ ಖಜಾಂಚಿಯಾಗಿ ನೇಮಕ ಮಾಡಲಾಗಿದೆ. ಮಾರುತಿ ಬೆಳ್ಳೂರ್ ಹಾಗೂ ಮೋಹಸಿನ್ ಪಟೇಲ್ ಅವರನ್ನು ಜಿಲ್ಲಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ನೂತನ ಪದಾಧಿಕಾರಿಗಳು ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವುದು, ಸಂಘಟನೆಯನ್ನು ವಿಸ್ತರಿಸುವುದು ಹಾಗೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಡಾ. ಶಿರೋಮಣಿ ಸೂಚಿಸಿದರು.