1
1

ಬೀದರ್, ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿಯ ನಿರ್ದೇಶಕ ಮಂಡಳಿಗೆ 13 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಫೆಬ್ರವರಿ 16ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾನ್ಯ ಶ್ರೀ ಗುರುನಾಥ ಜಾಂತಿಕರ್ ಹಾಗೂ ಉಪಾಧ್ಯಕ್ಷರಾಗಿ ಮಾನ್ಯ ಶ್ರೀ ಪ್ರತಾಪ ತಂಬಾಕೆ ಅವಿರೋಧವಾಗಿ ಆಯ್ಕೆಯಾದರು.
ರಿಟರ್ನಿಂಗ್ ಅಧಿಕಾರಿಯಾಗಿರುವ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಬೀದರ್ನ ಅಧಿಕಾರಿ ಶ್ರೀ ಮಲ್ಲಿನಾಥ ಮಠಪತಿ ಅವರು ಫಲಿತಾಂಶವನ್ನು ಘೋಷಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಗುರುನಾಥ ಜಾಂತಿಕರ್ ಅವರು, ಒಂದು ಸಹಕಾರಿಯು ಸತತ 25 ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದರೆ ಆಡಳಿತ ಮಂಡಳಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ಅತ್ಯಾವಶ್ಯಕ ಎಂದು ಹೇಳಿದರು.
ಸಹಕಾರಿ ತನ್ನ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ಸ್ವಂತ ಕಟ್ಟಡವನ್ನು ಖರೀದಿಸಿರುವುದಾಗಿ ಅವರು ತಿಳಿಸಿದರು. ಉತ್ತಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಸತತ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.
ನಿರ್ದೇಶಕರಾಗಿ ಚಂದ್ರಪ್ಪ ಬಿರಾದರ, ರಾಜಶೇಖರ್ ಹೊಸಳ್ಳಿ, ರಾಜು ಬೇಮಳಖೇಡಕರ್, ರಾಜಕುಮಾರ ಧುಮ್ಮನಸೂರೆ, ಶಿವರಾಜ ಹುಡೆದ, ಸುರೇಶ ಔರಾದಕರ್, ಪದ್ಮಜಾ ಪೊದ್ದಾರ್, ದೀಪಾ ಎಸ್. ಅಗ್ರವಾಲ್, ರಾಜಶೇಖರ್ ನಾಗಮೂರ್ತಿ, ಸಂಜೀವಕುಮಾರ್ ಬಿ. ಸಜ್ಜನ್ ಹಾಗೂ ಡಿ.ಎಸ್. ಕಿರಣಕುಮಾರ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವರಾಜ ಹೂಗಾರ, ಸಿಬ್ಬಂದಿಗಳಾದ ಅನೀಲಕುಮಾರ ಕೋಡಂಬಲ್, ಶಿವಾನಂದ ಬಸವಣ್ಣನೋರ್, ಸಂಜೀವಕುಮಾರ ಎನ್., ದೇವಿ ಎಸ್., ಶ್ರೀಕಾಂತ ಎಮ್., ರಾಹುಲ್ ಪೋಲ್ ಹಾಗೂ ಸೌಹಾರ್ದ ಸಹಕಾರಿಗಳ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮೃತ ಹೊಸಮನಿ ಉಪಸ್ಥಿತರಿದ್ದರು. ಸಭೆಯಲ್ಲಿ ಶಿವರಾಜ ಹೂಗಾರ ಅವರು ವಂದಿಸಿದರು.