Popular Posts

ಕಸಾಪ ಮಹಿಳಾ ಸಾಹಿತ್ಯ ಸಮ್ಮೇಳನ|| ವೈಭವದ ಮೆರವಣಿಗೆ

ಭಾಲ್ಕಿ: ಪಟ್ಟಣದ ಕಾರಂಜಾ ರೈತ ಭವನದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಮಟ್ಟದ 3ನೇ ಮಹಿಳಾ ಸಾಹಿತ್ಯ ಸಮ್ಮೆಳನ ನಿಮಿತ್ಯ ಮಂಗಳವಾರ ಭುವನೇಶ್ವರಿ ಮಾತೆಯ ಭಾವಚಿತ್ರ ಹಾಗು ಸಮ್ಮೇಳನದ ಸರ್ವಾಧ್ಯಕ್ಷೆ ಮಲ್ಲಮ್ಮಾ.ಆರ್.ಪಾಟೀಲರ ವೈಭವದ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಪಟ್ಟಣದ ಸಿವಿಲ್ ನ್ಯಾಯಾಧೀಶೆ ಸುನಿತಾ ಚಾಲನೆ ನೀಡಿದರು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮೆರವಣಿಗೆಯ ಸಾನಿಧ್ಯ ವಹಿಸಿದ್ದರು. ಕಸಾಪ ಮಹಿಳಾ ನಗರ ಘಟಕದ ಅಧ್ಯಕ್ಷೆ ಸುನಿತಾ ಮಮ್ಮಾ ಅಧ್ಯಕ್ಷೆತೆ ವಹಿಸಿದ್ದರು. ಮೆರವಣಿಗೆಯು ಪಟ್ಟಣದ ಚನ್ನಬಸವಾಶ್ರಮದಿಂದ ಪ್ರಾರಂಭವಾಗಿ ಡಾ| ಬಿ.ಆರ್.ಅಂಬೇಡ್ಕರ್ ವೃತ್ತ, ಮಹಾತ್ಮಾಗಾಂಧಿ ವೃತ್ತ, ಬಸವೇಶ್ವರ ವೃತ್ತ, ಸೇರಿದಂತೆ ಪಟ್ಟಣದ ವಿವಿಧ ಬೀದಿಗಳ ಮೂಲಕ ಸಾಗಿ ಕಾರಂಜಾ ರೈತಭವನದಲ್ಲಿ ಸಮಾವೇಶ ಗೊಂಡಿತು. ಮೆರವಣಗೆಯಲ್ಲಿ ಮಹಿಳಾ ಸಂಘಟನೆಯ ಲಂಬಾಣಿ ನೃತ್ಯ, ಜಾನಪದ ನೃತ್ಯ, ಕೋಲಾಟ ಸೇರಿದಂತೆ ವಿವಿಧ ಸಾಲಾ ಕಾಲೇಜಿನ ವಿದ್ಯಾರ್ಥಿಗಳು ಸಾಲಾಗಿ ಸಾಗಿಬಂದರು. ಮೆರವಣಿಗೆಯುದ್ದಕ್ಕೂ ಮಹಿಳಾ ಮಣಿಗಳು ಕನ್ನಡ ಗೀತೆಗಳಿಗೆ ಹೆಜ್ಜೆ ಹಾಕಿದರು.
ಮೆರವಣಿಗೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಶೃತಿ ಸಂತೋಷ ಪಾಟೀಲ, ಅಲ್ಪನಾ ಸೂರ್ಯನ, ರಾಜೇಶ್ವರಿ ರಾಗಾ, ಪೂರ್ಣಿಮಾ ಪಾಟೀಲ, ಡಾ| ಜೋಷ್ನಾ, ಕೌಶಲ್ಯ ಪಾಟೀಲ, ಮೇಘಾ ಅಮರ ಹಲಮಂಡಗೆ, ಅಶ್ವಿನಿ ಅಕ್ಷಯ ಮುದ್ದಾ, ಉಷಾ ಸಂತೋಷ ಖಂಡ್ರೆ, ದರ್ಶನಾ ರೋಹಿತ ವೈರಾಗೆ, ರಜನಿ ಎರ್ರೆಬಲಿ ಮಸ್ತಾನವಲಿ, ರೇಖಾ ವಿಲಾಸಪಾಟೀಲ, ಚಿನ್ನಮ್ಮ ಬಾವುಗೆ, ಶೀತಲ ಚವ್ಹಾಣ, ಜೈಶ್ರೀ ಪ್ರಕಾಶ ಮಾನಕಾರಿ, ಸ್ವಾತಿ ವಿನೋದ ಜಗತಾಪ, ಪ್ರತಿಭಾ ವಸಂತ ಪಾಟೀಲ, ಪಾರ್ವತಿ ಲಕ್ಷ್ಮಣ ಗುಪ್ತಾ, ಶೋಭಾವತಿ ತಿಪ್ಪಣ್ಣ ಶಿವಪೂರೆ, ಶೋಭಾ ಸುಭಾಷ ಹುಲಸೂರೆ, ಸುನಿತಾ ಸಂಗೋಳಗೆ, ಮಲ್ಲಮ್ಮಾ ನಾಗನಕೆರೆ, ಶಶಿಕಲಾ ಮೋರೆ, ಪ್ರೇಮಲತಾ ಸ್ವಾಮಿ, ಹಣಮಂತ ಕಾರಾಮುಂಗೆ, ರಮೇಶ ಚಿದ್ರಿ, ಕಾಶಿನಾಥ ಲದ್ದೆ, ಅಶೋಕ ಬಾವುಗೆ, ಮಲ್ಲಿಕಾರ್ಜುನ ಕುಂಚಗೆ, ಕುಸುಮಕುಮಾರಿ, ಪ್ರೇಮಾ ಕುಡತೆ, ಪ್ರೊ| ಮಂಗಲಾ ಪಾಟೀಲ, ಡಾ| ವಿದ್ಯಾವತಿ ಬಲ್ಲೂರ, ದೀಪಕ ಥಮಕೆ, ಸಂತೋಷ ಬಿಜಿಪಾಟೀಲ, ಜೈರಾಜ ದಾಬಶೆಟ್ಟಿ, ಸಂತೋಷ ಹಡಪದ ಮುಂತಾದವರು ಇದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading