Popular Posts

ಬೀದರ ಜಿಲ್ಲಾ ಪೊಲೀಸರಿಂದ 41 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ

ಬೀದರ ಜಿಲ್ಲಾ ಪೊಲೀಸ್, ಬೀದರ ಜಿಲ್ಲೆಯ ಮನ್ನಳ್ಳಿ ಪೊಲೀಸ್ ಠಾಣೆ ರವರಿಂದ 41 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ”*
ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಮನ್ನಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಂಗೂರ ಗ್ರಾಮದ ಹತ್ತಿರ ಸರ್ವಿಸ್ ರೋಡಿನ ಬದಿಯಲ್ಲಿ ಅನಧಿಕೃತವಾಗಿ ಹೈದ್ರಾಬಾದ ಮುಂಬೈ ಹೈವೆ ಮಾರ್ಗದ ಮೂಲಕ ಗಾಂಜಾವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸಲು ಗಾಂಜಾವನ್ನು ಸಂಗ್ರಹಿಸಿಟ್ಟು, ಸಾಗಾಣಿಕೆ ಮಾಡಲು ವಾಹನಕ್ಕಾಗಿ ಕಾಯುತ್ತಿರುವ ಮಾಹಿತಿಯಂತೆ, ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೀದರ ರವರ ಮುಂದಾಳತ್ವದಲ್ಲಿ, ಶ್ರೀ ದೂದಪೀರ್ ಹುಸೇನ್ ಸಾಬ್ ಮುಲ್ಲಾ, ಪೊಲೀಸ್ ಉಪಾಧೀಕ್ಷಕರು ಬೀದರ ರವರ ನೇತೃತ್ವದಲ್ಲಿ, ಶ್ರೀ ಜಿ.ಎಸ್. ಬಿರಾದರ, ಸಿಪಿಐ ಬೀದರ ಗ್ರಾಮೀಣ ವೃತ್ತ, ಮನ್ನಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ನಂದಿನಿ ಹಾಗು ಸಿಬ್ಬಂದಿಯವರಾದ ಶ್ರೀ ವಿಜಯಕುಮಾರ, ಶ್ರೀ ಭೀಮರಾಯ, ಶ್ರೀ ಗಣೇಶ ಹಾಗೂ ಶ್ರೀ ಕೈಲಾಸ ರವರನ್ನೊಳಗೊಂಡ ತಂಡದೊಂದಿಗೆ ಶ್ರೀ ರವೀಂದ್ರ ದಾಮಾ ತಹಸಿಲ್ದಾರರು ಬೀದರ ರವರ ಸಮಕ್ಷಮ ದಾಳಿ ಮಾಡಿ 83 ಕೆ.ಜಿ 670 ಗ್ರಾಂ ಅ.ಕಿ. 41,83,500=00 ರೂಪಾಯಿ ಮೌಲ್ಯದ ಗಾಂಜಾ ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ.
ನಶಾ ಮುಕ್ತ ಮಾಡುವ ಸಂಕಲ್ಪ ಇಟ್ಟುಕೊಂಡು ಗಾಂಜಾ ದಾಳಿಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!