1
1

ಬೀದರ್:-ನಗರದ ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು 2026ನೇ ಸಾಲಿ£ ಜೆ.ಇ.ಇ. ಪರೀಕ್ಷೆ–1ರಲ್ಲಿ ಗಮನಾರ್ಹ ಸಾಧನೆ ಮಾಡಿ ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ಒಟ್ಟು 17 ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ಗೆ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಸಾಯಿಕುಮಾರ ಎಸ್. ಅವರು 82 ಶೇಕಡಾ ಅಂಕಗಳನ್ನು ಪಡೆದು ಮುಂಚೂಣಿಯಲ್ಲಿದ್ದು ವಿಶೇಷ ಸಾಧನೆ ಮಾಡಿದ್ದಾರೆ. ಶಿವಕುಮಾರ ಜಿ. (74%), ಸುದರ್ಶನ ಎಸ್. (72%), ಅಮುಲ್ಯ ಪಿ. (67%), ಕೃಷ್ಣ ಎಸ್. (68%), ಸಿದ್ಧಾರ್ಥ ಆರ್. (66%) ಮತ್ತು ಗಿರೀಶ ಜಿ. (59%) ಉತ್ತಮ ಅಂಕಗಳನ್ನು ಪಡೆದು ಅರ್ಹತೆ ಪಡೆದಿದ್ದಾರೆ.
ಇದಲ್ಲದೆ ಪ್ರಜ್ವಲ್ ಎಸ್., ಗಣೇಶ ಪಿ., ಸಂಧ್ಯಾರಾಣಿ ಎಸ್., ಕಿರಣ ಬಿ., ಸ್ನೇಹಾ ಎಸ್., ಭೂಮಿಕಾ ಜೆ., ರೋಹಿತ್ ಆರ್., ಅಮೂಲ್ಯ ಎಂ., ವೇದಾಂತ್ ಎ., ಸುಮಿತ್ ಎಸ್. ಸೇರಿದಂತೆ ಇತರ ವಿದ್ಯಾರ್ಥಿಗಳೂ ಜೆ.ಇ.ಇ. ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.
2025–26ನೇ ಸಾಲಿನ ಜನವರಿಯಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರವೇಶ ಪರೀಕ್ಷೆಗೆ ದೇಶಾದ್ಯಂತ 15 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ ಸಪ್ತಗಿರಿ ಕಾಲೇಜಿನ 17 ವಿದ್ಯಾರ್ಥಿಗಳು ಉತ್ತಮ ಅಂಕಗಳೊAದಿಗೆ ಆಯ್ಕೆಯಾಗಿರುವುದು ವಿಶೇಷವೆಂದು ಕಾಲೇಜು ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳ ಸಾಧನೆಗೆ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ ಡಿ. ತಾಂದಳೆ, ಕಾಲೇಜಿನ ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Subscribe to get the latest posts sent to your email.