Popular Posts

ಹಿತ್ತಲ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮ

ಬೀದರನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ  ಅಡಿಯಲ್ಲಿ ಬರುವ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‌ನಲ್ಲಿ ಕೋಳಿ ಅಭಿವೃದ್ಧಿ ಕುರಿತ ಅಖಿಲ ಭಾರತ ಸಮನ್ವಿತ ಸಂಶೋಧನಾ ಯೋಜನೆ ಸಹಯೋಗದೊಂದಿಗೆ ಎರಡು ದಿನಗಳ “ಹಿತ್ತಲ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು” ಆಯೋಜಿಸಲಾಯಿತು.
ಗ್ರಾಮೀಣ ಕುಟುಂಬಗಳ *ಪೌಷ್ಟಿಕ ಭದ್ರತೆ, ಮಹಿಳಾ ಸಬಲೀಕರಣ ಹಾಗೂ ಹೆಚ್ಚುವರಿ ಆದಾಯ ಸೃಷ್ಟಿಯಲ್ಲಿ ಹಿತ್ತಲ ಕೋಳಿ ಸಾಕಾಣಿಕೆಯ ಮಹತ್ವವನ್ನು ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು. ಕಡಿಮೆ ಬಂಡವಾಳದಲ್ಲಿ ಕೈಗೊಳ್ಳಬಹುದಾದ ಹಿತ್ತಲ ಕೋಳಿ ಸಾಕಾಣಿಕೆಯು ಗ್ರಾಮೀಣ ಮಹಿಳೆಯರು ಮತ್ತು ಸಣ್ಣ ರೈತರಿಗೆ ಸುಸ್ಥಿರ ಜೀವನೋಪಾಯದ ಉತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ತಜ್ಞರು ತಿಳಿಸಿದರು.
ತರಬೇತಿ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಬಿ. ವಿ. ಶಿವಪ್ರಕಾಶ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‌ನ ಡೀನ್ ರವರಾದ ಡಾ. ಎಂ. ಕೆ. ತಾಂಡ್ಲೆ ಅವರು ವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಹಿತ್ತಲ ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ಪಾದಕತೆ ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು.
ಎರಡು ದಿನಗಳ ತರಬೇತಿಯಲ್ಲಿ ತರಬೇತಿದಾರರಿಗೆ ವಿವಿಧ ಹಿತ್ತಲ ಕೋಳಿ ತಳಿಗಳು, ಉತ್ತಮ ಮರಿಗಳ ಆಯ್ಕೆ, ಕೋಳಿ ಪೌಷ್ಟಿಕಾಂಶ, ಆಹಾರ ನಿರ್ವಹಣೆ, ವಸತಿ ವ್ಯವಸ್ಥೆ, ಆರೋಗ್ಯ ಸಂರಕ್ಷಣೆ, ರೋಗನಿರೋಧಕ ಕ್ರಮಗಳು, ಲಸಿಕಾಕರಣ, ಸ್ವಚ್ಛತೆ, ವೈಜ್ಞಾನಿಕ ನಿರ್ವಹಣೆ ಹಾಗೂ ಕೋಳಿ ಮತ್ತು ಮೊಟ್ಟೆಗಳ ಮಾರುಕಟ್ಟೆ ಕುರಿತು ತಾಂತ್ರಿಕ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಯಿತು. ತರಬೇತಿದಾರರಿಗೆ ಹಿತ್ತಲ ಕೋಳಿ ಸಾಕಾಣಿಕೆಯನ್ನು ಕುಟುಂಬದ ಪೌಷ್ಟಿಕ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಆದಾಯದ ಮೂಲವನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಮಾರ್ಗದರ್ಶನ ನೀಡಲಾಯಿತು.
ತರಬೇತಿಯ  ಸಮಾರೋಪ ಸಮಾರಂಭ ಹಾಗೂ ಕೋಳಿ ಮರಿಗಳ ವಿತರಣೆಯನ್ನು ಹೊನ್ನಿಕೇರಿಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕ್  ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಗೌರವಾನ್ವಿತ ಸದಸ್ಯರಾದ ಶ್ರೀ ಬಸವರಾಜ ಭತಮುರ್ಗೆ  ಅವರು ಆಗಮಿಸಿ ತರಬೇತಿದಾರರಿಗೆ ಶುಭ ಹಾರೈಸಿದರು. ತರಬೇತಿಯ ನಂತರ ಕೋಳಿ ಮರಿಗಳನ್ನು ವಿತರಿಸುವ ಮೂಲಕ ತರಬೇತಿದಾರರಿಗೆ ಕಲಿತ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಉತ್ತೇಜನ ನೀಡಲಾಯಿತು.ಕಾರ್ಯಕ್ರಮವನ್ನು ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‌ನ ಡಾ. ವಿದ್ಯಾಸಾಗರ್, ಡಾ. ಕೊಟ್ರೇಶ್ ಪ್ರಸಾದ್, ಡಾ. ಪ್ರೀತಿ ಹಾಗೂ ಡಾ. ಸತೀಶ್ ಅವರು ಸಂಯೋಜಿಸಿದರು.ಗ್ರಾಮೀಣ ಮಹಿಳೆಯರು ಮತ್ತು ರೈತರಿಗೆ ವೈಜ್ಞಾನಿಕ ಹಿತ್ತಲ ಕೋಳಿ ಸಾಕಾಣಿಕೆಯ ಕುರಿತು ಕೌಶಲ್ಯಾಭಿವೃದ್ಧಿ ಮಾಡುವ ಮೂಲಕ *ಪೌಷ್ಟಿಕ ಭದ್ರತೆ, ಸ್ವಾವಲಂಬನೆ ಮತ್ತು ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ* ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading