1
1

ಬೀದರ್:-ನಗರದ ಬರೀದ ಶಾಹಿ ಹೋಟಲ್‌ನಲ್ಲಿ ಇಂದು ಬೆಳಿಗ್ಗೆ ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ರಾಜ್ಯಾಧ್ಯಕ್ಷರು ಹಾಗೂ ಖ್ಯಾತ ವಕೀಲರಾದ ನಾರಾಯಣ ಸ್ವಾಮಿ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಬೀದರ ಜಿಲ್ಲಾಧ್ಯಕ್ಷ ಸಿ. ಆನಂದ ಘಂಟೆ ಮಾತನಾಡಿ, ನಾರಾಯಣ ಸ್ವಾಮಿ ಅವರ ಕಾನೂನು ಸೇವೆ ಅತ್ಯಂತ ಅಮೂಲ್ಯವಾಗಿದ್ದು, ಅವರಿಗೆ ದೇವರು ಆಯುಷ್ಯ ಹಾಗೂ ಆರೋಗ್ಯ ನೀಡಲಿ ಎಂದು ಹಾರೈಸಿದರು. ಮುಂಬರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಅವರು ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿ ಎಂದು ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಡಿ.ಕೆ. ಸಂಗಮೇಶ, ಪ್ರಧಾನ ಕಾರ್ಯದರ್ಶಿ ಅರವಿಂದ ಕಾರಬಾರಿ, ಉಪಾಧ್ಯಕ್ಷ ಪುನೀತ ಪಾಟೀಲ್, ಭಾಲ್ಕಿ ತಾಲೂಕು ಅಧ್ಯಕ್ಷ ಗೋರಖಾನಾಥ ಶ್ರೀಮಾಳೆ, ಬೀದರ ತಾಲೂಕು ಅಧ್ಯಕ್ಷ ರವಿ ಚಿನ್ನಪನೋರ ಸೇರಿದಂತೆ ವಕೀಲರಾದ ಅಶೋಕ ಗೋಖಲೆ, ಶ್ರೀನಿವಾಸ ಖರಾಟೆ, ಸುನೀಲ ಸೋನೆ, ಪದ್ಮಾನಂದ ಟಿ., ಶರಣಪ್ಪ ಹಾಗೂ ಇತರರು ಉಪಸ್ಥಿತರಿದ್ದರು.