1
1

ಬೀದರ್ ಕ್ಷೇತ್ರದ ಗೌರವಾನ್ವಿತ ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ರಹೀಂ ಖಾನ್ ಜಿ ಅವರು ಮಾರ್ಖಲ್ ಹಾಗೂ ನಂದಗಾಂವ್ ಗ್ರಾಮಗಳಲ್ಲಿ ರೈತರಿಗೆ ಕೀಟನಾಶಕಗಳು, ರಸಗೊಬ್ಬರಗಳು ಹಾಗೂ ಕೃಷಿ ಸಿಂಪಡಣಾ ಯಂತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರೈತರು ಶಾಸಕರಾದ ರಹೀಂ ಖಾನ್ ಅವರ ರೈತಪರ ಕಾಳಜಿ ಹಾಗೂ ನಿರಂತರ ಬೆಂಬಲವನ್ನು ಶ್ಲಾಘಿಸಿದರು.
ರೈತರನ್ನುದ್ದೇಶಿಸಿ ಮಾತನಾಡಿದ ಶಾಸಕರು, ರೈತರಿಗೆ ಬೆಳೆ ವಿಮೆ ಒದಗಿಸುವಲ್ಲಿ ಬೀದರ್ ಜಿಲ್ಲೆ ಕರ್ನಾಟಕದಲ್ಲೇ ಮುಂಚೂಣಿ ಜಿಲ್ಲೆಗಳಲ್ಲೊಂದಾಗಿದೆ ಎಂದು ತಿಳಿಸಿದರು. ರೈತರ ಹಿತಾಸಕ್ತಿ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸದಾ ತಮ್ಮ ಬೆಂಬಲ ಇರುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ AD, AHO ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.
Subscribe to get the latest posts sent to your email.