Popular Posts

ಅವಹೇಳನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹ

ಭಾಲ್ಕಿ: ಸಾರ್ವಜನಿಕವಾಗಿ ಪೂಜ್ಯನೀಯ ದೈವಗಳ ಮತ್ತು ರಾಷ್ಟçಪಿತರ ವಿರುದ್ದ ಅವಹೇಳನಾಕಾರಿ ಹೇಳಿಕೆ ನೀಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವು ಲೋಖಂಡೆ, ಸಚೀನ ಏಕನಾಥರಾವ ಜಾಧವ, ದೇವರಾಜಸಿಂಗ ಶಿವಪಾಲಸಿಂಗ ಠಾಕೂರ ನೇತೃತ್ವದಲ್ಲಿ ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಪಟ್ಟಣದ ಡಿ.ವಾಯ್.ಎಸ್.ಪಿ ಕಚೇರಿಯಲ್ಲಿ ಗುರುವಾರ ಡಿವಾಯ್‌ಎಸ್‌ಪಿ ಶಿವಾನಂದ ಪವಾಡಿಶೆಟ್ಟಿಯವರಿಗೆ ಮನವಿ ಪತ್ರ ಸಲ್ಲಿಸಿದ ಹಿಂದೂಪರ ಸಂಘಟನೆಯ ಪದಾದಿಕಾರಿಗಳು, ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಹಿಂದೂಗಳ ಪರಮ ಆರಾಧ್ಯ ದೈವ ಶ್ರೀರಾಮಚಂದ್ರ, ಶ್ರೀಕೃಷ್ಣ ಪರಮಾತ್ಮ ಸೇರಿದಂತೆ ರಾಷ್ಟçಪಿತ ಮಹಾತ್ಮಾಗಾಂಧಿಯವರ ಬಗ್ಗೆ ಅವಹೇಳನಾಕಾರಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಮಾತನಾಡಿ ರಾಷ್ಟಿçÃಯ ಗೌರವಕ್ಕೆ ಚ್ಯುತಿ ತಂದಿರುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪಿಗಳಾದ ಕಾಳಿದಾಸ ಅರ್ಜುನ ಸೂರ್ಯಂಶಿ, ಕಪೀಲ ಗೋಡಬೊಲೆ ವರವಟ್ಟಿ(ಬಿ), ರಾಹುಲ್ ಖಂಡಾರೆ ಸೇರಿದಂತೆ ಹಲವರು ತಮ್ಮ ಸಹ ಚರರೊಂದಿಗೆ ಭಾರತೀಯ ಮಹಾತ್ಮರಿಗೆ, ಹಿಂದೂಗಳ ಆರಾಧ್ಯ ದೈವರಿಗೆ ಅವಹೇಳನಾಕಾರಿ ಮಾತನಾಡುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಇಂತಹ ವ್ಯವಸ್ಥಿತವಾದ ದ್ವೇಷಭಾಷಣ ಮತ್ತು ಧಾರ್ಮಿಕ ನಿಂದನೆಯನ್ನು ಹರಿಬಿಟ್ಟ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಜೈರಾಜ ಕೊಳ್ಳಾ, ರವಿಕಾಂತ ಕುಂಬಾರ, ಶೈಲೇಶ ಮಾಲಪಾಣಿ, ಪಾಂಡುರAಗ ಕನಸೆ, ಗಣಪತರಾವ ನಗಟೆ, ಸಂದೀಪ ತೆಲಗಾಂವಕರ, ಪ್ರಭಾಕರ ಜಾಧವ, ಕೃಷ್ಣಾ, ಮಲ್ಲಿಕಾರ್ಜುನ ಸೋಲಾಪೂರೆ, ಸಾಗರ ಗುಬ್ಬೆ, ಬಸವಾ ಭುಸಗುಂಡೆ, ಪ್ರಕಾಶ ಪಾಟೀಲ, ನವನಾಥ ಪಾಟೀಲ, ವಿಜಯಕುಮಾರ ಇದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading