Popular Posts

ಸಾರ್ವಜನಿಕರು ಹಾಗೂ ರೈತರು ಪಾರ್ಥೇನಿಯಂ ಕಳೆ ನಿರ್ಮೂಲನೆಗೆ ಮುಂದಾಗಿ : ಡಾ.ಎಸ್.ವಿ.ಪಾಟೀಲ್

ಬೀದರ, ಆಗಸ್ಟ್ 19 (ಕರ್ನಾಟಕ ವಾರ್ತೆ) : ಒಂದು ಪಾರ್ಥೇನಿಯಂ ಸಸ್ಯವು 5,000 ದಿಂದ 25,000 ಬೀಜಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಗಾಳಿ, ನೀರು ಹಾಗೂ ಮಾನವ ಚಟುವಟಿಕೆಗಳಿಂದ ವೇಗವಾಗಿ ಹರಡುತ್ತದೆ. ಇದು ಕೃಷಿ ಭೂಮಿಯ ಫಲವತ್ತತೆ ಮತ್ತು ಬೆಳೆಗಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಮಾನವರಲ್ಲಿ ಚರ್ಮದ ಅಲರ್ಜಿ ಹಾಗೂ ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ, ಸಾರ್ವಜನಿಕರು ಮತ್ತು ರೈತರು ಇದನ್ನು ಸೂಕ್ತ ಸಮಯದಲ್ಲಿ ನಿಯಂತ್ರಿಸಬೇಕು ಎಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಡಾ.ಎಸ್.ವಿ.ಪಾಟೀಲ್ ಕರೆ ನೀಡಿದರು.

ಬೀದರ ನಗರದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ತೋಟಗಾರಿಕಾ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ರಾಷ್ಟಿçÃಯ ಸೇವಾ ಯೋಜನೆ (ಓSS) ಘಟಕ 1 ಮತ್ತು 2ರ ಸಂಯುಕ್ತಾಶ್ರಯದಲ್ಲಿ “21ನೇ ಪಾರ್ಥೇನಿಯಂ ಜಾಗೃತಿ ಸಪ್ತಾಹ” ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಅವರ ಮಾತನಾಡಿದರು.

ನಂತರ ಮಾತನಾಡಿದ ಡಾ. ಎಸ್.ವಿ.ಪಾಟೀಲ್, 1950ರಲ್ಲಿ ಅಮೆರಿಕದಿಂದ Pಐ-480 ಯೋಜನೆ ಅಡಿಯಲ್ಲಿ ಗೋಧಿ ಆಮದು ಮಾಡಿಕೊಂಡಾಗ ಪಾರ್ಥೇನಿಯಂ ಸಸ್ಯ ಭಾರತಕ್ಕೆ ಪ್ರವೇಶಿಸಿದ್ದು, 1955-56ರಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಕಾಣಿಸಿಕೊಂಡಿತ್ತು ಎಂದರು.

ಬಳಿಕ ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ.ವಿಜಯ ಮಹಾಂತೇಶ ಅವರು ಪಾರ್ಥೇನಿಯಂ ನಿಯಂತ್ರಣ ವಿಧಾನಗಳು ಹಾಗೂ ಪರಿಸರ ಸಂರಕ್ಷಣೆ ಕುರಿತು ಸುದೀರ್ಘವಾಗಿ ವಿವರಿಸಿದರು.

ಇದೇ ವೇಳೆ ಕಾಲೇಜು ಆವರಣದಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಪಾರ್ಥೇನಿಯಂ ಕಳೆಯನ್ನು ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಶ್ರಮದಾನದ ಮೂಲಕ ತೆರವುಗೊಳಿಸಿದರು. ಕಾರ್ಯಕ್ರಮದಲ್ಲಿ ಪ್ರೊಫೆಸರ್‌ಗಳಾದ ಡಾ. ಮುಹ್ಮದ್ ಫಾರೂಕ್, ಡಾ.ಅನುರಾಧಾ, ಡಾ.ಜಾನವಿ ಡಿ.ಆರ್, ಮತ್ತು ಓSS ಅಧಿಕಾರಿ ಡಾ.ರಮೇಶ ನಾಯಕ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading