Popular Posts

ಅಂಚೆ ಇಲಾಖೆಯಿಂದ ಸಾರ್ವಜನಿಕರಿಗಾಗಿ ಸುರಕ್ಷಿತ ಉಳಿತಾಯ ಮತ್ತು ಬ್ಯಾಂಕಿಂಗ್ ಸೇವೆಗಳು

ಕಲಬುರಗಿ,ಫೆ.24.-ಭಾರತ ಸರ್ಕಾರದ ಅಂಚೆ ಇಲಾಖೆಯು ಸಾರ್ವಜನಿಕರಿಗೆ ವಿಶ್ವಾಸಾರ್ಹ ಹಾಗೂ ಸುಲಭ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ವಿವಿಧ ಉಳಿತಾಯ ಮತ್ತು ಹೂಡಿಕೆ ಯೋಜನೆಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಕಲಬುರಗಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿನ ಎಲ್ಲಾ ಅಂಚೆ ಕಚೇರಿಗಳಲ್ಲಿ ಅಂಚೆ ಉಳಿತಾಯ ಬ್ಯಾಂಕ್ (PಔSಃ) ಹಾಗೂ ಭಾರತೀಯ ಅಂಚೆ ಪಾವತಿ ಬ್ಯಾಂಕ್ (IPPಃ) ಮೂಲಕ ಸಾರ್ವಜನಿಕರಿಗೆ ಖಾತೆ ತೆರೆಯುವಿಕೆ, ಠೇವಣಿ, ಹಣ ತೆಗೆಯುವುದು ಹಾಗೂ ಇತರೆ ಬ್ಯಾಂಕಿಂಗ್ ವ್ಯವಹಾರಗಳನ್ನು ಸುಗಮವಾಗಿ ಮಾಡಿಕೊಳ್ಳುವ ವ್ಯವಸ್ಥೆ ಲಭ್ಯವಿರುತ್ತವೆ.

ಲಭ್ಯವಿರುವ ಪ್ರಮುಖ ಯೋಜನೆಗಳ ವಿವರ: ಉಳಿತಾಯ ಖಾತೆ (Sಃ), ಆವರ್ತ ಠೇವಣಿ (ಖಆ), ಕಾಲಾವಧಿ ಠೇವಣಿ (ಖಿಆ), ಸಾರ್ವಜನಿಕ ಭವಿಷ್ಯ ನಿಧಿ (PPಈ), ಹಿರಿಯ ನಾಗರಿಕ ಉಳಿತಾಯ ಯೋಜನೆ (SಅSS) ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ (SSಙ) ಯೋಜನೆಗಳು ಲಭ್ಯವಿದ್ದು, ಎಲ್ಲಾ ಅರ್ಹ ಪಿ.ಓ.ಎಸ್.ಬಿ. (PಔSಃ) ವ್ಯವಹಾರಗಳಲ್ಲಿ ಇ-ಕೆವೈಸಿ (eಏಙಅ) ಸೌಲಭ್ಯವನ್ನು ಕಡ್ಡಾಯವಾಗಿ ಬಳಸಲಾಗುತ್ತಿದೆ. ಇದರಿಂದ ತಮ್ಮ ವ್ಯವಹಾರಗಳು ಹೆಚ್ಚು ಸುರಕ್ಷಿತ, ಪಾರದರ್ಶಕ ಹಾಗೂ ವೇಗವಾಗಿ ಪೂರ್ಣಗೊಳ್ಳುತ್ತವೆ.

ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳಾದ ಎ.ಟಿ.ಎಮ್. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ (ಂಖಿಒ, ಓeಣ ಃಚಿಟಿಞiಟಿg, ಒobiಟe ಃಚಿಟಿಞiಟಿg) ಸೇವೆಗಳು ಕೂಡ ಲಭ್ಯವಿದ್ದು, ಗ್ರಾಹಕರು ಸುಲಭವಾಗಿ ಹಣ ವರ್ಗಾವಣೆ ಮತ್ತು ವ್ಯವಹಾರಗಳನ್ನು ಮಾಡಿಕೊಳ್ಳಬಹುದಾಗಿದೆ.

ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಕಡಿಮೆ ಪ್ರೀಮಿಯಂನಲ್ಲಿ ಪಿ.ಎಂ.ಜೆ.ಜೆ.ಬಿ.ವೈ. (Pಒಎಎಃಙ) ಮತ್ತು ಪಿ.ಎಂ.ಎಸ್.ಬಿ.ವೈ. (PಒSಃಙ) ಯೋಜನೆಗಳಲ್ಲಿ ನೋಂದಣಿ ಮಾಡಿಕೊಂಡು ಅನಿರೀಕ್ಷಿತ ಸಂದರ್ಭದಲ್ಲಿ ತಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಬಹುದು.

ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಉಳಿತಾಯ ಸಂಕಲ್ಪ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಅವರು ತಿಳಿಸಿದ್ದಾರೆ.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading