1
1
ಬೀದರ, ಫೆಬ್ರವರಿ.12 :- ಎಲ್ಲ ಅಂಚೆ ಕಛೇರಿಗಳಲ್ಲಿ ಕಚೇರಿ ಸಮಯ ಮುಕ್ತಾಯವಾಗುವ ಕನಿಷ್ಠ 30 ನಿಮಿಷಗಳ ಮೊದಲು ಸ್ಪೀಡ್ ಪೋಸ್ಟ್ ಹಾಗೂ ಪಾರ್ಸಲ್ ಬುಕ್ಕಿಂಗ್ ಮಾಡಬಹುದಾದ ಸೌಲಭ್ಯವನ್ನು ಅಂಚೆ ಇಲಾಖೆ ಒದಗಿಸಿದೆ. ಅಲ್ಲದೆ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಹಕ ಸ್ವಯಂ ಸೇವಾ ಪೋರ್ಟಲ್ ಮೂಲಕವೂ ಪಾರ್ಸಲ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಗ್ರಾಹಕರು https://app.indiapost.gov.in/
ಈ ವ್ಯವಸ್ಥೆಯಿಂದ ಅಂಚೆ ಕಚೇರಿಗಳಲ್ಲಿ ಸಮಯ ಉಳಿತಾಯವಾಗುವುದೊಂದಿಗೆ ಸೇವೆಗಳ ಪಾರದರ್ಶಕತೆ ಹಾಗೂ ದಕ್ಷತೆ ಹೆಚ್ಚಲಿದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ಸಾರ್ವಜನಿಕರು ಸುಲಭವಾಗಿ ಮತ್ತು ವೇಗವಾಗಿ ಅಂಚೆ ಸೇವೆಗಳನ್ನು ಪಡೆಯಲು ಇದು ಸಹಕಾರಿಯಾಗಲಿದೆ. ಸಾರ್ವಜನಿಕರು ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಬೀದರ ವಿಭಾಗದ ಅಂಚೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.