Popular Posts

ಕೆ.ಜಿ.ಐ.ಡಿ. ವಿಮಾ ಸಂಸ್ಥೆಯ ವಿರುದ್ಧ ದಿ: 05.02.2026 ರಂದು ನೀಡಿದ ಮಹತ್ವದ ತೀರ್ಪು

ಬೀದರ ಜಿಲ್ಲೆಯ ಗ್ರಾಹಕ ಆಯೋಗವು, ಸರ್ಕಾರಿ ನೌಕರರ ವಿಮಾ ಯೋಜನೆಗೆ ಸಂಬಂಧಿಸಿದಂತೆ ದೂರುದಾರರ ಪರವಾಗಿ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿಮಾ ಯೋಜನೆ (ಏಉIಆ) ಸಂಬಂಧಿತ ಮಹತ್ವದ ಗ್ರಾಹಕ ದೂರಿನಲ್ಲಿ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಕರ್ನಾಟಕ ರಾಜ್ಯ ಸರ್ಕಾರ ಶಾಸನಬದ್ಧ ವಿಮಾ ಇಲಾಖೆಯ ವಿರುದ್ಧ ಸ್ಪಷ್ಟ ಮತ್ತು ಕಾರಣಬದ್ಧ ತೀರ್ಪು ನೀಡಿದೆ. ಈ ತೀರ್ಪು ಆಡಳಿತಾತ್ಮಕ ಲೋಪ, ತಾಂತ್ರಿಕ ದೋಷ ಮತ್ತು ಪಾಲಿಸಿದಾರರ ಹಕ್ಕುಗಳ ರಕ್ಷಣೆಯ ವಿಷಯದಲ್ಲಿ ಮಹತ್ವದ ಮಾರ್ಗದರ್ಶನ ನೀಡುತ್ತದೆ.
ದೂರುದಾರರ ವಿವರಗಳು: ಶ್ರೀಮತಿ ಸಿದ್ದಮ್ಮಾ ಗಂಡ ಓಂಪ್ರಕಾಶ ಹಂಗರಗಿ ಇವರು ಸರಕಾರಿ ಸೇವೆಯಲ್ಲಿದ್ದು, ಕರ್ನಾಟಕ ಸರ್ಕಾರದ ಕೆ.ಜಿ.ಐ.ಡಿಯ ಕಡ್ಡಾಯ ವಿಮಾ ಯೋಜನೆಯ ಸದಸ್ಯರಾಗಿದ್ದಾರೆ. ಇವರು ತಮ್ಮ ಕೆ.ಜಿ.ಐ.ಡಿ ಸಂಖ್ಯೆಯಡಿ 07 ಪಾಲಿಸಿಗಳನ್ನು ಹೊಂದಿದ್ದು, ಸದರಿ 07 ಪಾಲಸಿಗಳ ಮೇಲೆ, 2008, 2012 ಹಾಗೂ 2015 ರಲ್ಲಿ ಒಟ್ಟು 3 ಸಾಲಗಳನ್ನು ತೆಗೆದುಕೊಂಡಿದ್ದಾರೆ. ದಿ: 01-02-2025 ರಂದು 55 ವರ್ಷ ವಯಸ್ಸು ಪೂರೈಸಿ ತಮ್ಮ 07 ವಿಮಾ ಪಾಲಿಸಿಗಳ ಮುಕ್ತಾಯದ ನಂತರ ಪಾವತಿಯಾಗಬೇಕಾದ ಒಟ್ಟು ರೂ.10,99,260/- ಮೊತ್ತದಿಂದ ರೂ.21,016/- ಕೆ.ಜಿ.ಐ.ಡಿ. ಬೀದರ್ ಕಾರ್ಯಾಲಯದವರು ಬಾಕಿ ಸಾಲದ ಕಂತುಗಳು ಬಾಕಿ ವಿಮಾ ಹಣ ಕಂತುಗಳು ಮತ್ತು ಸದರಿ ಕಂತುಗಳ ಮೇಲೆ ಬಾಕಿ ಇದ್ದ ದಿನಗಳಿಂದ ಬಡ್ಡಿ ರೂಪದಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೆ ಮುಕ್ತಾಯ (ಪಲಪ್ರದ) ಮೊತ್ತದ ಪಾವತಿಯಲ್ಲಿ ತಡೆಹಿಡಿದಿತ್ತು, ದೂರುದಾರರು ಕೆ.ಜಿ.ಐ.ಡಿ ಯವರ ಸದರಿ ನಿರ್ಧಾರದ ಬಗ್ಗೆ ಪತ್ರ ಮೂಲಕ ಕಟಾವಣೆಯ ಬಗ್ಗೆ ವಿವರಣೆ ಕೇಳಲಾಗಿ, ಅವರು ಅಸಮರ್ಪಕ ಉತ್ತರ ನೀಡಲಾಗಿ ಮನನೊಂದು ಬೀದರ್ ಗ್ರಾಹಕ ಆಯೋಗದಲ್ಲಿ ದೂರು ದಾಖಲಿಸಿದರು. ಇದಕ್ಕೆ ಕೆ.ಜಿ.ಐ.ಡಿ (ಏಉIಆ) ವಿಮಾ ಸಂಸ್ಥೆಯು ಆಡಳಿತಾತ್ಮಕ ಲೋಪ, ಮತ್ತು ‘ಗಣಕೀಕೃತ ವ್ಯವಸ್ಥೆಯ ತಾಂತ್ರಿಕ ದೋಷ ನೆಪವೊಡ್ಡಿ ₹21,016/- ಮೊತ್ತವನ್ನು ಕಡಿತಗೊಳಿಸಿದ್ದರು ಮತ್ತು ಕ್ಲೇಮ್ ಸೆಟಲ್ ಮೆಂಟ್‌ನಲ್ಲಿ ವಿಳಂಬ ಮಾಡಿದ್ದರು ದೂರುದಾರರು ತಮ್ಮ ವಿಮಾ ಪಾಲಿಸಿಗಳ ಮುಕ್ತಾಯದ ನಂತರ ಬರಬೇಕಾದ ಪೂರ್ಣ ಮೊತ್ತಕ್ಕಾಗಿ ಮತ್ತು ಅರ್ಜಿ ಸಲ್ಲಿಸಿದ್ದರು.
ಕೆ.ಜಿ.ಐ.ಡಿ (ಏಉIಆ) ವಿಮಾ ಸಂಸ್ಥೆಯು ವಿಮಾ ಸೇವೆಗಳಲ್ಲಿನ ನ್ಯೂನತೆ ಮತ್ತು ಆಡಳಿತಾತ್ಮಕ ಲೋಪಗಳ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಕಲಂ 35 ರ ಅಡಿಯಲ್ಲಿ ದಾಖಲಾದ ದೂರಿನ ವಿಚಾರಣೆ ನಡೆಸಿ, ಗೌರವಾನ್ವಿತ ಆಯೋಗವು ಕೆ.ಜಿ.ಐ.ಡಿ (ಏಉIಆ) ಸಂಸ್ಥೆಯ ವಿರುದ್ಧ ಈ ಕೆಳಗಿನಂತೆ ವಿವರವಾದ ತೀರ್ಪು ನೀಡಿದೆ ಈ ಸಂದರ್ಭದಲ್ಲಿ, ಕೆ.ಜಿ.ಐ.ಡಿ ಸ್ನಾಯತ್ತ ಶಾಸನಬದ್ಧ ಸರ್ಕಾರಿ ವಿಮಾ ಇಲಾಖೆಯಾಗಿದ್ದು, ಕರ್ನಾಟಕ ಸರ್ಕಾರವು ಇದನ್ನು ನಡೆಸುತ್ತಿದೆ. ಇದನ್ನು ವಿಮಾ ಕಾಯ್ದೆ 1938. ಐ.ಆರ್.ಡಿ.ಎ.ಐ ಕಾಯ್ದೆ 1999 ರ ನಿಬಂಧನೆಗಳು ಮತ್ತು ಪಾಲಿಸಿದಾರರ ಹಿತಾಸಕ್ತಿ ನಿಯಂತ್ರಣ -2017/2024 ರ ಮೂಲಕ ನಿಯಂತ್ರಿಸಲಾಗುತ್ತದೆ ಮತ್ತು ಆದ್ದರಿಂದ ವಿಮಾ ಕಂಪನಿಗಳ ಸುಗಮ ಕಾರ್ಯನಿರ್ವಹಣೆಗಾಗಿ ವಿಧಿಸಲಾಗುತ್ತಿರುವ ಎಲ್ಲಾ ನಿಯಮಗಳು ಪ್ರಸ್ತುತ ಕೆ.ಜಿ.ಐ.ಡಿ (ಏಉIಆ) ಶಾಸನಬದ್ಧ ವಿಮಾ ಸಂಸ್ಥೆಗೆಅನ್ವಯಿಸುತ್ತವೆ. ಇದು ಶಾಸನಬದ್ಧ ಸಂಸ್ಥೆಯ ಬಣ್ಣದ ಅಡಿಯಲ್ಲಿ ವಿನಾಯಿತಿ ಪಡೆಯಲು ಸಾಧ್ಯವಿಲ್ಲ. ಕೆ.ಜಿ.ಐ.ಡಿ ಒಂದು ಶಾಸನಬದ್ಧ ಸರ್ಕಾರಿ ವಿಮಾ ಇಲಾಖೆ ಆಗಿದ್ದರೂ, ಅದು Iಟಿsuಡಿಚಿಟಿಛಿe ಂಛಿಣ, 1938 Iಟಿsuಡಿಚಿಟಿಛಿe ಖeguಟಚಿಣoಡಿಥಿ ಚಿಟಿಜ ಆeveಟoಠಿmeಟಿಣ ಂuಣhoಡಿiಣಥಿ oಜಿ Iಟಿಜiಚಿ (IಖಆಂI) ನಿಯಮಾವಳಿಗಳಿಗೆ ಒಳಪಟ್ಟಿದೆ. ಆದ್ದರಿಂದ, ಗಣಕೀಕೃತ ವ್ಯವಸ್ಥೆಯ ತಾಂತ್ರಿಕ ದೋಷ” ಅಥವಾ ‘ಆಡಳಿತಾತ್ಮಕ ಒತ್ತಡ’ ಎಂಬ ಕಾರಣಗಳ ಮೇಲೆ ಪಾಲಿಸಿದಾರರ ಹಕ್ಕಿನ ಮೊತ್ತವನ್ನು ತಡೆಹಿಡಿಯುವುದು ಕಾನೂನುಬಾಹಿರ. ವಿಮಾದಾರರಿಗೆ ಮುಂಚಿತವಾಗಿ ನೋಟಿಸ್ ನೀಡದೆ ಯಾವುದೇ ಕಡಿತ ವಿಳಂಬ ಮಾಡುವುದು ಐ.ಆರ್ .ಡಿ.ಎ.ಐ (IಖಆಂI) ನಿಯಮಗಳ ನೇರ ಉಲ್ಲಂಘನೆಯಾಗಿದ್ದು, ಇದು ‘ಸೇವಾ ನ್ಯೂನತೆ’ ಮತ್ತು “ನಿರ್ಲಕ್ಷ್ಯ’ ಎಂದು ಪರಿಗಣಿಸಲಾಗಿದೆ ಎಂದು ಆಯೋಗವು ಸ್ಪಷ್ಟಪಡಿಸಿದೆ. ತಾಂತ್ರಿಕ ದೋಷವನ್ನು ಸಾಬೀತುಪಡಿಸುವ ಹೊರೆ ಕೆ.ಜಿ.ಐ.ಡಿ (ಏಉIಆ)ಮೇಲಿದೆ. ಅವರು ತೋರಿಸಬೇಕಾಗಿದ್ದದ್ದು: ನಿರ್ದಿಷ್ಟ ತಾಂತ್ರಿಕ ವೈಫಲ್ಯ ಏನು? ಅದರ ಪರಿಣಾಮವಾಗಿ ಪ್ರೀಮಿಯಂ ಕಡಿತ ಸಾಧ್ಯವಾಗಲಿಲ್ಲವೇ? ಪರ್ಯಾಯ ವಿಧಾನಗಳಿಂದ ಸಂಗ್ರಹಿಸಲು ಯತ್ನಿಸಲಾಯಿತೇ? ಪಾಲಿಸಿದಾರರಿಗೆ ಪೂರ್ವ ಸೂಚನೆ ನೀಡಲಾಯಿತೇ? ಸದರಿ ತಾಂತ್ರಿಕ ದೋಷಗಳಿಗೆ ಪೂರಕವಾಗಿ ಕೆ.ಜಿ.ಐ.ಡಿ ಯವರು ಐಟಿ ನಿಲುಗಡೆ ವರದಿ ಸಲ್ಲಿಸಿಲ್ಲ. ಲೆಡ್ಡರ್ ಅಥವಾ ಸಂಬಳ ಕಡಿತ ದಾಖಲೆಗಳನ್ನು ಸಲ್ಲಿಸಿಲ್ಲ ಹಾಗೂ ಆಡಳಿತ ಮಟ್ಟದ ಸಮನ್ವಯ ದಾಖಲೆಗಳನ್ನು ಕೂಡಾ ಹಾಜರುಪಡಿಸಿಲ್ಲ ಎಂದು ಅಭಿಪ್ರಾಯ ಪಟ್ಟರು ದಾಖಲೆಗಳ ಪ್ರಕಾರ 2008, 2012 ಮತ್ತು 2015ರಲ್ಲಿ ದೂರುದಾರರಿಗೆ ಸಾಲ ಮಂಜೂರು ಮಾಡುವಾಗ ಹೇಳಲಾದ ಬಾಕಿಗಳನ್ನು ಏಕೆ ಕಡಿತಗೊಳಿಸಲಿಲ್ಲ? 2015ರಲ್ಲಿ ಮೂರನೇ ಸಾಲ ಮಂಜೂರು ಮಾಡುವಾಗ ಹಿಂದಿನ ಎಲ್ಲಾ ಬಾಕಿಗಳನ್ನು ಮುಚ್ಚದೆ ಹೇಗೆ ಮುಂದುವರಿಸಿದರು? ಬಾಕಿ ತಿಂಗಳು/ವರ್ಷ ವಿವರವನ್ನು ಕೆಜಿಐಡಿ (ಏಉIಆ) ಸಾಬೀತುಪಡಿಸಲಿಲ್ಲ. ಇದರಿಂದ ಕೆಜಿಐಡಿ (ಏಉIಆ) ವಾದ ಅಸಂಗತವಾಗಿದೆ ಎಂದು ಆಯೋಗ ನಿರ್ಧರಿಸಿದೆ. ಈ ಎಲ್ಲವೂ ದಾಖಲೆಗಳಿಲ್ಲದೆ ಲೋಪ ಮತ್ತು ತಾಂತ್ರಿಕ ದೋಷದ ನೆಪ ಕಾನೂನಾತ್ಮಕವಾಗಿ ಮಾನ್ಯ ಮಾಡಲಾಗುವದಿಲ್ಲ ಎಂದು ಆಯೋಗ ನಿರ್ಧರಿಸಿದೆ.
ವಿಚಾರಣೆ ನಡೆಸಿದ ಆಯೋಗವು ಕೆಜಿಐಡಿ ಸಂಸ್ಥೆಗೆ ಕಟ್ಟುನಿಟ್ಟಾದ ನಿರ್ದೇಶನಗಳನ್ನು ನೀಡಿದೆ: ವಿಳಂಬಿತ ಮುಕ್ತಾಯ ಮೊತ್ತದ ಮೇಲೆ ಕೆಜಿಐಡಿ ಮಾನದಂಡಕ್ಕಿಂತ 2% ಹೆಚ್ಚುವರಿ ಬಡ್ಡಿ. ಕಡಿತಗೊಂಡ ರೂ.21,016/- ಮೊತ್ತವನ್ನು ಬಡ್ಡಿಯೊಂದಿಗೆ, ಪಾವತಿಸಲು, ಸಂಚಿತ ಬೋನಸ್ ಮತ್ತು ಅದಕ್ಕೆ ಬಡ್ಡಿ ಪಾವತಿಸಲು ಮಾನಸಿಕ ಕಿರುಕುಳಕ್ಕಾಗಿ ರೂ.10,000/-ಪರಿಹಾರ ಮತ್ತು ರೂ.5,000/- ಪ್ರಕರಣ ವೆಚ್ಚ ಪಾವತಿಸಲು. ಆಯೋಗವು IಖಆಂI ಮಾಸ್ಟರ್ ಸುತ್ತೋಲೆ (05-09-2024) ಮತ್ತು ಪಾಲಿಸಿದಾರರ ಹಿತಾಸಕ್ತಿ ರಕ್ಷಣಾ ನಿಯಮಗಳು 2017/2024/2025 ಅನ್ನು ಉಲ್ಲೇಖಿಸಿ, ಕ್ಲೇಮಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು. ವಿಳಂಬವಾದರೆ ಬ್ಯಾಂಕ್ ದರಕ್ಕಿಂತ 2% ಹೆಚ್ಚುವರಿ ಬಡ್ಡಿ ಪಾವತಿಸಬೇಕು. ಬಾಕಿ ಪ್ರೀಮಿಯಂ ಕುರಿತು ಸ್ಪಷ್ಟ ಪೂರ್ವ ಸೂಚನೆ ನೀಡಬೇಕು, ಕೆಜಿಐಡಿ ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗ ತೀರ್ಮಾನಿಸಿದೆ. ಅದಲ್ಲದೇ ಪ್ರಮುಖವಾಗಿ ಗ್ರಾಹಕ ಆಯೋಗವು ಕೆ.ಜಿ.ಐ.ಡಿ ಯವರು ಸಮಯಕ್ಕೆ ಸರಿಯಾಗಿ ಆಡಳಿತ ಲೋಪ ಮತ್ತು ಗಣಕ ಯಂತ್ರ ತಾಂತ್ರಿಕ ದೋಷ ಕಾರಣವನ್ನು ಕಟಾವಣೆಗೆ ಕಾರಣವಾಗಿ ತೋರಿಸಿದ ಮೇಲೆ ಸದರಿ ಬಾಕಿ ಸಾಲ ಅಥವಾ ವಿಮಾ ಕಂತುಗಳ ಮೇಲೆ ಕಾನೂನಿನ ಅಡಿಯಲ್ಲಿ ಬಡ್ಡಿ ವಿಧಿಸುವಂತಿಲ್ಲ. ಎಂದು ಅಭಿಪ್ರಾಯ ಪಟ್ಟಿದೆ. ಪ್ರಭಾರಿ ಅಧ್ಯಕ್ಷರಾದ ಶ್ರೀ ತ್ರಿಯಂಬಕೇಶ್ವರ ಹಾಗೂ ಮಹಿಳಾ ಸದಸ್ಯರಾದ ಕುಮಾರಿ ಕವಿತಾ ಹುಶಾರೆ ಇವರು ದೂರಿನ ವಿಚಾರಣೆ ನಡೆಸಿ, ಗೌರವಾನ್ವಿತ ಆಯೋಗವು ಕೆ.ಜಿ.ಐ.ಡಿ (ಏಉIಆ) ಸಂಸ್ಥೆಯ ವಿರುದ್ಧ ತೀರ್ಪುನ್ನು ದಿ: 05-02-2026 ರಂದು ನೀಡಿದೆ.
ಈ ತೀರ್ಪು ಆಡಳಿತಾತ್ಮಕ ಲೋಪ, ತಾಂತ್ರಿಕ ದೋಷ ಮತ್ತು ಪಾಲಿಸಿದಾರರ ಹಕ್ಕುಗಳು ರಕ್ಷಣೆಯ ವಿಷಯದಲ್ಲಿ ಮಹತ್ವದ ಮಾರ್ಗದರ್ಶನ ನೀಡುತ್ತದೆ.

Leave a Reply

Your email address will not be published. Required fields are marked *

error: Content is protected !!