1
1

ಬೀದರ: ಇಂದು ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬೀದರ ಹಾಗೂ ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿ ಬೀದರ ವತಿಯಿಂದ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಫೆಬ್ರವರಿ 26 ರಂದು ಬೀದರ ಜಿಲ್ಲಾ ರಂಗಮAದಿರದಲ್ಲಿ ಜರುಗಲಿರುವ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತ್ಯೋತ್ಸವ ಅಂಗವಾಗಿ ಆಯೋಜಿಸಲಿರುವ ಐಎಎಸ್–ಕೆಎಎಸ್ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ, ಕಾನೂನು ಅರಿವು ಮತ್ತು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಂಭ್ರಮ–2026 ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಕರಪತ್ರವನ್ನು ಮನೆ ಮನೆಗೆ ಅಂಬೇಡ್ಕರ್ ಅಭಿಯಾನದ ಅಧ್ಯಕ್ಷ ಡಾ. ಕಾಶಿನಾಥ ಚೆಲ್ವಾ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಹಾಗೂ ಜಯಂತ್ಯೋತ್ಸವ ಸಮಿತಿ ಸಂಯೋಜಕ ಮಹೇಶ ಗೋರನಾಳಕರ್, ಪ್ರಮುಖರಾದ ಪ್ರಕಾಶ ರಾವಣ, ಶರಣು ಫುಲೆ, ಶ್ರೀನಿವಾಸ ದಯಾಳ, ತುಕಾರಾಮ ನೆಳಗಿ, ಉತ್ತಮ ಕೆಂಪೆ, ಈಶ್ವರ ಕೆಂಪೆ, ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಯ ಗೌರವಾಧ್ಯಕ್ಷೆ ಉಷಾಬಾಯಿ ಬನ್ಸುಡೆ, ಅಧ್ಯಕ್ಷೆ ನಂದಮ್ಮಾ ಕುಂದೆ, ಕಾರ್ಯಾಧ್ಯಕ್ಷೆ ಕಲ್ಪನಾ ಗೋರನಾಳಕರ್, ಉಪಾಧ್ಯಕ್ಷೆ ಶೆಶಿಕಲಾ ಶರ್ಮಾ, ಪ್ರಧಾನ ಕಾರ್ಯದರ್ಶಿ ಸೋನಮ್ಮಾ ಕಸ್ತೂರೆ, ಕಾರ್ಯದರ್ಶಿ ಕಮ್ಮಳಮ್ಮಾ ಸಂತಪೂರೆ, ಸಲಹೆಗಾರರಾದ ಗಂಗಮ್ಮಾ ಫುಲೆ ಹಾಗೂ ಸದಸ್ಯರಾದ ಪಂಚಫುಲಾ ಗಾಯಕವಾಡ, ಸುಧಾಮಣಿ ಗುಪ್ತಾ, ಸಂಗೀತಾ ಕಾಂಬಳೆ, ಕಲಾವತಿ ಕಾಳೆಕರ್, ಶಾರದಾ ಆಳಂದಕರ್, ಇಂದುಮತಿ ಸಾಗರ್, ಉಜ್ವಾಲಾ ಪಡಸಾಲೆ, ಶ್ರೀದೇವಿ ಸಿಂಘೆ, ಕಾವೇರಿ ಕಾಳೆಕರ್, ಚಿನ್ನಮ್ಮಾ ಲಾಧಾ, ವೀಣಾ ಗುಪ್ತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಘಟಕರು ಕರೆ ನೀಡಿದ್ದಾರೆ.
Subscribe to get the latest posts sent to your email.