Popular Posts

ಹಳ್ಳಿಖೇಡ್ : ಸರ್ವೇಶ್ವರ್ ದೇವರ ಪಲ್ಲಕಿ ಉತ್ಸವ 

ಬೀದರ್ : ಹಳ್ಳಿಖೇಡ ಬಿ ಪಟ್ಟಣ ದಲ್ಲಿನ  ಸರ್ವೇಶ್ವರನ ದೇವಾಲಯ ದಲ್ಲಿ  ರವಿವಾರ ದಂದು ಪಲ್ಲಕ್ಕಿ ಉತ್ಸವ ಜರುಗಿತು. ಶತಮಾನಗಳಿಗಿಂತಲೂ ಪುರಾತನವಾದ ಸರ್ವೇಶ್ವರ್ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ. ಇದನ್ನು ಯಾರು ಪ್ರತಿಷ್ಠಾಪಿಸ್ತಾರೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಇದು ಸ್ವಯಂಭು ಶಿವ, ಗಿಡಗಂಟೆಗಳಿಂದ ಸುತ್ತುವರೆದಿರುವ ಶಿವಲಿಂಗವನ್ನು ವಿಪ್ರ ಸಮುದಾಯದವರು ಕೂಡಿಕೊಂಡು ಚಿಕ್ಕದಾದ ಗರ್ಭಗುಡಿಯನ್ನ ನಿರ್ಮಿಸಿರುತ್ತಾರೆ. ತದನಂತರ ಪೂಜೆ ಅರ್ಚನೆ ಆರಾಧನೆ ಅಭಿಷೇಕ ಪ್ರತಿಯೊಂದು ನಡೆಯುತ್ತಿರುತ್ತವೆ.ಅತಿ ಬರಗಾಲದ ಪರಿಸ್ಥಿತಿ  ಒಮ್ಮೆ ಬಂದಾಗ ಎಲ್ಲರೂ ಕೂಡಿ ಶಿವನಿಗೆ ಸಂತ್ರಧಾರೆ ಪೂಜೆಯನ್ನ ಪ್ರಾರಂಭಿಸೋಣ ಮತ್ತು ಜೋಳಿಗೆ ಪೂಜೆಯನ್ನು ಸಹ ಪ್ರಾರಂಭಿಸೋಣ ಎಂದು ನಿರ್ಧಾರ ಮಾಡುತ್ತಾರೆ. ದಶಕಗಳಿಂದ ಪ್ರಾರಂಭವಾದ ಈ ಒಂದು ಪೂಜೆ ಇಲ್ಲಿಯವರೆಗೂ ನಡೆಸಿಕೊಂಡು ಬಂದಿರುತ್ತಾರೆ ಏಳು ದಿನಗಳ ಕಾಲ ಹಗಲಿರುಳು ಎನ್ನದೆ ಜಲಧಾರೆ ಪೂಜೆ ಶಿವನಾಮಸ್ಮರಣೆಯ ಮಂತ್ರಗಳು ಮತ್ತು ದಿನಾಲು ಪ್ರತಿಯೊಬ್ಬರ ಮನೆಯಿಂದ ಭೋಜನವನ್ನು ತಂದು ಶಿವನಿಗೆ ಅರ್ಪಿಸಿ ಎಲ್ಲರೂ ಮಹಾಪ್ರಸಾದವಾಗಿ ಸ್ವೀಕರಿಸುತ್ತಾರೆ.ಜೊತೆಗೆ ವಿಶಿಷ್ಟ ಪೂರ್ಣವಾದ ಜೋಳಿಗೆ ಪೂಜೆಯನ್ನು ಮಾಡುತ್ತಾರೆ .  ರವಿವಾರ ಭಜನೆ ಆರತಿ ಪಲ್ಲಕಿಯ ಮೆರವಣಿಗೆ  ನಡೆಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ಕೇಶವ್ ರಾವ್ ಮಹಾರಾಜ್ ಪಾಂಡುರಂಗ ಮಹಾರಾಜ್ ಶಿವರಾಮ್ ದೀಕ್ಷಿತ್ ಗುರುನಾಥ್ ದೀಕ್ಷಿತ್ ದೇವಿದಾಸ ದೀಕ್ಷಿತ್ ನಿಖಿಲೇಶ್ ದೀಕ್ಷಿತ್,ದೇವಿಪ್ರಸಾದ್ ದೀಕ್ಷಿತ್ , ರಾಜೇಶ್ ಕುಲಕರ್ಣಿ  ಸಂಜಯ್ ಪಟ್ವಾರಿ ,ಮಧುಕರ್ ದೇಶಪಾಂಡೆ ,ಭಗವಂತ್ ಬೂತಗಿ, ಮುರಾರ್ಜಿ ಕುಲಕರ್ಣಿ,ದೇವೇಂದ್ರ ಪತ್ತಗಿ, ಬಂಡು ಮಹಾರಾಜ್,  ನಾಗನಾಥ್ ಮಹಾರಾಜ್.ರಾಜು ಪಟ್ವಾರಿ , ದತ್ತು ಜೋಶಿ, ಸರ್ವೇಶ್ವರ ಮಹಿಳಾ ಮಂಡಲ ಸದಸ್ಯರು ಸೇರಿದಂತೆ ಗ್ರಾಮದ ನೂರಾರು  ಭಕ್ತರು ಪಲ್ಲಕಿ ಮೆರವಣಿ ಗೆ ಯಲ್ಲಿ  ಭಾಗವಸಿ ಸರ್ವೇಶ್ವರ್ ದೇವರ ಕ್ರಪೆಗೆ ಪಾತ್ರರಾದರು.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading

Subscribe