1
1

ಬೀದರ್: ಇಲ್ಲಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಖಟ ಬಾಕಿ ಸಾಲಗಾರರಿಗೆ ಸಾಲದಿಂದ ಮುಕ್ತಿ ಹೊಂದಲು ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಫೆಬ್ರುವರಿ 15 ರಿಂದ ಮಾರ್ಚ್ 25 ರ ವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ.
ಸ್ವಸಹಾಯ ಗುಂಪಿನ ಸಾಲ, ಜಾಯಿಂಟ್ ಲಾಯಬಿಲಿಟಿ ಗ್ರುಪ್ ಸಾಲ, ವೈಯಕ್ತಿಕ ಸಾಲ, ವೇತನ ಸಾಲ, ಮಾಂಗಲ್ಯ ಭಾಗ್ಯ ಸಾಲ, ಸ್ವರಾಜ್ ಕ್ರೆಡಿಟ್ ಕಾರ್ಡ್ ಸಾಲ, ಪಿ.ಎಂ. ಸ್ವ ನಿಧಿ ಸಾಲ, ಬಡವರ ಬಂಧು ಸಾಲ, ಸಿ.ಸಿ. ಮತ್ತು ಓ.ಡಿ. ಸಾಲ ಪಡೆದು, ಮರು ಪಾವತಿ ಮಾಡದೆ, ಖಟ ಬಾಕಿ ಆಗಿ ಸಾಲ ತೀರಿಸಲು ಆಗದವರಿಗೆ ಸಾಲದಿಂದ ಮುಕ್ತರಾಗಲು ಈ ಯೋಜನೆ ಸುವರ್ಣ ಅವಕಾಶ ಕಲ್ಪಿಸಲಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಏಕಕಾಲಕ್ಕೆ ಇತ್ಯರ್ಥ (ಒನ್ ಟೈಮ್ ಸೆಟ್ಟಲಮೆಂಟ್) ಅಥವಾ ನಿರ್ದಿಷ್ಟ ಮೊತ್ತಕ್ಕೆ ರಾಜಿ ಆಗಿ ಸಾಲದಿಂದ ಮುಕ್ತಿ ಹೊಂದಬಹುದು ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗೆ ಬ್ಯಾಂಕ್ನ ಅಧಿಕಾರಿಗಳ ಮೊಬೈಲ್ ಸಂಖ್ಯೆ 9611494777, 9342244661, 9902660666ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಖಟ ಬಾಕಿ ಸಾಲದಾರರು ಯೋಜನೆ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.