Popular Posts

ಕಸಾಪದಿಂದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

ಬೀದರ:-ಚಿಟಗುಪ್ಪಾ ಪಟ್ಟಣದ ಜೈ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ಹಾಗೂ ತಾಳ್ಮಡಗಿ ಗ್ರಾಮದ ಮಾಣಿಕ್ ನೇಳಗೆ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ ಅವರ ನೇತೃತ್ವದಲ್ಲಿ ಬೀದರ್ ಪಟ್ಟಣದಲ್ಲಿರುವ ಹಿರಿಯ ಸಾಹಿತಿ ಮಾಣಿಕ್ ನೇಳಗೆ ಅವರ ಸ್ವಗೃಹಕ್ಕೆ ತೆರಳಿ ಆಹ್ವಾನ ಪತ್ರಿಕೆ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ ಅವರು, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಣಿಕ್ ನೇಳಗೆ ಅವರು ಸಲ್ಲಿಸಿರುವ ಸೇವೆ ಶ್ಲಾಘನೀಯವಾದದ್ದು ಎಂದು ಹೇಳಿದರು. ಅವರ ಅಧ್ಯಕ್ಷತೆಯಲ್ಲಿ ನಡೆಯುವ ತಾಲೂಕು ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಆಹ್ವಾನ ಸ್ವೀಕರಿಸಿದ ಮಾಣಿಕ್ ನೇಳಗೆ ಅವರು ಮಾತನಾಡಿ, ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳು ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಸಾಹಿತ್ಯಾಸಕ್ತರು ಹಾಗೂ ಜನಸಾಮಾನ್ಯರನ್ನು ಒಂದೇ ವೇದಿಕೆಗೆ ತರಲು ಸಮ್ಮೇಳನ ಸಹಾಯಕವಾಗಬೇಕು ಎಂದು ಅಭಿಪ್ರಾಯಪಟ್ಟರು. ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅನೀಲ ಕುಮಾರ್ ಸಿಂಧೆ, ಮಹಾರುದ್ರಪ್ಪ ಅಣದುರ, ಬಾಬುರಾವ ದಾನಿ, ಜಗನಾಥ ಗಾದಾ, ಕೀರಣ ಹಮ್ಮಿಲಪೂರಕರ, ಮನೋಜ ಟೀಳೆಕಾರ, ಸಿದ್ದಾರೂಡ ಭಾಲ್ಕೆ, ಅಶೋಕ ದಿಗಡೆ, ಮನೋಹರ ಕಾಳೆ, ಹಾವಶೆಟ್ಟಿ ಪಾಟೀಲ, ಅಶೋಕ ಸುರೆ, ದಿನಕರ ಕುಲಕರ್ಣಿ, ದತ್ತು ಪಂಚಾಳ, ಪಂಢರಿ ನೇಳ್ಗಿ, ರವಿ ಮಚಕುರಿ ಸೇರಿದಂತೆ ಅನೇಕ ಸಾಹಿತಿಗಳು, ಮುಖಂಡರು ಹಾಗೂ ಕನ್ನಡ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading