Popular Posts

ಭಜನಾ ಸಂಸ್ಕೃತಿಯಿoದ ಮಾನವೀಯ ಮೌಲ್ಯಗಳ ರಕ್ಷಣೆ ಸಾಧ್ಯ ಡಾ: ಹೆಬ್ಬಾಳೆ

ಬೀದರ್ ಃ ಭಜನಾ ಸಂಸ್ಕತಿಯಿ0ದ ಮಾನವೀಯ ಮೌಲ್ಯಗಳ ರಕ್ಷಣೆ ಸಾಧ್ಯವಾಗಿದ್ದು, ಭವ್ಯ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಭಜನಾ ಸಂಸ್ಕೃತಿಯ ಪಾತ್ರ ಬಹಳಷ್ಟಿದೆ ಎಂದು ರಾಷ್ಟಿçÃಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ: ರಾಜಕುಮಾರ ಹೆಬ್ಬಾಳೆ ಹೇಳಿದರು.
ಭಾಲ್ಕಿ ತಾಲ್ಲೂಕಿನ ಡೊಂಗರಗಿ ಗ್ರಾಮದ ಹನುಮಾನ ಮಂದಿರದ ಮುಂಭಾಗದಲ್ಲಿ ರವಿವಾರ ಸಂಜೆ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಗುಮ್ಮೆ ಕಾಲೋನಿ ಬೀದರನ ಸಹಯೋಗದಲ್ಲಿ ನೂತನ ಜೈ ಹನುಮಾನ ಭಜನಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಭಜನಾ ಸಂಸ್ಕೃತಿ ಉಳಿಸಿ ಬೆಳೆಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಸ್ಕೃತಿ ಇಲಾಖೆಯ ಮುಖಾಂತರ ಅವರಿಗೆ ಮಾಶಾಸನ ಸೇರಿದಂತೆ ಪ್ರಾಯೋಜಿತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಹಳ್ಳಿಗಾಡಿನ ಅದರಲ್ಲೂ ವಿಶೇಷವಾಗಿ ಜಾನಪದ ಕಲೆ ಹಾಗೂ ಸಂಸ್ಕೃತಿಯನ್ನು ಉತ್ತಿ ಬಿತ್ತಿ ಬೆಳೆಸುವ ಕಾರ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದ್ದು, ಇಲ್ಲಿಯ ಕಲಾವಿದರು ಸರ್ಕಾರದ ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಂಡು ಗ್ರಾಮೀಣ ಸಂಸ್ಕೃತಿಯನ್ನು ಇನ್ನಷ್ಟು ಶ್ರೀಮಂತಗೊಳಿಸುವAತೆ ಕರೆಕೊಟ್ಟರು.
ಭಾರತದ ಪ್ರಧಾನಿ ನರೇಂದ್ರ ಮೋದಿಜಿಯವರು ಭವ್ಯಭಾರತದ ಕಲಾ ವೈಢುರ್ಯವನ್ನು ಎತ್ತಿಹಿಡಿಯಲು ವಿದೇಶಗಳಲ್ಲಿ ಹೋದಲ್ಲೆಲ್ಲ ಕಲಾವಿದರನ್ನು ಕರೆಸಿ ಅವರಿಂದ ಸ್ವಾಗತಿಸಿಕೊಂಡು ಅವರನ್ನು ಹುರಿದುಂಬಿಸುವ ಕಾರ್ಯ ಮಾಡುತ್ತಿರುವರು. ಹಾಗಾಗಿ ಭಾರತದ ಸಂಸ್ಕೃತಿಯನ್ನು ವಿದೇಶದಲ್ಲೂ ಸಹ ಪ್ರಚುರಪಡಿಸುವ ಪ್ರಧಾನಿಯವರ ಕಾರ್ಯ ನಾವೆಲ್ಲ ಮುಕ್ತ ಕಂಠದಿAದ ಹೊಗಳಲೇಬೇಕು ಎಂದರು.
ಪತ್ರಕರ್ತ ಶಿವಕುಮಾರ ಸ್ವಾಮಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ, ಅಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಒಂದು ದಶಕ್ಕೂ ಅಧಿಕ ವರ್ಷಗಳಿಂದ ತಮ್ಮನ್ನು ತಾವು ತೊಡಗಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವರು. ತಮ್ಮ ಹುಟ್ಟೂರಿನಲ್ಲಿ ಇಂತಹ ಕಾರ್ಯಕ್ರಮ ಮಾಡುವ ಮೂಲಕ ಸುತ್ತಲಿನ ಹಳ್ಳಿಗಳಿಗೆ ಸೇರಿದಂತೆ ಇಡೀ ಜಿಲ್ಲೆಗೆ ಒಂದು ಹೊಸ ಸಂದೇಶ ನೀಡಿ ಭಜನಾ ಸಂಸ್ಕೃತಿಯಿAದ ಗ್ರಾಮೀಣ ಸಂಸ್ಕೃತಿ ಉಳಿಯುವಿಕೆ ಬಗ್ಗೆ ಸಂಗಮೇಶ ಬಿರಾದಾರ ಅವರಿಗಿರುವ ಕಾಳಜಿ ಮಾದರಿಪ್ರಾಯವಾಗಿದೆ ಎಂದು ಬಣ್ಣಿಸಿದರು.
ವಿಶೇಷ ಉಪನ್ಯಾಸ ನೀಡಿದ ಔರಾದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎ. ಅಮರವಾಡಿ ಮಾತನಾಡಿ, ಇಂದು ಮೊಬೈಲ್ ಸಂಸ್ಕೃತಿಯಿAದ ಗ್ರಾಮೀಣ ಕಲೆ, ಸಂಸ್ಕೃತಿ, ಸಂಪ್ರದಾಯ ನಶಿಸಿ ಹೋಗುತ್ತಿವೆ. ಅಂಕಗಳ ಸರಮಾಲೆಯನ್ನು ಹೊತ್ತಿರುವ ಯುವ ಜನರಿಗೆ ಕಲೆ ಹಾಗೂ ಸಂಸ್ಕೃತಿಯ ಅರಿವೇ ಇಲ್ಲದಂತಾಗಿದೆ. ಗ್ರಾಮೀಣ ಜಾನಪದ ಪರಂಪರೆ ಪುನರುಜ್ಜೀವನಗೊಳ್ಳಬೇಕಾದರೆ ಭಜನಾ ಸಂಸ್ಕೃತಿಯನ್ನು ಸಾರ್ವತ್ರಿಕವಾಗಿ ಎಲ್ಲೆಡೆ ಪ್ರಚುರಪಡಿಸಬೇಕಾಗಿದೆ. ಇಂತಹ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯಲಿ ಎಂದರು. ಉದ್ಯಮಿ ಅಶೋಕ ಹೆಬ್ಬಾಳೆ ಮಾತನಾಡಿದರು.
ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಡಿವಾಳಯ್ಯ ಸಾಲಿಮಠ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಂಗೀತ ಶಿಕ್ಷಕರಾದ ಸಂಗಯ್ಯ ಸ್ವಾಮಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ನ ಅಧ್ಯಕ್ಷ ಸಂಗಮೇಶ ಬಿರಾದಾರ ಅಧ್ಯಕ್ಷತೆ ವಹಿಸಿದರು.
ಇದೇ ವೇಳೆ ಜೈ ಹನುಮಾನ ಭಜನೆ ಮತ್ತು ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸುವ ಮೂಲಕ ಸಂಘ ಉದ್ಘಾಟಿಸಲಾಯಿತು. ಇದೇ ವೇಳೆ ಸ್ಥಳೀಯ ಅಕ್ಕಮಹಾದೇವಿ ಮಹಿಳಾ ಭಜನಾ ಸಂಘದವರು ಜಾನಪದ ಗಾಯನ ನಡೆಸಿಕೊಟ್ಟರು.
ಆರಂಭದಲ್ಲಿ ಕು. ಪ್ರಗತಿ ಎಸ್. ಹಿರೇಮಠ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು. ಸಿದ್ರಾಮಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ಮಲ್ಲಿಕಾರ್ಜುನ ಬಿರಾದಾರ ವಂದಿಸಿದರು.
ಸಂಘದ ಪ್ರಮುಖರಾದ ಅನೀಲಕುಮಾರ ಬಿರಾದಾರ, ಗಣಪತಿ ಧೂಳೆ, ಧನರಾಜ ಸುಂಕನಾಳೆ, ದೇವಿದಾಸ, ಹಣಮಂತರಾವ, ಶಿವರಾಜ ಬಿರಾದಾರ, ಮನೋಹರ ಬಿರಾದಾರ, ಬಾಬುರಾವ ಹುಣಜೆ ಹಾಗೂ ನಾಗನಾಥ ಸುಂಕನಾಳೆ, ಬಂಡೆಪ್ಪ ಬಿರಾದಾರ, ಪಂಡಿತ ಬಿರಾದಾರ, ಸಂಜೀವಕುಮಾರ ಬಿರಾದಾರ, ಮಲ್ಲಮ್ಮ ಹೆಬ್ಬಾಳೆ, ಭಾರತಿ ಬಿರಾದಾರ, ಅಶ್ವಿನಿ ಹೆಬ್ಬಾಳೆ, ಸೂಗಮ್ಮ, ಕಲಾವತಿ, ಸುಶೀಲಮ್ಮಾ, ಕಸ್ತೂರಬಾಯಿ, ಭಾಗ್ಯವತಿ, ಸಂಗೀತಾ ಉಪಸ್ಥಿತರಿದ್ದರು.

4 Attachments  •  Scanned by Gmail


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading