1
1

ಬೀದರ : ವೀಣಾಗಾನ ಸಾಂಸ್ಕøತಿಕ ಮತ್ತು ಸಾಮಾಜಿಕ ಸಂಸ್ಥೆ (ರಿ) ಹುಮನಾಬಾದ ಇವರ ವತಿಯಿಂದ 22-8 -2026 ರಂದು ಬೀದರ ತಾಲೂಕಿನ ಚಿಮಕೋಡ ಗ್ರಾಮದಲ್ಲಿ ಜಾನಪದ ಸಾಂಸ್ಕೃತಿಕ ನಾಟಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಉಧ್ಘಾಟನೆಯನ್ನು ಶ್ರೀ ರಾಮದಾಸ ತ್ರೀಂಬಕರಾವ ಯಾಲ್ಲಾಲಿಂಗೇಶ್ವರ ಪ್ರೌಡ ಶಾಲೆ ಮುಖ್ಯ ಗುರುಗಳು ಇವರು ಹಲಿಗೆ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ.ಇಂದಿನ ಯುಗದಲ್ಲಿ ವಿಧ್ಯಾರ್ಥಿಗಳು ಅತಿ ಹೆಚ್ಚು ಮೂಬೃಲ ಬಳಿಕೆಯಿಂದ ದೂರವಿದ್ದು ನಮ್ಮ ದೇಶಿ ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಲು ಬೆಳೆಸಲು ಪ್ರತಿಯೂಬ್ಬರು ತಿಳಿದು ಕೊಳ್ಳಬೇಕು. ಜಾನಪದ, ಸಂಗೀತ, ನಾಟಕಗಳಿಂದ ನಮ್ಮ ಮನಸಿಗೆ ಶಾಂತಿ ಹಾಗು ನೆಮ್ಮದಿ ಸಿಗುತದೆ ಎಂದರು.
ಹಾಗು ಹಿರಿಯ ಜಾನಪದ ಕವಿ ಗಾಯಕರು ಆಕಾಶವಾಣಿ ದೂರದರ್ಶನ ಕಲಾವಿದರಾದ ಶ್ರೀ ದೇವದಾಸ ಚಿಮಕೋಡ ಇವರು ಮಾತನಾಡಿ ಜಾನಪದ ಕಲೆಗಳು ನಮ್ಮ ಮೂಲ ನೆಲದ ಪದಗಳು ಹಿಂದಿನ ಕಾಲದಲ್ಲಿ ನಮ್ಮ ತಾಯಿಂದರು ಕುಟ್ಟುವ ಬಿಸುವ ಮೂಲಕ ತಮ್ಮ ಬದುಕಿನಲ್ಲಿ ನಡೆಯುವ ಕಷ್ಟ ಸುಖದ ಸಂದೇಶವನ್ನ ಹಾಡುಗಳ ಮೂಲಕ ಹಗಲು ರಾತ್ರಿ ಸಾವಿರಾರು ಹಾಡುಗಳು ಹಾಡುತ್ತಿದ್ದರು ಇಂದು ಜನರು ಒತ್ತಡದ ಜೀವನಕ್ಕೆ ಮಣಿದು ಬಿ.ಪಿ ಸುಗರ್ ಹಚ್ಚಿಕೋಂಡು ಗಟ್ಟಿಯಾದ ಬದುಕು ಹಾಳು ಮಾಡಿಕೊಳ್ಳುತ್ತಿದಾರೆ ಎಂದರು.ವೇದಿಕೆಯಲ್ಲಿ ಶ್ರೀ ಪರಮೇಶ ಢೆಂಪೆ.ಸಿದ್ದಲಿಂಗ ಮೇತ್ರೆ, ಶ್ರೀಮತಿ ವಿಶಾಲಾಕ್ಷಿ ಪಾಟಿಲ್, ಶ್ರೀಮತಿ ರಂಜನಬಾಯಿ ಚವ್ಹಾಣ. ಉಪಸ್ಥಿತರಿದ್ದರು.
ವೇದಿಕೆಯ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ದೇವದಾಸ ಚಿಮಕೋಡ ತಂಡದಿಂದ ಗಿಗೀಪದ, ಶಿವರಾಜ ತಡಪಳ್ಳಿ ತಂಡದಿಂದ ಕನ್ನಡಜಾಗೃತಿಗೀತೆ, ಬಕ್ಕಪ್ಪಾ ದಂಡಿನ್ ತಂಡದಿಂದ ಜನಪರಗೀತೆ, ಇಮಾನವೇಲ್ ಗಾದಗಿ ತಂಡದಿಂದ ಸುಗ್ಗಿಪದ, ಸಿದ್ದಲಿಂದ ಯಾಲ್ಲಾಲಿಂಗ ತಂಡದಿಂದ ಜಾನಪದ ಹಾಸ್ಯುವ, ವೀರಶೆಟ್ಟಿ ತಂಡದಿಂದ ನಾಟಕ ಪ್ರದರ್ಶನ ನಡೆಯಿತು ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸಿಗೊಳಿಸಿದೆರೆಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ವೀಣಾ ಸಚಿನ್ ಇವರು ತಿಳಿಸಿದ್ದಾರೆ
Subscribe to get the latest posts sent to your email.