Popular Posts

ಜವಳಿ ಪಾರ್ಕ್‍ನ 1,000 ಎಕರೆ ಜಾಗದಲ್ಲಿ ರೈತರು ಯಾವುದೇ ಕೃಷಿ ಪೂರ್ವ ಚಟುವಟಿಕೆ ಕೈಗೊಳ್ಳಬಾರದೆಂದು ಸೂಚನೆ

ಕಲಬುರಗಿ,ಫೆ.18.(ಕ.ವಾ.)-ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ತಾಲೂಕಿನ ಫರಹತಾಬಾದ ಹೋಬಳಿಯ ನದಿಸಿನ್ನೂರ ಮತ್ತು ಹೊನ್ನಕಿರಣಗಿ ಗ್ರಾಮಗಳ ವ್ಯಾಪ್ತಿಗೆ ಸೇರಿದ ವಿವಿಧ ಸರ್ವೆ ನಂಬರ್‍ಗಳ 1000 ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್‍ನ್ನು ಸ್ಥಾಪಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಸದರಿ 1,000 ಎಕರೆ ಜಮೀನನ್ನು ಪಿಎಂ-ಮಿತ್ರಾ ಮೆಗಾ ಜವಳಿ ಪಾರ್ಕ್ ಕರ್ನಾಟಕ ಲಿ., ಈ ಎಸ್‍ಪಿವಿ ಗೆ ಹಸ್ತಾಂತರಿಸಲಾಗಿದೆ.

ಈ ಮೆಗಾ ಜವಳಿ ಪಾರ್ಕ್‍ಗೆ ರಸ್ತೆ, ವಿದ್ಯುತ್, ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿವಿಧ ಅನುಷ್ಠಾನ ಇಲಾಖೆಗಳಿಂದ ಕಾಮಗಾರಿಗಳ ಪೂರ್ವ ಚಟುವಟಿಕೆ ಪ್ರಾರಂಭಿಸಲಾಗಿದ್ದು, ಆದ್ದರಿಂದ ನದಿಸಿನ್ನೂರು ಮತ್ತು ಹೊನ್ನಕಿರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿನ ಪಿಎಂ-ಮಿತ್ರ ಮೆಗಾ ಜವಳಿ ಪಾರ್ಕ್‍ನ 1,000 ಎಕರೆ ಜಾಗದಲ್ಲಿ ರೈತರು ಯಾವುದೇ ಕೃಷಿ ಪೂರ್ವ/ಬಿತ್ತನೆ/ಕುಂಟಿ/ನೇಗಿಲು ಚಟುವಟಿಕೆ ಕೈಗೊಳ್ಳಬಾರದೆಂದು ಕಲಬುರಗಿ ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!