ಔರಾದ್ : ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ ಶ್ರೀ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾ ಪುರಾಣ ಪ್ರವಚನ ಕಾರ್ಯಕ್ರಮದ ಐದನೇ ದಿನವಾದ ಸೋಮವಾರ ಭಕ್ತ ಸಮೂಹದ ನಡುವೆ ಶ್ರೀ ಸಿದ್ದಲಿಂಗೇಶ್ವರರ ತೊಟ್ಟಿಲು ಕಾರ್ಯಕ್ರಮ ಭಕ್ತಿ ವೈಭವದಿಂದ ಜರುಗಿತು.
ಪ್ರವಚನಕಾರರಾದ ವೇದಮೂರ್ತಿ ಗುರುಪಾದಯ್ಯ ಶಾಸ್ತ್ರಿಗಳು ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಶ್ರೀ ಸಿದ್ದಲಿಂಗೇಶ್ವರರ ಜೀವನ, ತತ್ವ ಹಾಗೂ ಶಿವಭಕ್ತಿಯ ಮಹತ್ವವನ್ನು ಸಾರುವ ಮಹಾ ಪುರಾಣ ಪ್ರವಚನ ಭಕ್ತರು ಶ್ರದ್ಧಾಭಕ್ತಿಯಿಂದ ಆಲಿಸಿದರು. ತೊಟ್ಟಿಲು ಕಾರ್ಯಕ್ರಮದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ತೊಟ್ಟಿಲು ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ಶ್ರೀ ಸಿದ್ದಲಿಂಗೇಶ್ವರರ ತೊಟ್ಟಿಲು ತೂಗಿ ದರ್ಶನ ಪಡೆದರು. ಸಂಗೀತ ಕಲಾವಿದರಾದ ಪುರುಷೋತ್ತಮ ದೇಸಾಯಿ ಅವರು ಸಂಗೀತ ಸೇವೆ ನೀಡಿದರು.
ಶ್ರಾವಣ ಮಾಸದ ಅಂಗವಾಗಿ ಪ್ರತಿದಿನ ನಡೆಯುತ್ತಿರುವ ಮಹಾ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಮತ್ತು ಧಾರ್ಮಿಕ ಜಾಗೃತಿಗೆ ವೇದಿಕೆಯಾಗಿದೆ.
ಈ ಸಂಧರ್ಭದಲ್ಲಿ ಹಿರಿಯರಾದ ಬಸವರಾಜ ದೇಶಮುಖ, ರೇವಣಪ್ಪ ಕೇದಾರೆ, ಬಸವರಾಜ ಚ್ಯಾರೆ, ಕಲ್ಯಾಣರಾವ ದೇಶಮುಖ, ಸೂರ್ಯಕಾಂತ ಬುಟ್ಟೆ, ಸುಭಾಷ ನಿರ್ಮಳೆ, ಶರಣಪ್ಪ ಪಂಚಾಕ್ಷರಿ, ಶ್ರೀಕಾಂತ ಅಲ್ಮಾಜೆ, ಮಹಾದೇವ ಮುದ್ದಾ, ಆನಂದ ದ್ಯಾಡೆ, ಸಂದೀಪ ಪಾಟೀಲ, ಅಮರಸ್ವಾಮಿ ಸ್ಥಾವರಮಠ, ಸರುಬಾಯಿ ರಾಗಾ, ನಿಲಮ್ಮ ಚ್ಯಾರೆ, ಮಹಾದೇವಿ ಶಹಾಪುರ, ವಿದ್ಯಾವತಿ ಹೆಡೆ, ಪ್ರಭಾವತಿ ಮುದ್ದಾ, ಸುನೀತಾ ಮುದ್ದಾ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
Discover more from ಕಲಿಯುಗದ ಕೂಗು
Subscribe to get the latest posts sent to your email.