Popular Posts

ಕರ್ನಾಟಕದ ಡಾನ್ ಬಾಸ್ಕೋ ಶಾಲಾ ನಾಯಕರ ಸಮಾವೇಶ – INSPIRE 2026 ಯಶಸ್ವಿ

ಬೀದರ್: ಬೀದರ್‌ನ ಡಾನ್ ಬಾಸ್ಕೋ ಶಾಲೆಯ ಆತಿಥ್ಯದಲ್ಲಿ ಕರ್ನಾಟಕದ ವಿವಿಧ ಡಾನ್ ಬಾಸ್ಕೋ ಶಾಲೆಗಳ ವಿದ್ಯಾರ್ಥಿ ನಾಯಕರ ಸಮಾವೇಶ “INSPIRE 2026 – Inspire, Lead, Transformation” (ಪ್ರೇರೇಪಿಸು, ಮುನ್ನಡೆಸು, ಪರಿವರ್ತಿಸು) ಎಂಬ ಧ್ಯೇಯವಾಕ್ಯದೊಂದಿಗೆ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಸಾಗರ್ ಇ. ಖಂಡ್ರೆ ಉದ್ಘಾಟಿಸಿ ಮಾತನಾಡಿ, “ನೀವೇ ನಮ್ಮ ದೇಶದ ಭವಿಷ್ಯದ ನಾಯಕರು” ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಶಿಕ್ಷಣದ ಜೊತೆಗೆ ಶಿಸ್ತು, ಜವಾಬ್ದಾರಿ, ಉತ್ತಮ ಮೌಲ್ಯಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಯುವಜನರು ತಮ್ಮ ಪ್ರತಿಭೆ ಮತ್ತು ಜ್ಞಾನವನ್ನು ಸಮಾಜ ಹಾಗೂ ದೇಶದ ಒಳಿತಿಗಾಗಿ ಬಳಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾ. ಸ್ಟೀವನ್ ಲಾರೆನ್ಸ್, ರೆಕ್ಟರ್ ಹಾಗೂ ಮ್ಯಾನೇಜರ್, ಡಾನ್ ಬಾಸ್ಕೋ ಬೀದರ್ ವಹಿಸಿದ್ದರು. ಫಾ. ಮ್ಯಾಥ್ಯೂ, ಆಡಳಿತಾಧಿಕಾರಿ, ಫಾ. ಹೃದಯ ರಾಜ್ ಹಾಗೂ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ ಮಹೇಶ್ ಉಪಸ್ಥಿತರಿದ್ದರು.

ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲರಾದ ಫಾ. ಪ್ರವೀಣ್ ಕೆ.ಜೆ. ಅವರು INSPIRE 2026ರ ಧ್ಯೇಯವನ್ನು ಪರಿಚಯಿಸಿ, ನಾಯಕತ್ವವೆಂದರೆ ಕೇವಲ ಸ್ಥಾನವಲ್ಲ; ಇತರರನ್ನು ಪ್ರೇರೇಪಿಸಿ, ಸರಿಯಾದ ದಾರಿಯಲ್ಲಿ ಮುನ್ನಡೆಸಿ, ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರುವ ಸಾಮರ್ಥ್ಯ ಎಂದು ವಿವರಿಸಿದರು. ಫಾ. ಸ್ಟೀವನ್ ಲಾರೆನ್ಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಿಸ್ ಪ್ರಿಯಾ ಗ್ಯಾಜ್ಮರ್, ಒಡಿ. ಮಕಾನ್ಯೋ, ಮಿಸ್ ಝೈವೇನಿ ಹಾಗೂ ಮಿಸ್ ಎಲಿಜಬೆತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾವೇಶದಲ್ಲಿ ಚಿತ್ರದುರ್ಗ, ಹೊಸಪೇಟೆ, ತುಮಕೂರು, ಬೆಂಗಳೂರು, ಯಾದಗಿರಿ, ದೇವದುರ್ಗ ಹಾಗೂ ಕಲಬುರಗಿ ಸೇರಿದಂತೆ ವಿವಿಧ ಡಾನ್ ಬಾಸ್ಕೋ ಶಾಲೆಗಳ ಸುಮಾರು 10 ಪ್ರಾಂಶುಪಾಲರು, 30 ಶಿಕ್ಷಕರು ಹಾಗೂ 300 ವಿದ್ಯಾರ್ಥಿ ನಾಯಕರು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶ್ರೀ ಸೀಮಪ್ಪ ಬಿ. ಬರ್ಕುರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫಾ. ಸ್ಟೀವನ್ ಲಾರೆನ್ಸ್, ಫಾ. ಮ್ಯಾಥ್ಯೂ ಹಾಗೂ ಶಾಲಾ ಸಂಯೋಜಕಿ ಶ್ರೀಮತಿ ರೇಣುಕಾ ಉಪಸ್ಥಿತರಿದ್ದರು. ಶೈಕ್ಷಣಿಕ ಸಂಯೋಜಕಿ ಶ್ರೀಮತಿ ಝಾನ್ಸಿ ವಂದನಾರ್ಪಣೆ ಸಲ್ಲಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading