ಬೀದರ್ ದಕ್ಷಿಣ ಕ್ಷೇತ್ರದ ಘೋಡಪಳ್ಳಿ ಗ್ರಾಮದಲ್ಲಿ ಅಂಬವ್ವ ಅವರ ಮನೆಯಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ಉಂಟಾದ ಹಾನಿಯ ಕುರಿತು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾಹಿತಿ ಪಡೆದರು.
ದುರ್ಘಟನೆಯಲ್ಲಿ ನಷ್ಟ ಅನುಭವಿಸಿದ ಕುಟುಂಬಕ್ಕೆ ತಕ್ಷಣವೇ ವೈಯಕ್ತಿಕ ಧನ ಸಹಾಯವನ್ನು ನೀಡಿದರು. ಅಲ್ಲದೆ, ಸರ್ಕಾರದಿಂದ ಶೀಘ್ರ ಪರಿಹಾರ ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಪವಾರ್, ನಾಗಭೂಷಣ ಕಮಠಾಣೆ, ಶಿವಕುಮಾರ ಸ್ವಾಮಿ, ಉದಯ ತೋರಣ, ಅಶೋಕ್ ಪಾಟೀಲ, ಬಸವರಾಜ ಹಿಲಾಲಪುರ, ರವಿ ಬಾಲೆಬಾಯಿ, ಶ್ರೀನಿವಾಸ್ ಹೂಗಾರ, ರಾಜಶೇಖರ, ಶಿವಕುಮಾರ ಸುಲ್ತಾನಪುರ, ಸಾಯಿನಾಥ ಪಾಟೀಲ, ವಿಶಾಲ ಅತಿವಾಳ, ಆದಿತ್ಯಾ ರೆಡ್ಡಿ, ಪ್ರವೀಣ ಪಾಟೀಲ, ಶಿವಕುಮಾರ ಸ್ವಾಮಿ, ತುಕಾರಾಮ, ಸಾಯಿನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Discover more from ಕಲಿಯುಗದ ಕೂಗು
Subscribe to get the latest posts sent to your email.