Popular Posts

ಆರೋಗ್ಯವಂತ ಜೀವನದಿಂದ ಮಾನಸಿಕ ನೆಮ್ಮದಿ – ಡಾ| ಶಶಿಕಾಂತ ಭೂರೆ.

ಭಾಲ್ಕಿ: ಆರೋಗ್ಯವಂತ ಜೀವನದಿಂದ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯ ಎಂದು ತಾಲೂಕು ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ| ಶಶಿಕಾಂತ ಭೂರೆ ಹೇಳಿದರು.
ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಶಿಬಿರ ಹಾಗು ಸಮುದಾಯ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತೆ ಮನಸ್ಸಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಆರೋಗ್ಯ ಕಾಪಾಡಿಕೊಂಡು ಮಾನಸಿಕ ನೆಮ್ಮದಿ ಗಳಿಸಿಕೊಳ್ಳಬೇಕು. ಇಂತಹ ಶಿಬಿರಗಳ ಲಾಭ ಪಡೆದು ಆರೋಗ್ಯವಂತರಾಗಿ ಬಾಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಭೀಮರಾವ.ಬಿ.ಗಿರಿ, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯವತಿಯಿಂದ ಪ್ರತಿವರ್ಷ ಆರೋಗ್ಯ ಶಿಬಿರ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಧೃಡತೆ ಉತ್ತಮ ಗೊಳಿಸುವ ಕಾರ್ಯಮಾಡುವರು ಎಂದು ಹೇಳಿದರು. ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಜಯರಾಜ ದಾಬಶೆಟ್ಟಿ ವಿಶೇಷ ಉಪನ್ಯಾಸ ಮಂಡಿಸಿದರು. ಇದೇವೇಳೆ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಸಲಹೇ ಸೂಚನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ| ರವಿ ಕಲಶಟ್ಟಿ, ಡಾ| ಜ್ಯೋತಿ, ಡಾ| ಕಪೀಲ ರೆಡ್ಡಿ, ಡಾ| ದೇವಿಕಾ, ಡಾ| ಚನ್ನಮ್ಮ, ಡಾ| ಸುಮಿತ್ರಾ, ಮುಖ್ಯಶಿಕ್ಷಕ ರೇವಣಸಿದ್ದಪ್ಪ.ಎಸ್, ಪ್ರಾಚಾರ್ಯ ಸಮೊದ ಮೊಹನ, ಡಾ| ಚನ್ನಸಬವ, ಡಾ| ವಿಜಯಲಕ್ಷ್ಮಿ, ಡಾ| ಜೈವಿಕಾ ಪಾಟೀಲ, ಶೇಖ ಸಾಬೇರ ಪಟೇಲ ಉಪಸ್ಥಿತರಿದ್ದರು. ಸುನಿತಾ ಸ್ವಾಗತಿಸಿದರು, ಅಸ್ಮಿತಾ ಮತ್ತು ಸ್ಮಿತಾ ನಿರೂಪಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading