Popular Posts

ಜಾಗೃತಿ ಕಾರ್ಯಕ್ರಮಗಳು ಸಭಾಂಗಣಕ್ಕೆ ಸೀಮಿತವಾಗಬಾರದು: ಮಹಿಳಾ, ಮಕ್ಕಳ ಕಲ್ಯಾಣ ಯೋಜನೆಗಳು ಕಾಗದಕ್ಕμÉ್ಟೀ ಸೀಮಿತವಾಗದಿರಲಿ – ಜಿಲ್ಲಾಧಿಕಾರಿ ಇಕ್ರಂ ಶರೀಫ್

ಕಲಬುರಗಿ,ಆಗಸ್ಟ್.13 (ಕಕ ವಾರ್ತೆ) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು ಕೇವಲ ಕಾಗದಕ್ಕμÉ್ಟೀ ಸೀಮಿತವಾಗದೆ ಅರ್ಧ ಫಲಾನುಭವಿಗಳಿಗೆ ನೇರವಾಗಿ ತಲುಪಬೇಕು. ಜಾಗೃತಿ ಕಾರ್ಯಕ್ರಮಗಳು ಸಭಾಂಗಣಕ್ಕೆ ಸೀಮಿತವಾಗಬಾರದು. ಇನ್ಮುಂದೆ ಆಯೋಜಿಸುವ ಪ್ರತಿಯೊಂದು ಜಾಗೃತಿ ಕಾರ್ಯಕ್ರಮದಲ್ಲೂ ಕನಿಷ್ಠ 100ಕ್ಕೂ ಹೆಚ್ಚು ಜನರು ಕಡ್ಡಾಯವಾಗಿ ಭಾಗವಹಿಸುವಂತೆ ಅಧಿಕಾರಿಗಳು ವೈಯಕ್ತಿಕ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಹೇಳಿದರು.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಹಾಗೂ ಶಾಲಾ-ಕಾಲೇಜು ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ಕೇವಲ ಕಾಗದದ ವರದಿ ಪ್ರದರ್ಶಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಪ್ರತಿಯೊಂದು ಸಭೆಯಲ್ಲೂ ಕನಿಷ್ಠ 100 ಕ್ಕೂ ಹೆಚ್ಚು ಸಾರ್ವಜನಿಕರು, ವಿದ್ಯಾರ್ಥಿಗಳು, ಪೆÇೀಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಡ್ಡಾಯವಾಗಿ ಭಾಗವಹಿಸುವುದನ್ನು ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಯ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಖಾತರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರ ಮಟ್ಟಕ್ಕೆ ತೆರಳಿ ಕೆಲಸ ಮಾಡುವ ಅಧಿಕಾರಿಗಳು ತಮ್ಮ ಕಾರ್ಯಕ್ರಮಗಳ ನೈಜತೆಯನ್ನು ಸಾಬೀತುಪಡಿಸಲು ಜಿಪಿಎಸ್ ಆಧಾರಿತ ಸಮಯ ಮತ್ತು ದಿನಾಂಕ ನಮೂದಾಗಿರುವ ಛಾಯಾಚಿತ್ರಗಳೊಂದಿಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಜತೆಗೆ ಅಧಿಕಾರಿಗಳ ದೈನಂದಿನ ಹಾಜರಾತಿಯನ್ನು ‘ಕರ್ತವ್ಯ’ ಆಪ್‍ನಲ್ಲಿ ನಿಖರವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಜಿಲ್ಲೆಯ ಸಾಂತ್ವನ ಕೇಂದ್ರಗಳು ಹಾಗೂ ‘ಶಕ್ತಿ ಸದನ’ಗಳ (ಸ್ವಾಧಾರ್ ಗೃಹ) ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಮುಂದಿನ 15 ದಿನಗಳ ಒಳಗಾಗಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಸಿಸಿಟಿವಿ ಲೈವ್‍ಸ್ಟ್ರೀಮಿಂಗ್ ಮೇಲಾಧಿಕಾರಿಗಳ ಮೊಬೈಲ್‍ಗೆ ಸಂಪರ್ಕ ಕಲ್ಪಿಸದ ಕೇಂದ್ರಗಳಿಗೆ ಅನುದಾನ ತಡೆಹಿಡಿಯಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ, ಪ್ರಸ್ತುತ ಖಾಸಗಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ‘ಸ್ವಧಾರ ಗೃಹ’ವನ್ನು ತಕ್ಷಣವೇ ಸೂಕ್ತ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ಆದೇಶಿಸಲಾಯಿತು. ಇದರಿಂದ ಸರ್ಕಾರಿ ಹಣ ಉಳಿತಾಯವಾಗುವುದರ ಜತೆಗೆ ನಿವಾಸಿಗಳಿಗೆ ಉತ್ತಮ ಹಾಗೂ ಸುರಕ್ಷಿತ ವಾತಾವರಣ ಸಿಗಲಿದೆ.
ಇದಲ್ಲದೆ, ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಶಾರೀರಿಕ ಬೆಳವಣಿಗೆ ಮತ್ತು ಅಪೌಷ್ಟಿಕತೆ ಅಳೆಯಲು ಬಳಸುವ ತೂಕದ ಯಂತ್ರಗಳು, ‘ಸ್ಟೇಡಿಯೋಮೀಟರ್’ ಹಾಗೂ ‘ಇನ್ಫಾಂಟೋಮೀಟರ್’ ಉಪಕರಣಗಳ ಸ್ಥಿತಿಗತಿಯನ್ನು ತಕ್ಷಣವೇ ಪರಿಶೀಲಿಸಿ, ಕೆಟ್ಟುಹೋಗಿರುವ ಉಪಕರಣಗಳ ಪಟ್ಟಿ ತಯಾರಿಸಿ ಹೊಸ ಉಪಕರಣಗಳ ಖರೀದಿಗಾಗಿ ವರದಿ ಸಲ್ಲಿಸಲು ಸೂಚಿಸಿದರು.
ಮಹಿಳಾ ಸಹಾಯವಾಣಿ 181 ಹಾಗೂ ಮಕ್ಕಳ ಸಹಾಯವಾಣಿ 1098 ಕುರಿತು ಗ್ರಾಮೀಣ ಭಾಗದಲ್ಲಿ ವ್ಯಾಪಕ ಅರಿವು ಮೂಡಿಸಲು ತಿಳಿಸಿದ ಅವರು, ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಪೌಷ್ಟಿಕಾಂಶ ಹಾಗೂ ಆರೋಗ್ಯ ಸುಧಾರಣೆಗಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಮೊದಲ ಮಗುವಿಗೆ 2 ಕಂತುಗಳಲ್ಲಿ ಒಟ್ಟು 5,000 ಹಾಗೂ ಎರಡನೇ ಮಗು ಹೆಣ್ಣಾಗಿದ್ದರೆ ಒಂದೇ ಕಂತಿನಲ್ಲಿ 6,000 ಧನಸಹಾಯ ನೀಡಲಾಗುತ್ತದೆ. ಈ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತು ಪಡಿಸಿ, ಉಳಿದ ಅರ್ಹ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದು. ಎಂದು ತಿಳಿಸಿದರು.
ಸಭೆಯಲ್ಲಿ ಸೇಡಂ ಉಪವಿಭಾಗದ ಸಹಾಯಕ ಆಯುಕ್ತರಾದ ಪ್ರಭು ರೆಡ್ಡಿ ಹೆಚ್ಚುವರಿ ಎಸ್.ಪಿ. ಮಹೇಶ್ ಮೇಘಣ್ಣನವರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಡಿಯುಡಿಸಿ ಯೋಜನಾ ನಿರ್ದೇಶಕ ಮುನ್ನವರ ದೌವಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ್ ರಾಠೋಡ, ಡಿಎಚ್ಒ ಡಾ. ಶರಣಬಸಪ್ಪ ಕ್ಯಾತ್ನಾಳ, ಜಿಲ್ಲಾ ಸರ್ಜನ್ ರೂಕಿಯ್ಯ ಅಸ್ನ ರಬಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ,ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಿಡಿಪಿಒಗಳು,ಎನ್‍ಜಿಓ ಹಾಗೂ ವಿವಿಧ ಯೋಜನೆಗಳ ಮಿಷನ್ ಕೋಆರ್ಡಿನೇಟರ್‍ಗಳು ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading