Popular Posts

ದೈಹಿಕ ಶಿಕ್ಷಣ ಪುಸ್ತಕದಲ್ಲೇ ಮೌಲ್ಯ ಶಿಕ್ಷಣ ಸೇರಿಸಿ

ಬೀದರ್: 2026-27ನೇ ಸಾಲಿನ ಪಠ್ಯಕ್ರಮದಲ್ಲಿ ಪ್ರತ್ಯೇಕ ಮೌಲ್ಯ ಶಿಕ್ಷಣ ಪುಸ್ತಕ ಅಳವಡಿಸಬಾರದು. ದೈಹಿಕ ಶಿಕ್ಷಣ ಪುಸ್ತಕದಲ್ಲೇ ಮೌಲ್ಯ ಶಿಕ್ಷಣದ ಅಂಶ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಆಗ್ರಹಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 2026-27ನೇ ಸಾಲಿನ ಪಠ್ಯ ಪುಸ್ತಕಗಳ ಬೇಡಿಕೆಯಲ್ಲಿ ದೈಹಿಕ ಶಿಕ್ಷಣ ಪಠ್ಯ ಪುಸ್ತಕದ ಹೆಸರು ಕೈಬಿಡಲಾಗಿದೆ. ಅದರ ಬದಲು ‘ಮೌಲ್ಯ ಶಿಕ್ಷಣ’ ಪುಸ್ತಕದಲ್ಲಿ ದೈಹಿಕ ಶಿಕ್ಷಣದ ಪಠ್ಯ ವಸ್ತು ಸೇರಿಸಲಾಗಿದೆ. ಇದು, ದೈಹಿಕ ಶಿಕ್ಷಣ ಶಿಕ್ಷಕರಿಗೆ ಆಘಾತ ಉಂಟು ಮಾಡಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಬಿ. ಸೂರ್ಯವಂಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2006 ರಲ್ಲಿ ಪ್ರೊ. ಎಲ್.ಆರ್. ವೈದ್ಯನಾಥನ್ ಸಮಿತಿ ನೀಡಿದ ವರದಿಯಂತೆ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಪಠ್ಯ ಪುಸ್ತಕ ಕಡ್ಡಾಯಗೊಳಿಸಿ, 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ದೈಹಿಕ ಶಿಕ್ಷಣ ಪುಸ್ತಕವು ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸೂತ್ರಗಳನ್ನು ತಿಳಿಸಿಕೊಡಲು ಸಹಕಾರಿಯಾಗಿದೆ. ಕ್ರೀಡಾ ಸಾಧನೆಗೆ ಉತ್ತೇಜನ ಸಹ ನೀಡಲಿದೆ. ಹೀಗಾಗಿ ದೈಹಿಕ ಶಿಕ್ಷಣ ಪುಸ್ತಕದಲ್ಲೇ ಮೌಲ್ಯ ಶಿಕ್ಷಣ ಅಳವಡಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.
ದೈಹಿಕ ಶಿಕ್ಷಣ ಪುಸ್ತಕ ಕೈಬಿಟ್ಟರೆ, ದೈಹಿಕ ಶಿಕ್ಷಣ ಮಹತ್ವ ಕಳೆದುಕೊಳ್ಳಲಿದೆ. ಕಾರಣ, ದೈಹಿಕ ಶಿಕ್ಷಣದ ಬದಲಿಗೆ ಅಳವಡಿಸಲು ಉದ್ದೇಶಿಸಿರುವ ‘ಮೌಲ್ಯ ಶಿಕ್ಷಣ’ ಹೆಸರಿನ ಪುಸ್ತಕದ ಹೆಸರನ್ನು ‘ದೈಹಿಕ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ’ ಎಂದು ಇಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading